ಕರ್ನಾಟಕ

karnataka

ಕೆಇಎಯಿಂದ‌ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

By

Published : Aug 23, 2019, 11:42 PM IST

ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಸ್ಪರ್ಧಾತ್ಮಕ ಪರೀಕ್ಷೆಗೆ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಗಸ್ಟ್ 30ರಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಸೆಪ್ಟಬಂರ್ 8ರಂದು ಪರೀಕ್ಷೆ ನಡೆಯಲಿವೆ.

ವಿಧಾನಸೌಧ

ಬೆಂಗಳೂರು: ವಿವಿಧ ಇಲಾಖೆಗಳಿಂದ ಯುಪಿಎಸ್​ಸಿ, ಕೆಎಎಸ್, ಎಸ್​ಎಸ್​ಸಿ ಸೇರಿದಂತೆ‌ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಸರ್ಕಾರ ಆದೇಶಿಸಿದೆ.

ವಿಧಾನಸೌಧ

ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ‌ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ. ಸೆಪ್ಟಂಬರ್​ 8ರಂದು ಪರೀಕ್ಷೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಗಸ್ಟ್ 30ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಾಧಿಕಾರದ ವೆಬ್​ಸೈಟ್ kea.kar.nic.inನಿಂದ ಡೌನ್ ಲೋಡ್ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಬಂಧಿಸಿದ ಇಲಾಖೆಯ ವೆಬ್​ಸೈಟ್ ಅನ್ನು ನೋಡಬಹುದಾಗಿದೆ.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ,ಬಳ್ಳಾರಿ ,ಕಲಬುರಗಿ, ಧಾರವಾಡ,-ಹುಬ್ಬಳ್ಳಿ , ತುಮಕೂರು, ಮೈಸೂರು, ಮಂಗಳೂರು, ಶಿವಮೊಗ್ಗ ಸ್ಥಳಗಳಲ್ಲಿ ನಡೆಸಲಾಗುವುದು.

ವೇಳಾಪಟ್ಟಿ:

08-09-2019 (ಭಾನುವಾರ) ಯುಪಿಎಸ್ ಸಿ, ಕೆಎಎಸ್, ಗ್ರೂಪ್ - ಎ, ಬಿ ಮತ್ತು ಸಿ ಯ ಪರೀಕ್ಷೆಗಳು 100 ಅಂಕಕ್ಕೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ವರೆಗೆ ನಡೆಯಲಿದೆ. ಎಸ್​ಎಸ್​ಸಿ, ಆರ್​ಆರ್​ಬಿ, ಐಬಿಪಿಎಸ್, ಬ್ಯಾಂಕಿಂಗ್ ಪರೀಕ್ಷೆಗಳು ಮಧ್ಯಾಹ್ನ 2:30 ರಿಂದ 4:30 ರವರೆಗೆ 100 ಅಂಕಗಳಿಗೆ ನಡೆಯಲಿವೆ.

ABOUT THE AUTHOR

...view details