ಕರ್ನಾಟಕ

karnataka

ETV Bharat / state

ಕುಡಿದ‌ ನಶೆಯಲ್ಲಿ ಸ್ನೇಹಿತರ ನಡುವೆ ಗಲಾಟೆ; ಓರ್ವನ ಕೊಲೆ

ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಕಾಲಿರಿಸಿ ಉಸಿರುಗಟ್ಟಿಸಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

By

Published : May 29, 2023, 6:51 AM IST

ಉಸಿರುಗಟ್ಟಿಸಿ ಕೊಲೆ
ಉಸಿರುಗಟ್ಟಿಸಿ ಕೊಲೆ

ಬೆಂಗಳೂರು : ಕುಡಿದ ನಶೆಯಲ್ಲಿ ಗೆಳೆಯರ ನಡುವೆ ಉಂಟಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ. ನಗರದ ಸಾದರಮಂಗಲದ ಕಾರ್ಮಿಕ ಶೆಡ್ ನಿವಾಸಿ ವೀರೇಂದ್ರ ಕುಮಾರ್ ಕೊಲೆಯಾದವರು. ಶುಕ್ರವಾರ ತಡರಾತ್ರಿ ಈ ಕೃತ್ಯ ನಡೆದಿದ್ದು, ಆರೋಪಿ ಮನೋಹರ್ ವರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿವರ: ಉತ್ತರ ಪ್ರದೇಶ ಮೂಲದ ವೀರೇಂದ್ರ ಕುಮಾರ್ ಮತ್ತು ಆರೋಪಿ ಮನೋಹರ್ ವರ್ಮಾ ಸ್ನೇಹಿತರು. ವೃತ್ತಿಯಲ್ಲಿ ಪೇಂಟರ್ ಆಗಿದ್ದ ಈ ಇಬ್ಬರು ಕಾಡುಗೋಡಿಯ ಸಾದರಮಂಗಲದಲ್ಲಿ ಕಾರ್ಮಿಕ ಶೆಡ್‌ನಲ್ಲಿ ನೆಲೆಸಿದ್ದರು. ಇಬ್ಬರು ಮದ್ಯವ್ಯಸನಿಗಳಾಗಿದ್ದು, ಶನಿವಾರ ರಾತ್ರಿ ಕಂಠ ಪೂರ್ತಿ ಮದ್ಯಪಾನ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ಬೈದುಕೊಂಡಿದ್ದಾರೆ.

ಇದನ್ನೂ ಓದಿ :ಟೈರ್​ ಸ್ಫೋಟಗೊಂಡು ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ಆರು ಜನರ ಸಾವು.. ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮನೋಹರ್ ವರ್ಮಾ ಏಕಾಏಕಿ ವೀರೇಂದ್ರ ಕುಮಾರ್‌ಗೆ ಮೇಲೆ ಹಲ್ಲೆ ಮಾಡಿದ್ದಾನೆ. ನೆಲಕ್ಕೆ ಕೆಡವಿ ಕುತ್ತಿಗೆ ಮೇಲೆ ಕಾಲಿರಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ತನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಾರ್ಮಿಕರ ಶೆಡ್‌ನಲ್ಲಿ ನಿದ್ದೆಗೆ ಜಾರಿದ್ದಾನೆ.

ಶನಿವಾರ ಬೆಳಗ್ಗೆ ವೀರೇಂದ್ರ ಕುಮಾರ್ ಎಚ್ಚರವಾಗಿಲ್ಲ. ಈ ಬಗ್ಗೆ ಅನುಮಾನಗೊಂಡ ಪಕ್ಕದ ಶೆಡ್‌ನ ಕಾರ್ಮಿಕರು ಬಂದು ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾಡುಗೋಡಿ ಪೊಲೀಸರು ಆರೋಪಿ ಮನೋಹರ್ ವರ್ಮಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಟಿ ವೃದ್ದೆ ಹತ್ಯೆಗೈದು ದರೋಡೆ :ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಬರ್ಬರವಾಗಿ ಹತ್ಯೆಗೈದು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಸಂಜೆ‌ ಮಹಾಲಕ್ಷ್ಮಿ ಲೇಔಟಿನಲ್ಲಿ ನಡೆದಿದೆ. ಕಮಲಮ್ಮ (80) ಹತ್ಯೆಗೀಡಾದ ವೃದ್ಧೆ. ಮೃತಳ ಪತಿ ಕಳೆದ ಆರು ತಿಂಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ಅವರು ಸಹ ಬೇರೆ ಬೇರೆ ಕಡೆ ವಾಸವಿದ್ದರಿಂದ ಕಮಲಮ್ಮ ಒಬ್ಬಂಟಿಯಾಗಿ ವಾಸವಿದ್ದು ಜೀವನ ನಡೆಸುತ್ತಿದ್ದರು.

ಶನಿವಾರ ಸಂಜೆ ಮನೆ ಪ್ರವೇಶಿಸಿರುವ ಹಂತಕರು‌ ವೃದ್ಧೆಯ ಕೈಕಾಲು‌ ಕಟ್ಟಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರನ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ‌.

ಇದನನ್ನೂ ಓದಿ :ಫ್ಲೈಓವರ್ ಮೇಲಿಂದ ಬಿದ್ದು ವ್ಯಕ್ತಿ ಸಾವು ಶಂಕೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ

ABOUT THE AUTHOR

...view details