ಬೆಂಗಳೂರು: ಮೈತ್ರಿ ಮುಂದುವರಿಕೆ ಸಂಬಂಧ ಕಾಂಗ್ರೆಸ್ ನಾಯಕರ ಜತೆ ಮಾತನಾಡಿಲ್ಲ. ಆ ಬಗ್ಗೆ ನಮ್ಮೊಂದಿಗೆ ಯಾವುದೇ ಚರ್ಚೆ ಇದುವರೆಗೂ ನಡೆದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಬಯಸಿದರೆ ಮೈತ್ರಿ ಮುಂದುವರಿಕೆಗೆ ಸಿದ್ಧ: ಕುಮಾರಸ್ವಾಮಿ
ಮೈತ್ರಿ ಮುಂದುವರಿಕೆ ಸಂಬಂಧ ಕಾಂಗ್ರೆಸ್ ನಾಯಕರ ಜತೆ ಮಾತನಾಡಿಲ್ಲ. ಆ ಬಗ್ಗೆ ನಮ್ಮೊಂದಿಗೆ ಯಾವುದೇ ಚರ್ಚೆ ಇದುವರೆಗೂ ನಡೆದಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈತ್ರಿ ಮುಂದುವರಿಕೆ ಬಗ್ಗೆ ಕಾಂಗ್ರೆಸ್ ಜತೆ ಮಾತಾಡಿಲ್ಲ: ಕುಮಾರಸ್ವಾಮಿ
ಈಗ ಅವರು ಫ್ರೀ ಇದ್ದಾರೆ, ನಾವೂ ಫ್ರೀ ಇದ್ದೇವೆ. ಮುಂದೆ ಮೈತ್ರಿ ಕೆಲಸ ಮಾಡುವುದಾದರೆ ಮತ್ತು ಮುಂದಿನ ದಿನಗಳಲ್ಲಿ ಅವರು ಸಹಕಾರ ಮಂದುವರಿಸುವುದಾದರೆ ಅವರೊಂದಿಗೆ ಕೈ ಜೋಡಿಲು ಸಿದ್ಧ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದವರು ಬೇಡ ಎಂದರೆ ನಾವು ನಮ್ಮ ಪಕ್ಷ ಬಲವರ್ಧನೆಯಲ್ಲಿ ತೊಡಗುತ್ತೇವೆ. ಇನ್ನು ಮುಂದೆ ಪಕ್ಷ ಕಟ್ಟುವಲ್ಲಿ ನಾವು ನಿರತವಾಗುತ್ತೇವೆ ಎಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.