ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (ಬಿಎಂಆರ್ಸಿಎಲ್) ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 10 ಹುದ್ದೆಗಳಿವೆ. ನಿಯೋಜನೆ/ನೇರ ನೇಮಕಾತಿ ಆಧಾರದಡಿ ಭರ್ತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಹಾಕಬಹುದು.
ಹುದ್ದೆಗಳ ವಿವರ: ಮ್ಯಾನೇಜರ್ - 4, ಡೆಪ್ಯೂಟಿ ಜನರಲ್ ಮ್ಯಾನೇಜರ್ 6.
ವಿದ್ಯಾರ್ಹತೆ: ಬಿಇ/ಬಿ.ಟೆಕ್ ಪದವಿ.
ವಯೋಮಿತಿ: ಜನರಲ್ ಮ್ಯಾನೇಜರ್ ಹುದ್ದೆಗೆ 50 ವರ್ಷ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗೆ 45 ವರ್ಷ ವಯೋಮಿತಿ.
ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ ಆಯ್ಕೆ
ವೇತನ:ಜನರಲ್ ಮ್ಯಾನೇಜರ್ಗೆ 1,12,610- 1,60,620 ರೂ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗೆ 63,880- 1,22,540 ರೂ ವೇತನ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತರು ಜನರಲ್ ಮ್ಯಾನೇಜರ್ (ಎಚ್ಆರ್), ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು- 560027 ಇಲ್ಲಿಗೆ ಅರ್ಜಿ ಕಳುಹಿಸಿ.
ನವೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಡೆಯ ದಿನಾಂಕ ಡಿಸೆಂಬರ್ 15. ಹಾರ್ಡ್ ಕಾಪಿ ಸಲ್ಲಿಕೆಗೆ ಡಿಸೆಂಬರ್ 20 ಕಡೆ ದಿನ.
ಆರು ಮ್ಯಾನೇಜರ್ ಹುದ್ದೆ:ಇದರ ಹೊರತಾಗಿ ಬಿಎಂಆರ್ಸಿಎನಲ್ಲಿ ಸಿವಿಲ್, ಪಿ-ವೇ, ಆಪರೇಷನ್ಸ್ನ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ಹುದ್ದೆ ನೇಮಕಾತಿ ನಡೆಸಲಾಗುವುದು. ಸಿವಿಲ್, ಎಲೆಕ್ಟ್ರಾನಿಕ್ ಹುದ್ದೆಗೆ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕೆ ಮೆಟ್ರೋದಲ್ಲಿ 10 ವರ್ಷದ ಸೇವಾ ಅನುಭವ ಹೊಂದಿರಬೇಕಿದೆ. ಮೇಲ್ಕಂಡ ವಿಳಾಸಕ್ಕೆ ಆಫ್ಲೈನ್ ಮೂಲಕ ಡಿಸೆಂಬರ್ 22ರೊಳಗೆ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು english.bmrc.co.inಗೆ ಭೇಟಿ ನೀಡಿ.
ಇದನ್ನೂ ಓದಿ: ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ; 10 ನೇ ತರಗತಿ ಪಾಸ್ ಆಗಿದ್ರೆ ಅರ್ಜಿ ಸಲ್ಲಿಸಿ