ಬೆಂಗಳೂರು:ನಗರದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠಕ್ಕೆ ಭೇಟಿ ನೀಡಿದರು.
ವಿಜಯನಗರದ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಮಹಾಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

ಸಚಿವರೂ ಆಗಿರುವ ಕೃಷ್ಣ ಬೈರೇಗೌಡ ರಾಜ್ಯದ ಪ್ರಮುಖ ಒಕ್ಕಲಿಗ ನಾಯಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರತಿದಿನ ಒಂದೊಂದು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಮಾರ್ಗದರ್ಶನ, ಆಶೀರ್ವಾದ ಪಡೆದು ವಾಪಾಸಾಗುತ್ತಿದ್ದಾರೆ.
ಇದರಂತೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಚುನಾವಣೆ ಸಾಧ್ಯತೆಗಳು, ಬೆಳವಣಿಗೆಗಳು ಹಾಗೂ ಅನಿರೀಕ್ಷಿತವಾಗಿ ತಮಗೆ ಒಲಿದು ಬಂದಿರುವ ಈ ಅವಕಾಶದ ಕುರಿತು ಶ್ರೀಗಳ ಜೊತೆ ಹಂಚಿಕೊಂಡರು.