ಬೆಂಗಳೂರು:ಯಾವುದೇ ಧರ್ಮದ ಪರಿಚಯ ಪಾಠಗಳನ್ನು ತೆಗೆದು ಹಾಕಿಲ್ಲ, ಈ ವಿಷಯದಲ್ಲಿ ಅನಗತ್ಯ ವಿವಾದ ಹುಟ್ಟುಹಾಕುವ ಅವಶ್ಯಕತೆ ಇಲ್ಲ ಎಂದು ಸಚಿವ ಸುರೇಶ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ಓದಿ: ವಿಜಯ್ ಹಜಾರೆ: 94 ಎಸೆತಗಳಲ್ಲಿ 173 ರನ್ ಚಚ್ಚಿದ ಇಶಾನ್ ಕಿಶನ್
6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪಾಠ 7 ರಲ್ಲಿದ್ದ ಹೊಸ ಧರ್ಮಗಳ ಉದಯ, ಬೌದ್ಧ ಧರ್ಮ ಮತ್ತು ಜೈನ ಧರ್ಮ ಇವುಗಳ ವಿಷಯವನ್ನು ಕೈಬಿಟ್ಟಿಲ್ಲ ಎಂದು ಸಚಿವ ಸುರೇಶ ಕುಮಾರ ಸ್ಪಷ್ಟಪಡಿಸಿದರು.
ಈ ಪೀಠಿಕೆಯ ಭಾಗವು ಅನಗತ್ಯ ಹಾಗೂ ಆರನೇ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯಾಂಶವೆನ್ನುವುದು ಅನೇಕರ ಅಭಿಪ್ರಾಯವಾಗಿದೆ. ಇದೇ ತರಗತಿಯ ಪಾಠ 6ರಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಕುರಿತಾದ ಪಠ್ಯದಲ್ಲಿ ಈ ಧರ್ಮಗಳ ಕುರಿತಾದ ಪರಿಚಯ ಪ್ರಯತ್ನದಲ್ಲಿ ಬೇರಾವುದೇ ಜಾತಿ/ಸಮುದಾಯ ಕುರಿತಂತೆ ಅವಹೇಳನಕಾರಿಯಾದ ಪೀಠಿಕಾ ಸ್ವರೂಪದ ಪರಿಚಯ ನೀಡಿರುವುದಿಲ್ಲ.
ಈ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಅವಲೋಕಿಸಿದ ಬಳಿಕ 6ನೇ ತರಗತಿಯ ಸಮಾಜ ವಿಜ್ಞಾನದ ಭಾಗ-1ರ ಪುಟ ಸಂಖ್ಯೆ 82 ಹಾಗೂ 83ರಲ್ಲಿರುವ “ಹೊಸ ಧರ್ಮಗಳು ಏಕೆ ಉದಯಿಸಲ್ಪಟ್ಟವು?" ಎಂಬ ಪಠ್ಯದ ಪೀಠಿಕಾ ಸ್ವರೂಪದ ಪರಿಚಯ ಅನಗತ್ಯ. ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯನ್ನು ಈ ಶೈಕ್ಷಣಿಕ ಸಾಲಿನಿಂದ ಕೈಬಿಡಲು ನಿರ್ಧರಿಸಿ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘವು ಸುತ್ತೋಲೆಯನ್ನು ಹೊರಡಿಸಿದೆ. ಆದರೆ, ಆ ಜೈನ ಧರ್ಮಗಳ ಪರಿಚಯ ಪಾಠಗಳಿಗೆ ಕೊಕ್ ನೀಡಲಾಗಿಲ್ಲ. ಆ ಪಾಠಗಳು ಪೂರ್ಣವಾಗಿ ಇವೆ ಅಂತ ತಿಳಿಸಿದ್ದಾರೆ.
ಅಲ್ಲದೇ ಸಾರ್ವಜನಿಕ ಶಿಕ್ಷಣ ಇಲಾಖೆಯ 1-10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ ವಿಷಯಗಳ ಕುರಿತು ಶಿಕ್ಷಕರು ಹಾಗೂ ತಜ್ಞರುಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಅವರಿಂದ ವರದಿ ಪಡೆದು ಕ್ರಮ ತೆಗೆದುಕೊಳ್ಳಲೂ ಉದ್ದೇಶಿಸಲಾಗಿದೆ.
2016-17ನೇ ಸಾಲಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೊಂಡಾಗಿನಿಂದ ಈ ಪಠ್ಯ ಜಾರಿಯಲ್ಲಿರುತ್ತದೆ. ಯಾವುದೇ ಸಮುದಾಯ ಭಾವನೆಗಳಿಗೆ ಧಕ್ಕೆ ತರಬಾರದು, ವಿಶೇಷವಾಗಿ ನಮ್ಮ ಮಕ್ಕಳಲ್ಲಿ ಅನಗತ್ಯ ದ್ವೇಷದ ಭಾವನೆಯನ್ನು ಬಿತ್ತಬಾರದೆನ್ನುವ ಕಾರಣಕ್ಕೆ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಬೌದ್ಧ, ಧರ್ಮ ಹಾಗೂ ಜೈನ ಧರ್ಮ, ಅಥವಾ ಇನ್ನಾವುದೇ ಧರ್ಮದ ಅವಹೇಳನವನ್ನು ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ.
ಈ ವಿಚಾರದಲ್ಲಿ ಅನಗತ್ಯ ವಿವಾದವನ್ನು ಹುಡುಕುವುದು ತರವಲ್ಲವೆಂದು ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ.