ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಗಾಂಜಾ ಮಾರಾಟ: ಮೂವರು ವಿದೇಶಿ ಖದೀಮರು ಅಂದರ್​ - ಬೆಂಗಳೂರು ಅಪ್ಡೇಟ್‌

ಆರೋಪಿಗಳು ಸದಾನದಂದ ನಗರದ ಪಾರ್ಕ್ ಬಳಿ ಸಾರ್ವಜನಿಕವಾಗಿ ಡ್ರಗ್ಸ್​​ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಪೊಲೀಸರು ಮೂವರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.

Illegal marijuana sale: Arrest of three foreign nationals
ಮೂವರು ವಿದೇಶಿ ಪ್ರಜೆಗಳ ಬಂಧನ

By

Published : Oct 4, 2020, 8:57 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ​ ಪ್ರಕರಣವನ್ನು ಬೆನ್ನತ್ತಿರುವ ಸಿಸಿಬಿ ಪೊಲೀಸರ ಜೊತೆ ನಗರದ ಎಲ್ಲಾ ಪೊಲೀಸರು ಅಲರ್ಟ್ ಆಗಿದ್ದಾರೆ. ಹೀಗಿದ್ದರೂ ಕೂಡ ಐಟಿ ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಗಾಂಜಾ‌ ‌ಮಾರುತ್ತಿದ್ದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಆರೋಪಿಗಳು ಸದಾನದಂದ ನಗರದ ಪಾರ್ಕ್ ಬಳಿ ಸಾರ್ವಜನಿಕವಾಗಿ ಡ್ರಗ್ಸ್​​ ಮಾರಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಪೊಲೀಸರು ಮೂವರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಎ1 ಅಕ್ರೈಕ್ ಅಂಥೋನಿ ಅಕುಚುಕುವ, ಎ2 ಎಜೋಫೋಮ ಎಲೋಚುಕುವ, ಎ3 ಒಗ್ ಒಗ್ ಚುಕುವ ಫ್ರಾನ್ಸಿಸ್ ಬಂಧಿತ ಆರೋಪಿಗಳು.

ಮೂವರು ವಿದೇಶಿ ಪ್ರಜೆಗಳ ಬಂಧನ

ಪ್ರಕರಣದ ಮತ್ತೋರ್ವ ಆರೋಪಿ‌ ಡ್ರಗ್ ಪೆಡ್ಲರ್ ಜೋ ವಿರುದ್ಧ ಸಹ ದೂರು ದಾಖಲಾಗಿದೆ. ಪ್ರಕರಣದ ಆರೋಪಿ ಜೋ ನೈಜೀರಿಯಾದ ತಿರುಪುರ್ ನಿಂದ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಸದ್ಯ ಬಂಧಿತರಿಂದ ಸುಮಾರು 123 ಗ್ರಾಂ ಕೊಕೇನ್, 15 ಟ್ಯಾಬ್ಲೆಟ್ಸ್​, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳು, ಮೊಬೈಲ್ ಗಳು ಸೇರಿದಂತೆ ಒಟ್ಟು 10, 96,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ವಿದೇಶಿ ಪ್ರಜೆಗಳ ಬಂಧನ

ಹಾಗೆ ಬಂಧಿತರ ವಿರುದ್ಧ ಎನ್​ಡಿಪಿಎಸ್ ಆ್ಯಕ್ಟ್ 21 ಸಿ ಹಾಗೂ ವಿದೇಶಿ ನೋಂದಣಿ ಕಾಯ್ದೆಯಡಿ ಸಹ ಕೇಸ್ ದಾಖಲು ಮಾಡಲಾಗಿದೆ. ಬಂಧಿತ ಆರೋಪಿಗಳು ವಿದ್ಯಾರ್ಥಿ ಹಾಗೂ ವ್ಯಾಪಾರದ ವೀಸಾ ಪಾಸ್‌ಪೋರ್ಟ್ ಅಡಿ ಭಾರತಕ್ಕೆ ಬಂದಿದ್ದರು. ಬಂಧಿತ ಆರೋಪಿಗಳ ವೀಸಾ, ಪಾಸ್‌ಪೋರ್ಟ್ ಅವಧಿ ಮುಗಿದಿದ್ದರು ಇಲ್ಲೇ ಉಳಿದುಕೊಂಡಿದ್ದಾರೆ. ಹಾಗೆ ತಲೆಮರೆಸಿಕೊಂಡ ಪ್ರಕರಣದ ಪ್ರಮುಖ ಆರೋಪಿ ಜೋ ಎಂಬುವವನಿಗಾಗಿ ಬೈಯಪನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ವೆಂಕಟಚಲಪತಿ ಜಿ ಎನ್ ಅವರ ತಂಡ ಶೋಧ ಕಾರ್ಯ ಮುಂದುವರೆಸಿದೆ.

ABOUT THE AUTHOR

...view details