ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲುಗೆ ಈ ಬಾರಿ ಹೊಸ ಮಂತ್ರಿಮಂಡಲದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತವಾಗಿದೆ. ಬಿಜೆಪಿಯ ಹೈಕಮಾಂಡ್ ರಾಮುಲು ಅವರಿಗೆ ಈ ಬಗ್ಗೆ ಮಾತು ತಪ್ಪುವುದಿಲ್ಲವೆಂದು ವಾಗ್ದಾನ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿಯೇ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಪದವಿ ಸಿಗಬೇಕಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ
ಡಿಸಿಎಂ ಹುದ್ದೆ ನೀಡದೆ ಸಚಿವ ಸ್ಥಾನ ಮಾತ್ರ ನೀಡಲಾಗಿತ್ತು. ಈ ಬಗ್ಗೆ ರಾಮುಲು ಅವರು ಅಸಮಾಧಾನವನ್ನೂ ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಬಳಿ ತೋಡಿಕೊಂಡಿದ್ದರು.
ಕಳೆದ ಬಾರಿಯ ವಿಧಾನಸಭೆ ಚುನಾವಣೆ ವೇಳೆ ಮತ್ತು ಬಿಎಸ್ಆರ್ ಪ್ರಾದೇಶಿಕ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಬಿಜೆಪಿ ಸೇರುವಾಗ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಮತ್ತು ಯಡಿಯೂರಪ್ಪ ಅವರು ಡಿಸಿಎಂ ಭರವಸೆ ನೀಡಿದ್ದರು. ಈ ಸಂಗತಿಯನ್ನು ಸಚಿವ ರಾಮುಲು ಅವರು ತಮ್ಮ ಆಪ್ತ ರಾಜಕಾರಣಿಗಳಲ್ಲಿ ಹೇಳಿಕೊಂಡಿದ್ದರು. ನಂತರ ಮಭರವಸೆಯಂತೆ ಹೈಕಮಾಂಡ್ ನಡೆದುಕೊಳ್ಳದಿದ್ದಾಗ ಬೇಸರ ಕೂಡ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವವನ್ನು ಬದಲಾವಣೆ ಮಾಡಿರುವ ಹೈಕಮಾಂಡ್, ರಾಮುಲು ಅವರನ್ನು ಇತ್ತೀಚೆಗೆ ದೆಹಲಿಗೆ ಕರೆಸಿಕೊಂಡು ಯಡಿಯೂರಪ್ಪ ರಾಜೀನಾಮೆ ಬಳಿಕ ರಚನೆಯಾಗುವ ನೂತನ ಸರಕಾರದಲ್ಲಿ ನಿಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ. ಹೊಸ ಸರಕಾರಕ್ಕೆ ಸಹಕಾರ ನೀಡಿ ಎಂದು ಆಶ್ವಾಸನೆ ನೀಡಿ ಕಳಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ .
ಡಿಸಿಎಂ ಭರವಸೆ ಬಗ್ಗೆ ರಾಮುಲುಗೆ ಇನ್ನೂ ಅನುಮಾನ
ಸಚಿವ ಶ್ರೀ ರಾಮುಲುಗೆ ಈ ಬಾರಿ ಡಿಸಿಎಂ ಪೋಸ್ಟ್ ಖಚಿತ : ಹೈಕಮಾಂಡ್ ನಿಂದ ಖುದ್ದು ವಾಗ್ದಾನ
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿಯೇ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಪದವಿ ಸಿಗಬೇಕಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಡಿಸಿಎಂ ಹುದ್ದೆ ನೀಡದೆ ಸಚಿವ ಸ್ಥಾನ ಮಾತ್ರ ನೀಡಲಾಗಿತ್ತು. ಈ ಬಗ್ಗೆ ರಾಮುಲು ಅವರು ಅಸಮಾಧಾನವನ್ನೂ ಬಿಜೆಪಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಬಳಿ ತೋಡಿಕೊಂಡಿದ್ದರು
ಶ್ರೀರಾಮುಲುಗೆ ಡಿಸಿಎಂ ಪಟ್ಟ
ಹೈಕಮಾಂಡ್ ಸ್ಪಷ್ಟ ಭರವಸೆ ನೀಡಿದರೂ ಸಚಿವ ಶ್ರೀರಾಮುಲುಗೆ ಆಶ್ವಾಸನೆ ಬಗ್ಗೆ ಇನ್ನೂ ಅನುಮಾನ ಇದೆಯಂತೆ . ಈ ಹಿಂದೆ ಭರವಸೆ ಕೊಟ್ಟು ನಂತರ ಕೈಕೊಟ್ಟ ಕಹಿ ಅನುಭವದಿಂದ ತಮ್ಮ ಆಪ್ತರ ಬಳಿ ಬಿಜೆಪಿ ಪಕ್ಷದಲ್ಲಿ ಏನು ಬೇಕಾದರೂ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳಾಗಬಹುದು. ಉಪ ಮುಖ್ಯಮಂತ್ರಿ ಹುದ್ದೆ ಲಭಿಸಿ ಅಧಿಕಾರ ಸ್ವೀಕರಿಸಿದಾಗಲೇ ಅದು ಖಚಿತವೆಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.