ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಕೊರೊನಾಗೆ ಮುಕ್ತಿ ಸಿಕ್ತು, ಸೋಂಕಿತರ ಸಂಖ್ಯೆ ಕಡಿಮೆ ಆಯ್ತು ಎನ್ನುವಾಗಲೇ ಯುಕೆ ಪ್ರಯಾಣಿಕರು ಮತ್ತೊಂದು ಕೊರೊನಾ ಬಾಂಬ್ ಸಿಡಿಸಿದ್ದಾರೆ.
ಕೊರೊನಾ ರೂಪಾಂತರ ತಳಿ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ಯಾ ಅನ್ನೋ ಸುದ್ದಿ ಇನ್ನೂ ಹಾಗೇ ಇದೆ. ಕೇಂದ್ರದಿಂದ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದರೆ ಇದ್ಯಾವುದು ಈಗ ಸರ್ಕಾರಕ್ಕೆ ಕಷ್ಟವಾಗಿಲ್ಲ, ಬದಲಿಗೆ ಯುಕೆ ಯಿಂದ ಬಂದ ಹಲವು ಪ್ರಯಾಣಿಕರು ತಮ್ಮ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ, ತಲೆಮರೆಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್, ಈಗಾಗಲೇ ಮಿಸ್ ಆಗಿರುವವರು ಸಿಕ್ಕಿಲ್ಲ. ಯುಕೆಯಿಂದ ಬಂದವರು ಸರ್ಕಾರದ ಜೊತೆ ಸಹಕರಿಸಬೇಕು. ಜವಾಬ್ದಾರಿಯುತ ನಾಗರಿಕರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಗೃಹ ಸಚಿವರ ಜೊತೆ ಮಾತನಾಡಿ ಇವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕ್ಯಾಬಿನೆಟ್ ಬಳಿಕ ಶಾಲಾರಂಭದ ಬಗ್ಗೆ ಮತ್ತೊಂದು ಸಭೆ