ಕರ್ನಾಟಕ

karnataka

ETV Bharat / state

ಸರಕು ಸಾಗಣೆಯಲ್ಲಿ ಭಾರತದ ಮುಂಚೂಣಿ ಮೆಟ್ರೊ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೆಐಎಎಲ್.... - ದಾಳಿಂಬೆ ಹಣ್ಣುಗಳ ಸರಕು ಸಾಗಣೆ

ಬೆಂಗಳೂರು ವಿಮಾನ ನಿಲ್ದಾಣ 17,212 ಮೆಟ್ರಿಕ್ ಟನ್‍ಗಳಷ್ಟು ಬೇಗನೆ ಹಾಳಾಗುವಂತಹ ಸರಕು ಸಾಗಣೆ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಏಪ್ರಿಲ್‍ನಿಂದ ಆಗಸ್ಟ್ 2020 ರವರೆಗಿನ ಅವಧಿಯಲ್ಲಿ ಕೆಐಎಎಲ್ ನಿಂದ 1,80,745 ಕಿಲೋಗ್ರಾಮ್‍ಗಳಷ್ಟು ದಾಳಿಂಬೆ ಹಣ್ಣುಗಳ ಸರಕು ಸಾಗಣೆ ಪ್ರಕ್ರಿಯೆಗಳನ್ನು ಕೈಗೊಂಡಿದೆ. ಇದರೊಂದಿಗೆ ಭಾರತದಿಂದ ಅತ್ಯಧಿಕ ದಾಳಿಂಬೆ ರಫ್ತು ಕೈಗೊಂಡ ಮುಂಚೂಣಿಯ ವಿಮಾನ ನಿಲ್ದಾಣವಾಗಿ ಬೆಂಗಳೂರು ವಿಮಾನ ನಿಲ್ದಾಣ ಹೊರಹೊಮ್ಮಿದೆ.

kial-airport-is-india-first-metro-station-in-freight-transport
ಸರಕು ಸಾಗಣೆಯಲ್ಲಿ ಭಾರತದ ಮೊದಲ ಮೆಟ್ರೊ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೆಐಎಎಲ್....

By

Published : Oct 21, 2020, 5:01 PM IST

ದೇವನಹಳ್ಳಿ: ಕೊರೊನಾ ವೈರಸ್ ಲಾಕ್ ಡೌನ್​ನಿಂದ ಸ್ಥಗಿತವಾಗಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೀಗ ಸರಕು ಸಾಗಣಿಕೆಯ ವೇಗ ಹೆಚ್ಚಿಸಿಕೊಂಡಿದೆ. ಇದರಿಂದ ಸರಕು ಸಾಗಣೆಯಲ್ಲಿ ಭಾರತದ ಮೊದಲ ಮೆಟ್ರೊ ನಿಲ್ದಾಣವೆಂಬ ಹೆಗ್ಗಳಿಕೆಗೆ ಕೆಐಎಎಲ್ ಪಾತ್ರವಾಗಿದೆ.

ಸರಕು ಸಾಗಣೆಯಲ್ಲಿ ಭಾರತದ ಮೊದಲ ಮೆಟ್ರೊ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೆಐಎಎಲ್....

ಸುಧಾರಿತ ಸಂಪರ್ಕ ಸಾಧ್ಯತೆ ಮತ್ತು ಪ್ಯಾಸೆಂಜರ್ ಟು ಕಾರ್ಗೊ (ಪಿ2ಸಿ) ವಿಮಾನಗಳ ಹಾರಾಟಗಳಲ್ಲಿ ಹೆಚ್ಚಳ, ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಸೀಮಾತೀತ ಸಂಸ್ಕರಣೆಗೆ ಅವಕಾಶ ಮಾಡುವಲ್ಲಿ ಕೈಗೊಂಡಿರುವ ಸಕ್ರಿಯ ಕ್ರಮಗಳು ಸರಕುಗಳ ಪ್ರಮಾಣವನ್ನು ಸಕಾರಾತ್ಮಕ ಮಟ್ಟಕ್ಕೆ ತಲುಪಿಸಲು ಅವಕಾಶ ಮಾಡಿಕೊಟ್ಟಿವೆ.

ಸರಕು ಸಾಗಣೆಯಲ್ಲಿ ಭಾರತದ ಮೊದಲ ಮೆಟ್ರೊ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾದ ಕೆಐಎಎಲ್....

ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ಹಾಗೂ 2020-21ರ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‍ಗಳು 1,31,603 ಮೆಟ್ರಿಕ್ ಟನ್‍ಗಳಷ್ಟು ಸರಕು ಸಂಸ್ಕರಣೆ ಪ್ರಕ್ರಿಯೆ ಕ್ರಮ ಕೈಗೊಂಡಿವೆ. ಸೆಪ್ಟೆಂಬರ್ ತಿಂಗಳಲ್ಲಿ 32,449 ಮೆಟ್ರಿಕ್ ಟನ್‍ಗಳಷ್ಟು ಸರಕು ಸಾಗಣೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಇದು ವರ್ಷದಿಂದ ವರ್ಷದ ಅವಧಿಯ ಬೆಳವಣಿಗೆಯನ್ನು ಶೇ. +0.3ಗಳಷ್ಟು ಸಕಾರಾತ್ಮಕ ವಲಯಕ್ಕೆ ಬೆಳೆಸಿದೆ. ಸೆಪ್ಟೆಂಬರ್ 2020ರಲ್ಲಿ ಅಂತಾರಾಷ್ಟ್ರೀಯ ಸರಕು ಸಾಗಣೆಯ ಪ್ರಮಾಣದಲ್ಲಿ ಶೇ.+4.5ರಷ್ಟು ಬೆಳವಣಿಗೆ ಕಂಡು ಬಂದಿದೆ. ಇದರಲ್ಲಿ ರಫ್ತು ಸರಕು ಸಾಗಣೆ ಪ್ರಕ್ರಿಯೆ ಬೆಳವಣಿಗೆ ಶೇ. +7.6ರಷ್ಟಿದೆ. ಇದೇ ಸಂದರ್ಭದಲ್ಲಿ ಸ್ಥಳೀಯ ಸರಕು ಸಾಗಣೆ ಚೇತರಿಕೆಯ ಹೋಲಿಕೆಯನ್ನು ಬಿಂಬಿಸಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ ಶೇ.-5.2ರಷ್ಟು ಕಡಿಮೆ ಇದೆ.

ಇದೇ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ 17,212 ಮೆಟ್ರಿಕ್ ಟನ್‍ಗಳಷ್ಟು ಬೇಗನೆ ಹಾಳಾಗುವಂತಹ ಸರಕು ಸಾಗಣೆ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಏಪ್ರಿಲ್‍ನಿಂದ ಆಗಸ್ಟ್ 2020 ರವರೆಗಿನ ಅವಧಿಯಲ್ಲಿ ಕೆಐಎಎಲ್ ನಿಂದ 1,80,745 ಕಿಲೋಗ್ರಾಮ್‍ಗಳಷ್ಟು ದಾಳಿಂಬೆ ಹಣ್ಣುಗಳ ಸರಕು ಸಾಗಣೆ ಪ್ರಕ್ರಿಯೆಗಳನ್ನು ಕೈಗೊಂಡಿದೆ. ಇದರೊಂದಿಗೆ ಭಾರತದಿಂದ ಅತ್ಯಧಿಕ ದಾಳಿಂಬೆ ರಫ್ತು ಕೈಗೊಂಡ ಮುಂಚೂಣಿಯ ವಿಮಾನ ನಿಲ್ದಾಣವಾಗಿ ಬೆಂಗಳೂರು ವಿಮಾನ ನಿಲ್ದಾಣ ಹೊರಹೊಮ್ಮಿದೆ.

ಲೋಗಿ ಕನೆಕ್ಟ್-ರೋಡ್ ಫೀಡರ್ ಸೇವೆಯನ್ನು ತಿರುಪುರ್, ಕೊಯಂಮತ್ತೂರು, ಆಂಬೂರ್, ಸೇಲಂ, ಇರೋಡ್, ಹೈದ್ರಾಬಾದ್ ಮತ್ತು ಚೆನ್ನೈ ಮುಂತಾದ ನಗರಗಳಿಗೆ ಸಂಪರ್ಕಕ್ಕಾಗಿ ನೀಡುವುದರೊಂದಿಗೆ ಬೆಳವಣಿಗೆಗೆ ಮತ್ತಷ್ಟು ಚಾಲನೆ ಲಭಿಸಿದ್ದು, ಇದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದ ಅಖಿಲ ಭಾರತ ಮಾರುಕಟ್ಟೆ ಪಾಲು ಶೇ.11ರಿಂದ ಶೇ.14ಕ್ಕೆ ಹೆಚ್ಚಿದೆ.

ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ.60ರಷ್ಟು ಪಾಲನ್ನು ಪ್ರಯಾಣಿಕರ ವಿಮಾನಗಳು ಸಾಗಿಸುತ್ತಿದ್ದವು. ಉಳಿದ ಭಾಗವನ್ನು ಸರಕು ಸಾಗಣೆ ವಿಮಾನಗಳು ಸಾಗಿಸುತ್ತಿದ್ದವು. ಲಾಕ್ ಡೌನ್ ಸಮಯದಲ್ಲಿ ಪ್ರಯಾಣಿಕರ ವಿಮಾನಗಳ ಹಾರಾಟ ಕಡಿಮೆ ಆಗಿದ್ದು, ಹಲವಾರು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳಾಗಿ (ಪಿ2ಸಿ) ಪರಿವರ್ತಿಸಿವೆ. ಇದರೊಂದಿಗೆ ಸರಕು ಸಾಗಣೆ ಸಾಮರ್ಥ್ಯ ಹೆಚ್ಚಾಗಿದೆ. ಇದರ ಫಲಿತಾಂಶವಾಗಿ ಬೆಂಗಳೂರು ವಿಮಾನ ನಿಲ್ದಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಸರಕು ಸಾಗಣೆ ವಿಮಾನಗಳ ಚಲನವಲನದಲ್ಲಿ ಶೇ.139ರಷ್ಟು ಬೆಳವಣಿಗೆ ದಾಖಲಿಸಿದೆ.

ABOUT THE AUTHOR

...view details