ಕರ್ನಾಟಕ

karnataka

ETV Bharat / state

ಹುದ್ದೆ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ಎಲ್ಲವೂ ಸಿಗಬೇಕೆಂಬ ಆಸೆಯೂ ಇಲ್ಲ : ಮಲ್ಲಿಕಾರ್ಜುನ್ ಖರ್ಗೆ - ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ

ನಾನು ಹುದ್ದೆ ಸಿಗಲಿಲ್ಲ ಎಂದು ವ್ಯಥೆ ಪಟ್ಟವನಲ್ಲ. ಡೆಮಾಕ್ರಸಿ ಉಳಿಯಬೇಕಾದ್ರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು. ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕೂಡ ಬೇಡಿಕೆಯಿಟ್ಟಿಲ್ಲ. ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಇದ್ದಾರೆ. ಅದರ ಬಗ್ಗೆ ಹೈಕಮಾಂಡ್ ನಿಲುವು ತೆಗೆದುಕೊಳ್ಳಲಿದೆ..

Mallikarjuna Kharge
ಮಲ್ಲಿಕಾರ್ಜುನ ಖರ್ಗೆ

By

Published : Sep 12, 2020, 5:57 PM IST

ಬೆಂಗಳೂರು :ಮಹಾರಾಷ್ಟ್ರ ಉಸ್ತುವಾರಿಯಿಂದ ಕೈಬಿಟ್ಟಿದ್ದಾರೆಂಬ ಬೇಸರವಿಲ್ಲ. ಎಲ್ಲವೂ ನಮ್ಮ ಕೈಯಲ್ಲಿ ಇರೋದಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲವೂ ನನಗೆ ಸಿಗಬೇಕೆಂಬ ಆಸೆಯೂ ನನಗಿಲ್ಲ. ನಾನು ಒಂದು ಐಡಿಯಾಲಜಿ ಉಳ್ಳವನು. ನೆಹರು, ಅಂಬೇಡ್ಕರ್ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು. ಪಕ್ಷದ ಸಿದ್ಧಾಂತ ಅನುಷ್ಟಾನಕ್ಕೆ ತರಲು ಯಾರೇ ಇರಲಿ, ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾನು ಹುದ್ದೆ ಸಿಗಲಿಲ್ಲ ಎಂದು ವ್ಯಥೆ ಪಟ್ಟವನಲ್ಲ. ಡೆಮಾಕ್ರಸಿ ಉಳಿಯಬೇಕಾದ್ರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು. ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕೂಡ ಬೇಡಿಕೆಯಿಟ್ಟಿಲ್ಲ. ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಇದ್ದಾರೆ. ಅದರ ಬಗ್ಗೆ ಹೈಕಮಾಂಡ್ ನಿಲುವು ತೆಗೆದುಕೊಳ್ಳಲಿದೆ. ಹೈಕಮಾಂಡ್ ನಿಲುವಿಗೆ ನಾನು ತಲೆ ಬಾಗುವೆನು ಎಂದು ಹೇಳಿದ್ದಾರೆ.

ರಾಜ್ಯದಿಂದ ಎಐಸಿಸಿ ಜವಾಬ್ದಾರಿಯುತ ಸ್ಥಾನಕ್ಕೆ ನೇಮಕಗೊಂಡವರಿಗೆ ಅಭಿನಂದಿಸುತ್ತೇನೆ, ದಿನೇಶ್ ಗುಂಡೂರಾವ್, ಹೆಚ್ ಕೆ ಪಾಟೀಲ್, ಕೃಷ್ಣ ಬೈರೇಗೌಡ ಆಯ್ಕೆಗೆ ಸಮರ್ಥರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಆಯ್ಕೆಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಉತ್ತಮ ರಾಜಕೀಯ ನಾಯಕರು. ಅವರಿಂದ ಸಾಕಷ್ಟು ಕೊಡುಗೆ ನಿರೀಕ್ಷಿಸಬಹುದಾಗಿದೆ. ಅವರನ್ನು ಅಭಿನಂದಿಸುತ್ತೇನೆ. ಕೆ ಸಿ ವೇಣುಗೋಪಾಲ್ ಕೂಡ ಒಳ್ಳೆ ಸಂಘಟನೆ, ಪಕ್ಷದ ಪ್ರಗತಿಗೆ ಕೊಡುಗೆ ಕೊಟ್ಟಿದ್ದಾರೆ. ಅವರಿಗೂ ಅಭಿಂದಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details