ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಜಗ್ಗಲ್ಲ ಬಗ್ಗಲ್ಲ ಅಂದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ: ಸಚಿವ ಸುನಿಲ್ ಕುಮಾರ್ - ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

ದೇಶದಲ್ಲಿ ತುರ್ತ ಪರಿಸ್ಥಿತಿ ಹೇರಿದ ಕಾಂಗ್ರೆಸ್​ನಿಂದ ಕಾನೂನಿನ ರಕ್ಷಣೆ ಆಗುತ್ತದೆ ಎಂದು ಯಾವತ್ತೂ ಅನ್ನಿಸಿಲ್ಲ. ಹೈಕೋರ್ಟ್ ಛೀಮಾರಿ ಬಳಿಕವೂ ಕಾಂಗ್ರೆಸ್​ನವರು ಜಗ್ಗಲ್ಲ, ಬಗ್ಗಲ್ಲ ಅಂದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್

By

Published : Jan 13, 2022, 12:55 PM IST

ಬೆಂಗಳೂರು: ಹೈಕೋರ್ಟ್ ಛೀಮಾರಿ ಬಳಿಕವೂ ಕಾಂಗ್ರೆಸ್​ನವರು ಜಗ್ಗಲ್ಲ, ಬಗ್ಗಲ್ಲ ಅಂದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಸುಮ್ಮನೆ ಇರುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ದೇಶದಲ್ಲಿ ತುರ್ತ ಪರಿಸ್ಥಿತಿ ಹೇರಿದ ಕಾಂಗ್ರೆಸ್​ನಿಂದ ಕಾನೂನಿನ ರಕ್ಷಣೆ ಆಗುತ್ತದೆ ಎಂದು ಯಾವತ್ತೂ ಅನ್ನಿಸಿಲ್ಲ. ಕಾನೂನು ಗೌರವಿಸಬೇಕು ಎಂದು ಕಾಂಗ್ರೆಸ್​ಗೆ ತಿಳಿದಿಲ್ಲ. ದೊಡ್ಡ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಕಾಂಗ್ರೆಸ್​ಗೆ ನಾಚಿಕೆಯಾಗಬೇಕು. ದೊಡ್ಡ ಪ್ರಮಾಣದಲ್ಲಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡಲ್ಲ ಅಂತಾದರೆ ಇವರಿಗೆ ಯಾರು ಗೌರವ ಕೊಡ್ತಾರೆ ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ‌ಮಾತನಾಡಿದ ಸಚಿವ ಸುನಿಲ್ ಕುಮಾರ್

ಕಾನೂನು, ಸರ್ಕಾರದ ಸುತ್ತೋಲೆಗಳಿಗೆ ಗೌರವ ಕೊಡುವುದಿಲ್ಲ ಅಂತಾದರೆ ಬೇರೆ ಯಾರಿಗೆ ಗೌರವ ಕೊಡ್ತಾರೆ. ಇವರ ನಾಯಕತ್ವದ ಮೇಲಾಟವೇ ಹೆಚ್ಚಾದ್ರೆ ಜನ ಇವರನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಬರುತ್ತದೆ. ಎಸ್ ಪಿ, ಮುಖ್ಯ ಕಾರ್ಯದರ್ಶಿ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ಅವರು ಜಗ್ಗಲ್ಲ ಬಗ್ಗಲ್ಲ ಅಂದ್ರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

ಕೋರ್ಟ್ ಛೀಮಾರಿ ಹಾಕಿದ ಬಳಿಕವೂ ಪಾದಯಾತ್ರೆ ನಿಲ್ಲಿಸಿಲ್ಲ ಅಂದರೆ ಸರ್ಕಾರಕ್ಕೆ ಏನು ಮಾಡಬೇಕೆಂದು ಗೊತ್ತು. ಸಿಎಂ ಹಾಗೂ ಗೃಹ ಸಚಿವರು ಸಭೆ ಮಾಡಿದ್ದಾರೆ. ಗೃಹ ಇಲಾಖೆ ತೀರ್ಮಾನ ಕೈಗೊಳ್ಳುತ್ತದೆ‌ ಎಂದರು.

ಓದಿ:ವೈಕುಂಠ ಏಕಾದಶಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಸಿಜೆಐ ಎನ್​ವಿ ರಮಣ

ABOUT THE AUTHOR

...view details