ಕರ್ನಾಟಕ

karnataka

By

Published : Sep 7, 2019, 8:55 PM IST

ETV Bharat / state

ಸಿಎಂ ಪರಿಹಾರ ನಿಧಿಗೆ ಕೆಎಂಎಫ್ 2 ಕೋಟಿ, ವಿಆರ್​ಎಲ್​​​ನಿಂದ 1 ಕೋಟಿ ದೇಣಿಗೆ ಸಲ್ಲಿಕೆ

ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ, ವಿಆರ್​ಎಲ್ ಸಮೂಹ ಸಂಸ್ಥೆ, ಬ್ರಿಕ್ ವರ್ಕ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸಿವೆ.

ಸಿಎಂ ಪರಿಹಾರ ನಿಧಿಗೆ ಕೆಎಂಎಫ್​ನಿಂದ ದೇಣಿಗೆ ಸಲ್ಲಿಕೆ..!

ಬೆಂಗಳೂರು: ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ, ವಿಆರ್​ಎಲ್ ಸಮೂಹ ಸಂಸ್ಥೆ, ಬ್ರಿಕ್ ವರ್ಕ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಸಲ್ಲಿಕೆ ಮಾಡಿದವು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಹಾಮಂಡಲದ ನಿಯೋಗದ ಜೊತೆಯಲ್ಲಿ 2 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡಿದರು. ನೆರೆ ಪರಿಹಾರ ಕಾರ್ಯಾಚರಣೆಗೆ ಬಳಸಿಕೊಳ್ಳಲು‌ ಸಿಎಂ ಪರಿಹಾರ ನಿಧಿಗೆ ಈ ಹಣ ನೀಡಲಾಯಿತು. ನಂತರ ವಿಆರ್​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ್ ಸಂಕೇಶ್ವರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನು ಭೇಟಿಯಾಗಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ವಿಆರ್​ಎಲ್​ ಸಂಸ್ಥೆಯ ಸಿಎಸ್​​ಆರ್ ಫಂಡ್ ವತಿಯಿಂದ 1 ಕೋಟಿ ರೂ.ಗಳನ್ನು ಚೆಕ್ ಮೂಲಕ ನೀಡಿದರು.

ಸಿಎಂ ಪರಿಹಾರ ನಿಧಿಗೆ ಕೆಎಂಎಫ್​ನಿಂದ ದೇಣಿಗೆ ಸಲ್ಲಿಕೆ

ಬ್ರಿಕ್ ವರ್ಕ್ಸ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ವಿವೇಕ್ ಕುಲಕರ್ಣಿ ಕೂಡ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 9 ಲಕ್ಷ ರೂ. ದೇಣಿಗೆ ನೀಡಿದರು.

ABOUT THE AUTHOR

...view details