ಬೆಂಗಳೂರು: ಪಾಲಿಕೆ ಸದಸ್ಯರ ಅನುದಾನದಡಿಯಲ್ಲಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಜಿಮ್ಅನ್ನು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.
ಸಾರ್ವಜನಿಕ ಜಿಮ್ ಉದ್ಘಾಟಿಸಿದ ಸಚಿವ ಗೋಪಾಲಯ್ಯ - Minister Gopalya inaugurated the Public Gym
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 75 ಶಂಕರ ಮಠದಲ್ಲಿನ ಕಾವೇರಿನಗರದ ತರಕಾರಿ ಮಾರುಕಟ್ಟೆ ಬಳಿಯ ಉದ್ಯಾನವನದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಶಿವರಾಜು ಅನುದಾನದಲ್ಲಿ ಸಾರ್ವಜನಿಕ ಜಿಮ್ ನಿರ್ಮಾಣವಾಗಿದೆ.
ಸಾರ್ವಜನಿಕ ಜಿಮ್ ಉದ್ಘಾಟಿಸಿದ ಸಚಿವ ಗೋಪಾಲಯ್ಯ
ನಂತರ ಮಾತನಾಡಿದ ಗೋಪಾಲಯ್ಯ, ದೈನಂದಿನ ಜೀವನದಲ್ಲಿ ಎಲ್ಲರೂ ಆರೋಗ್ಯವಾಗಿರಲು ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ವ್ಯಾಯಾಮದಂತಹ ಚಟುವಟಿಕೆ ನಡೆಸಬೇಕು. ಆಗಲೇ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸದಿಂದ ಇರುತ್ತದೆ.
ಸ್ವಚ್ಛ ಪರಿಸರ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಈ ಜಿಮ್ ನಿರ್ಮಿಸಲಾಗಿದೆ. ಎಲ್ಲರೂ ಇದರ ಸದಪಯೋಗವನ್ನು ಪಡೆದುಕೊಂಡು ಸದೃಢ ದೇಹ, ಆರೋಗ್ಯದಿಂದ ದಿನ ಕಳೆಯುವಂತೆ ಸಚಿವರು ಸಲಹೆ ನೀಡಿದ್ದಾರೆ.