ಕರ್ನಾಟಕ

karnataka

ETV Bharat / state

ಕ್ಷೇತ್ರದ ಬಡವರಿಗೆ 1,31,380 ಕಿಟ್​ ವಿತರಣೆ ಮಾಡಿಡಲಾಗಿದೆ.. ಶಾಸಕ ಅರವಿಂದ ಲಿಂಬಾವಳಿ - ಲಾಕ್ ಡೌನ್

ಲಾಕ್‌ಡೌನ್​ನಿಂದ ಪಿಜಿಗಳಲ್ಲಿ ಉಳಿದಿರುವ ಬಡವರಿಗೆ, ರಸ್ತೆ ಬದಿ ಇರುವವರಿಗೆ, ಕ್ಯಾಬ್ ಡ್ರೈವರ್​ಗಳಿಗೆ, ಗಾರ್ಮೆಂಟ್ ಕೆಲಸದವರಿಗೆ, ಮಂಗಳಮುಖಿ ಸೇರಿ ಎಲ್ಲರಿಗೂ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು 9 ಲಕ್ಷಕ್ಕೂ ಅಧಿಕ ಆಹಾರದ ಪೊಟ್ಟಣ ವಿತರಿಸಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.

food kit
food kit

By

Published : May 8, 2020, 10:19 AM IST

ಮಹದೇವಪುರ(ಬೆಂಗಳೂರು): ಮಹದೇವಪುರ ಕ್ಷೇತ್ರ ದೇಶದ ಸಿಲಿಕಾನ್ ವ್ಯಾಲಿಯಾಗಿದೆ. ಇಲ್ಲಿ ಸುಮಾರು 92,000ಕ್ಕೂ ಹೆಚ್ಚು ವಲಸಿಗ‌ ಕುಟುಂಬಗಳು ನೆಲೆಸಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಅವರಿಗೆಲ್ಲ ಯಾವುದೇ ರೀತಿ ತೊಂದರೆ ಆಗದಂತೆ ವಿಶೇಷ ಸವಲತ್ತುಗಳನ್ನು ನೀಡುವ ಮೂಲಕ ಸಹಕರಿಸಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಕ್ಷೇತ್ರದಲ್ಲಿ ಕಟ್ಟಡ ಕೂಲಿ ಕಾರ್ಮಿಕರು, ಮೂವತ್ತೈದು ಅನಾಥ ಆಶ್ರಮಗಳು, ಪಿಜಿಗಳು, ಬೇರೆ ರಾಜ್ಯಗಳಿಂದ ಆಸ್ಪತ್ರೆಗಳಿಗೆ ಬಂದು ಲಾಕ್‌ಡೌನ್ ಪ್ರಯುಕ್ತ ಹಿಂತಿರುಗಲು ಸಾಧ್ಯವಾಗದೆ ಇಲ್ಲೇ ಇರುವವರನ್ನು ಗುರುತಿಸಿ ಕಾಳಜಿವಹಿಸಲಾಗುತ್ತಿದೆ ಎಂದರು.

ದಿನಸಿ ಕಿಟ್ ವಿತರಣೆ ಮಾಡಿದ ಶಾಸಕರು..

ಲಾಕ್‌ಡೌನ್ ಆರಂಭದಿಂದಲೂ ಈವರೆಗೆ ಒಟ್ಟು 1,31,380 ದಿನಸಿ ಕಿಟ್​ಗಳನ್ನು ಅನಾಥಾಶ್ರಮಗಳಿಗೆ ವಿತರಿಸಲಾಗಿದೆ. ಅಲ್ಲದೇ 28,530 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಹತ್ತು ಕೆಜಿಯಷ್ಟು ತರಕಾರಿ ಹಾಗೂ ಹಣ್ಣುಗಳನ್ನು ವಿತರಿಸಲಾಗಿದೆ. ಲಾಕ್‌ಡೌನ್​ನಿಂದ ಪಿಜಿಗಳಲ್ಲಿ ಉಳಿದಿರುವ ಬಡವರಿಗೆ, ರಸ್ತೆ ಬದಿ ಇರುವವರಿಗೆ, ಕ್ಯಾಬ್ ಡ್ರೈವರ್​ಗಳಿಗೆ, ಗಾರ್ಮೆಂಟ್ ಕೆಲಸದವರಿಗೆ, ಮಂಗಳಮುಖಿ ಸೇರಿ ಎಲ್ಲರಿಗೂ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು 9 ಲಕ್ಷಕ್ಕೂ ಅಧಿಕ ಆಹಾರದ ಪೊಟ್ಟಣ ವಿತರಿಸಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಒಂಬತ್ತು ಕೊರೊನಾ ಪಾಸಿಟಿವ್ ಕೇಸ್‌ ಕಾಣಿಸಿವೆ. ಅವರಲ್ಲಿ ಎಂಟು ಜನರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ವಿದೇಶದಿಂದ ಬಂದವರು ಒಟ್ಟು 4,393 ಮಂದಿ ಇದ್ದಾರೆ. ಪ್ರಾಥಮಿಕ ಸಂಪರ್ಕಿತರು 84 ಮಂದಿ ಇದ್ದು, ಅವರಲ್ಲಿ 77 ಮಂದಿ ಕ್ವಾರಂಟೈನ್ ಅವಧಿ ಪೂರೈಸಿ ಮನೆಗೆ ಹಿಂತಿರುಗಿರುತ್ತಾರೆ. ಉಳಿದ 8 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ದ್ವಿತೀಯ ಸಂಪರ್ಕಿತರು 1,153 ಇದ್ದು, ಅವರಲ್ಲಿ 1,140 ಮಂದಿ ಮನೆಗಳಿಗೆ ಹಿಂದಿರುಗಿದ್ದಾರೆ. ಉಳಿದ 13 ಜನ ಕ್ವಾರಂಟೈನ್​ನಲ್ಲಿದ್ದಾರೆ. ಅವರನ್ನು ಹೋಟೆಲ್, ಹೋಮ್‌ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು.

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ವಯಂ ಸೇವಕ ಕಾರ್ಯಕರ್ತರು ಸೇರಿ ಹಲವರು ಉತ್ತಮ ಸಹಕಾರ ನೀಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಕು ಹರಡದಂತೆ ತಡೆಯಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಅಗತ್ಯ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಈ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ABOUT THE AUTHOR

...view details