ಕರ್ನಾಟಕ

karnataka

ETV Bharat / state

ಬಜೆಟ್ ಸಣ್ಣ ಕೈಗಾರಿಕೆಗಳಿಗೆ ನಿರಾಶಾದಾಯಕ: ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ - ಈಟಿವಿ ಭಾರತ ಕರ್ನಾಟಕ

ಖಾಸಗಿ ಕೈಗಾರಿಕೆಗಳು ಮೂಲಭೂತ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಅದನ್ನು ಬಜೆಟ್‌ನಲ್ಲಿ ಗುರುತಿಸಿ ನ್ಯಾಯ ನೀಡಬೇಕಿತ್ತು ಎಂದು ಕಾಸಿಯಾ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಹೇಳಿದ್ದಾರೆ.

Karnataka Small Scale Industries Association
ರಾಜ್ಯ ಬಜೆಟ್ ಸಣ್ಣ ಕೈಗಾರಿಕೆಗಳಿಗೆ ನಿರಾಶಾದಾಯಕ: ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ

By

Published : Feb 17, 2023, 10:32 PM IST

ಬೆಂಗಳೂರು: ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘಕ್ಕೆ (ಕಾಸಿಯಾ) ಬಜೆಟ್ ಮಿಶ್ರ ಚೀಲ. ಸೂಕ್ಷ್ಮ ಪ್ರಮಾಣದ ಕೈಗಾರಿಕೆಗಳಿಗೆ ಅವಕಾಶ ತಪ್ಪಿದೆ. ಹಾಗಾಗಿ ಇದು ಚುನಾವಣಾ ಪೂರ್ವ ಆಯವ್ಯಯ ಎಂದು ಕಾಸಿಯಾ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ತಿಳಿಸಿದರು. ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲು ಮಂಡಿಸಿರುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ಪರಿಗಣಿಸಿದಂತೆ ಎಂಎಸ್‌ಎಂಇಗಳಿಗೆ ಮೃದು ಸಾಲಗಳನ್ನು ಪರಿಗಣಿಸಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

ಕೈಗಾರಿಕೆಗಳು ಅದರಲ್ಲೂ ವಿಶೇಷವಾಗಿ ಎಂಎಸ್‌ಎಂಇಗಳು ಸಾಂಕ್ರಾಮಿಕ ಬಿಕ್ಕಟ್ಟಿನ ನಂತರದ ಪರಿಣಾಮ ಮತ್ತು ಇತರ ಹಲವಾರು ಕಠಿಣ ಸಮಸ್ಯೆಗಳಿಂದ ಬದುಕುಳಿಯುವುದು ಕಷ್ಟಕರವಾಗಿದೆ. ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯಾವುದೇ ನಿರ್ದಿಷ್ಟ ಹಂಚಿಕೆ ಇರುವುದಿಲ್ಲ ಎಂದು ವಿಷಾದಿಸಿದ್ದಾರೆ.

ಶೇ 90ಕ್ಕಿಂತ ಹೆಚ್ಚು ಉದ್ಯಮಿಗಳು ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮೂಲಭೂತ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಇದನ್ನು ಬಜೆಟ್‌ನಲ್ಲಿ ಗುರುತಿಸಿ ನ್ಯಾಯ ನೀಡಬೇಕಿತ್ತು. ಅಲ್ಲದೇ, ಕನಿಷ್ಠ ಎಂಎಸ್‌ಇಗಳಿಗೆ ಸಾಂಕ್ರಾಮಿಕ ಪರಿಣಾಮದಿಂದ ಸಂಪೂರ್ಣವಾಗಿ ಹೊರಬರುವವರೆಗೆ ವಿದ್ಯುತ್ ದರ ಹೆಚ್ಚಿಸುವುದಿಲ್ಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಧಿಸುವ ಒಪ್ಪಿಗೆ ಶುಲ್ಕ ಕಡಿಮೆ ಮಾಡುವುದಿಲ್ಲ ಎಂಬ ಭರವಸೆಯನ್ನು ಸೇರಿಸಬಹುದಿತ್ತು ಎಂದು ಹೇಳಿದ್ದಾರೆ.

ನಾಲ್ಕು ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳಾಗಿ ಸೂಚಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಒದಗಿಸಬೇಕಾದ ಅಗತ್ಯ ಅನುದಾನದ ವಿವರಗಳನ್ನು ನೀಡದಿರುವುದು ಬಟೆಜ್ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸುತ್ತದೆೆ. ಬೆಂಗಳೂರು ನಗರದ ಸುತ್ತ ಮುತ್ತ ಕೈಗಾರಿಕೆಗಳಿಗೆ ವಾಸ್ತವಿಕವಾಗಿ ಯಾವುದೇ ಭೂಮಿ ಲಭ್ಯವಿಲ್ಲದಿರುವಾಗ ಬೆಂಗಳೂರಿನ ಸುತ್ತಲೂ ವಿಶ್ವ ದರ್ಜೆಯ ಪ್ಲಗ್ ಮತ್ತು ಪ್ಲೇ ಕೈಗಾರಿಕಾ ಪಾರ್ಕ್​ಳನ್ನು ಸ್ಥಾಪಿಸುವ ಪ್ರಸ್ತಾಪದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ.

9 ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವ ಪ್ರಸ್ತಾಪವೂ ಹೊಸದಲ್ಲ ಮತ್ತು ಸರ್ಕಾರದ ಹಿಂದಿನ ಭರವಸೆಗಳ ಪುನರಾವರ್ತನೆಯಾಗಿದೆ. ರಾಜ್ಯದ 25 ಸ್ಥಳಗಳಲ್ಲಿ ಮೆಗಾ ಮತ್ತು ಮಿನಿ ಜವಳಿ ಪಾರ್ಕ್​ಗಳನ್ನು ಸ್ಥಾಪಿಸುವ ನಿರ್ಧಾರವು ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಇದು ನಮ್ಮ ಪೂರ್ವ-ಬಜೆಟ್ ಮೆಮೊರಾಂಡಮ್‌ನಲ್ಲಿ ನಾವು ಸೂಚಿಸಿದಂತೆ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. 30 ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಅತ್ಯಾಧುನಿಕ ಸ್ಟಾರ್ಟ್ ಅಪ್ ಪಾರ್ಕ್ ಬೆಂಗಳೂರಿನ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗೆ ಮತ್ತಷ್ಟು ಸೇರ್ಪಡೆಯಾಗಲಿದೆ. ಕರ ಸಮಾಧಾನ ಯೋಜನೆಯನ್ನು ವಿಸ್ತರಿಸಬೇಕೆಂಬ ನಮ್ಮ ಮನವಿಯನ್ನು ಮುಖ್ಯಮಂತ್ರಿಗಳು ಭಾಗಶಃ ಒಪ್ಪಿಕೊಂಡಿದ್ದಾರೆ ಎಂದು ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ಶೇ 4 ರಲ್ಲಿ ಮೃದು ಸಾಲ ಸೌಲಭ್ಯವನ್ನು 2.00 ಕೋಟಿ ರೂ.ಗಳಿಂದ 5.00 ಕೋಟಿ ರೂ.ಗಳಿಗೆ. ವೃತ್ತಿ ತೆರಿಗೆ ವಿನಾಯಿತಿ ಮಿತಿಯನ್ನು 15,000 ರಿಂದ 25,000 ಕ್ಕೆ ವಿಸ್ತರಿಸುವ ತಿದ್ದುಪಡಿಯನ್ನು ಕಾಸಿಯಾ ತನ್ನ ಬಜೆಟ್ ಪೂರ್ವ ಜ್ಞಾಪಕ ಪತ್ರದಲ್ಲಿ ಮಾಡಿದ ಮತ್ತೊಂದು ಸಲ್ಲಿಕೆಯಾಗಿದ್ದು, ಇದು ಮಧ್ಯಮ ವರ್ಗದ ಕಾರ್ಮಿಕರಿಗೆ ಪರಿಹಾರ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಈ ಬಜೆಟ್​ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್​ಡಿಕೆ

ABOUT THE AUTHOR

...view details