ಬೆಂಗಳೂರು: ಸರ್ಕಾರದ ವೈಫಲ್ಯತೆಯಿಂದ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಹೀಗೆಯೇ ಮುಂದುವರೆದರೆ ಕೆಲವೇ ದಿನಗಳಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜನಸಂಖ್ಯೆ ಹೆಚ್ಚಿರುವುದು ಮತ್ತು ನಿಯಂತ್ರಣದ ವೈಫಲ್ಯತೆಯಿಂದ ಸೋಂಕು ಹರಡುತ್ತಿದೆ. ಆದರೆ, ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಶ್ರೀಲಂಕಾ, ಅಫ್‌ಘಾನಿಸ್ತಾನ, ಭೂತಾನ್, ಚೀನಾ ನಮಗಿಂತ ಉತ್ತಮ ಸ್ಥಿತಿಯಲ್ಲಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಅಂಬಾನಿಗೆ ಮಣೆ:
ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನ ತಯಾರಿಸುವುದನ್ನು ಎಚ್ಎಎಲ್ ಕೈತಪ್ಪಿಸಿ ಅಂಬಾನಿ ತೆಕ್ಕೆಗೆ ಹಾಕಿದೆ. ಇದಕ್ಕಾಗಿ ಮೀಸಲಿರಿಸಿದ್ದ ಹಣವನ್ನು ಮೋದಿ ಖಾಲಿ ಮಾಡಿದ್ದಾರೆ. ರಾಷ್ಟ್ರದ ಸ್ವತ್ತನ್ನು ಖಾಸಗೀಕರಣಕ್ಕೆ ಒಪ್ಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಉದ್ಯೋಗ ಖಾತ್ರಿ ಯೋಜನೆ ಈಗ ಶ್ರೀರಕ್ಷೆಯಾಗಿದೆ. ವಿಶ್ವವೇ ಮೆಚ್ಚಿದ ಕ್ರಾಂತಿಕಾರಿ ಉದ್ಯೋಗ ಖಾತ್ರಿ ಯೋಜನೆಯನ್ನು ಮೋದಿ, ಯುಪಿಎ ಸರ್ಕಾರದ ಅತ್ಯಂತ ನಿಷ್ಪ್ರಯೋಜಕ ಯೋಜನೆ ಎಂದು ಈ ಹಿಂದೆ ಟೀಕಿಸಿದ್ದರು. ಅದೇ ಯೋಜನೆ ಈಗ ನಾಡಿನ ಶ್ರೀರಕ್ಷೆ. ಈ ತರಹ ಅನೇಕ ಸಾಮಾಜಿಕ ಬದಲಾವಣೆ ತರುವ ಕಾನೂನುಗಳು/ಕಾರ್ಯಕ್ರಮಗಳು ಯುಪಿಎ ಅವಧಿಯಲ್ಲಿ ಅನುಷ್ಠಾನಗೊಂಡಿವೆ. ಆದರೆ, ಪ್ರಚಾರ ಗಿಟ್ಟಿಸಿಕೊಳ್ಳಲಿಲ್ಲ ಎಂದು ಅವರು ತಿಳಿಸಿದ್ದಾರೆ.