ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ಖಾಲಿ ಇರುವ ಉದ್ಯೋಗಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪ್ರೋಗ್ರಾಮರ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಕೆಇಎನಲ್ಲಿ 3 ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಸಿಎ, ಎಂಟೆಕ್, ಬಿಇ ಅಥವಾ ಬಿ.ಟೆಕ್, ಸಿ ಎಸ್ ಅಥವಾ ಐಟಿಯಲ್ಲಿ ಎಂ ಎಸ್ಸಿ ಶಿಕ್ಷಣ ಪಡೆದಿರುವ ಆಗಿರುವ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅನುಭವ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಪಿ, ಎನ್ಇಟಿ, ಆರ್ಡಿಬಿಎಂಎಸ್, ಎಸ್ಕ್ಯೂಎಲ್ ಸರ್ವರ್, ಒರಾಕಲ್, ಪಿಎಚ್ಪಿಯಲ್ಲಿ ಎರಡು ವರ್ಷದ ಹುದ್ದೆಯ ಅನುಭವ ಪಡೆದಿರಬೇಕು.
ಅಭ್ಯರ್ಥಿಗಳು ಇ- ಮೇಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. keaopportunities@gmail.com ಇ-ಮೇಲ್ಗೆ ಅಭ್ಯರ್ಥಿಗಳು ತಮ್ಮ ದಾಖಲೆಗಳು, ವಿದ್ಯಾರ್ಹತೆ ಮತ್ತು ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಮಾಹಿತಿಯ ರೆಸ್ಯೂಮ್ ಲಗತ್ತಿಸಿ. ಜೂನ್ 16ರೊಳಗೆ ಇ-ಮೇಲ್ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಲು ಅಭ್ಯರ್ಥಿಗಳ ವಯೋಮಿತಿ ನಿಗದಿಸಿಲ್ಲ.
ವಿಶೇಷ ಸೂಚನೆ: ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಲಿಕ. ಆರಂಭಿಕ ಗುತ್ತಿಗೆ ಅವಧಿ ಒಂದು ವರ್ಷವಾಗಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಗುತ್ತಿಗೆ ಅವಧಿಯನ್ನು ಮತ್ತೆ ಎರಡು ವರ್ಷಗಳ ಕಾಲ ಮುಂದುವರೆಸಲಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಇಒ ಪರೀಕ್ಷೆ ನಡೆಸಲಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಕುರಿತು ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ಮಾಹಿತಿ ರವಾನೆ ಮಾಡಲಾಗುತ್ತದೆ.
ಸಂಪೂರ್ಣ ಮಾಹಿತಿ, ಬೇಕಾಗಿರುವ ಅಗತ್ಯ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆಗೆkea.kar.nic.in ಅಥವಾ Kea Recruitment2023 ಅಲ್ಲಿ ಮಾಹಿತಿ ಪಡೆಯಿರಿ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ:ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರೊಜೆಕ್ಟ್ ಮ್ಯಾನೇಜ್ಮೆಂಟ್ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಅಧಿಸೂಚನೆ ಪ್ರಕಟಿಸಲಾಗಿದೆ. ಎರಡು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ಉದ್ಯೋಗ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ: ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಘಟಕದಲ್ಲಿ ಖಾಲಿ ಇರುವ ಒಂದು ಹಿರಿಯ ಸಿವಿಲ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಇ ಸಿವಿಲ್ ಇಂಜಿನಿಯರಿಂಗ್ನಲ್ಲಿ ಮೊದಲ ಶ್ರೇಣಿಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಗರಿಷ್ಠ ವಯೋಮಿತಿ 45 ವರ್ಷ. ಮಾಸಿಕ 75 ಸಾವಿರ ವೇತನ ನಿಗದಿಸಲಾಗಿದೆ.
ಅಭ್ಯರ್ಥಿ ಕನಿಷ್ಠ 12 ರಿಂದ 15 ವರ್ಷ ಸೇವಾ ಅನುಭವ ಹೊಂದಿರಬೇಕು. ಇ-ಮೇಲ್ ಮೂಲಕ ತಮ್ಮ ರೆಸ್ಯೂಮ್ ಕಳುಹಿಸಬೇಕು. ರೆಸ್ಯೂಮ್ ಕಳುಹಿಸಲು ಕಡೆಯ ದಿನಾಂಕ ಜುಲೈ 3. ಇ-ಮೇಲ್ ವಿಳಾಸ: pmu.cpiplanning@gmail.com.
ಇದನ್ನೂ ಓದಿ: ಕೊಡಗು ಸೈನಿಕ ಶಾಲೆಯಲ್ಲಿ ವಾರ್ಡ್ ಬಾಯ್ ಮತ್ತು ಸಮಾಲೋಚಕರ ಹುದ್ದೆ; ಇಲ್ಲಿದೆ ಮಾಹಿತಿ