- ರಾಜ್ಯವಾರು ಮಳೆಯ ಹಂಚಿಕೆಯ ವಿವರ ಈ ಕೆಳಗಿನಂತಿದೆ
- ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ರಾಜಸ್ಥಾನ, ಸಿಕ್ಕಿಂ ರಾಜ್ಯಗಳಲ್ಲಿ ಅತೀ ಹೆಚ್ಚು ಮಳೆ
- ಕರ್ನಾಟಕದಲ್ಲೇ ಶೇ.20 ರಷ್ಟು ಮಳೆ ದಾಖಲು
- ಮಹಾಮಳೆಗೆ ರಾಜ್ಯದಲ್ಲಿ ಇಲ್ಲಿಯವರೆಗೂ 31 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಮಳೆ ಅವಾಂತರಕ್ಕೆ 31 ಬಲಿ: ವೈಮಾನಿಕ ಸಮೀಕ್ಷೆ ನಡೆಸಲಿರುವ ಕೇಂದ್ರ ಗೃಹ ಸಚಿವ
23:39 August 10
ಭಾರತದಾದ್ಯಂತ ಜಲ ಕಂಟಕ ಸೃಷ್ಟಿಸಿದ ವರುಣ
23:17 August 10
ಕೃಷ್ಣಾ ನದಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಕರುವನ್ನು ರಕ್ಷಿಸಿದ ಗ್ರಾಮಸ್ಥ
- ಕೃಷ್ಣಾ ನದಿಯಲ್ಲಿ ಪ್ರವಾಹದಲ್ಲಿ ಸಿಲಿಕಿದ್ದ ಎಮ್ಮೆ ಕರು ರಕ್ಷಣೆ
- ನದಿಯಲ್ಲಿ ಒದ್ದಾಡುತ್ತಿದ್ದ ಕರುವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
- ತಮ್ಮ ಜೀವವನ್ನೂ ಲೆಕ್ಕಿಸದೆ ಕರುವನ್ನು ಕಾಪಾಡಿದ ಅಥಣಿಯ ಜುಂಜರವಾಡ ಗ್ರಾಮಸ್ಥ ಗೋಪಾಲ್
23:12 August 10
ಕೆಆರ್ಎಸ್ಗೆ ಒಳ ಹರಿವಿನ ಪ್ರಮಾಣ ಹೆಚ್ಚಳ: 1 ಲಕ್ಷ ಕ್ಯೂಸೆಕ್ ನೀರು ನದಿಗೆ
- ಕೆಆರ್ಎಸ್ಗೆ ಒಳ ಹರಿವಿನ ಪ್ರಮಾಣ ಹೆಚ್ಚಳ
- ಈ ಹಿನ್ನೆಲೆ ರಾತ್ರಿ 10 ಗಂಟೆಗೆ 1,06,594 ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ
- ಮಧ್ಯರಾತ್ರಿ ವೇಳೆ ಇದು 1.70 ಲಕ್ಷ ಕ್ಯೂಸೆಕ್ ತಲುಪುವ ಸಾಧ್ಯತೆ ಇದೆ
- ಪ್ರಸ್ತುತ ಕೆಆರ್ಎಸ್ ಒಳ ಹರಿವು 1,60,191 ಕ್ಯೂಸೆಕ್ ಇದ್ದು, 116.40 ಅಡಿ ತುಂಬಿದೆ
23:01 August 10
ನಾರಾಯಣಪುರ ಜಲಾಶಯದಿಂದ ನೀರು ಹೊರ ಹರಿವು: ಗಂಜಿ ಕೇಂದ್ರಕ್ಕೆ ಗ್ರಾಮಸ್ಥರ ಸ್ಥಳಾಂತರ
- ನಾರಾಯಣಪುರ ಜಲಾಶಯದಿಂದ 5 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಹರಿವು
- ನೀರು ಹರಿಬಿಟ್ಟ ಕಾರಣ ಗುರ್ಜಾಪುರದ ಸುಮಾರು 280 ಜನ, ಅರಶಣಗಿ ಗ್ರಾಮದ ನದಿಗಡ್ಡೆಯ 15ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರ
- ಜೆಗರ್ಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ
- ಉಟ್ಟ ಬಟ್ಟೆಯಲ್ಲೇ ಕೆಲ ಧಾನ್ಯಗಳೊಂದಿಗೆ ಪೆಟ್ಟಿಗೆ ಹಿಡಿದುಕೊಂಡು ಸದರಿ ಗಂಜಿ ಕೇಂದ್ರಕ್ಕೆ ತೆರಳಿದ ಗ್ರಾಮಸ್ಥರು
- ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಹರಸಾಹಸ ಪಟ್ಟ ಅಧಿಕಾರಿಗಳು
- ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ನೋಡಲ್ ಅಧಿಕಾರಿಗಳು, ಮಿಲಿಟರಿ ಸಿಬ್ಬಂದಿಗಳು ಭಾಗಿ
21:51 August 10
- ಮಳೆಯ ಆರ್ಭಟಕ್ಕೆ ಹುಬ್ಬಳ್ಳಿಯ ರುದ್ರಾಕ್ಷಿ ಮಠದ ಗೋಡೆ ಕುಸಿತ
- ಗೋಡೆ ಕುಸಿದ ಪರಿಣಾಮ ಬೈಕ್ ಜಖಂ
- ಸ್ಥಳಕ್ಕೆ ಮಠದ ಸ್ವಾಮೀಜಿಗಳು, ಪೊಲೀಸರು ಭೇಟಿ, ಪರಿಶೀಲನೆ
21:44 August 10
ಬೆಳಗಾವಿಯಲ್ಲಿ ಮುಂದುವರೆದ ರಕ್ಷಣಾ ಕಾರ್ಯ: 37 ಸಂತ್ರಸ್ತರ ರಕ್ಷಣೆ
ಹೆಲಿಕಾಪ್ಟರ್ ಮೂಲಕ ಭಾರತೀಯ ವಾಯುದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ
ಒಟ್ಟು 37 ಪ್ರವಾಹ ಪೀಡಿತರ ರಕ್ಷಣೆ
ಕೃಷ್ಣಾ, ಮಲಪ್ರಭಾ ಹಾಗೂ ಬೆಣ್ಣಿಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರು
ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ವಾಯುದಳ ಸಿಬ್ಬಂದಿಗಳು
21:35 August 10
ಗದಗದ ನರಗುಂದ ತಾಲೂಕಿನಲ್ಲಿ ನಾಳೆ ಪರಿಹಾರ ಕಾರ್ಯಾಚರಣೆ
- ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ಮುಳಗಡೆಯಾದ ನರಗುಂದ, ರೋಣ ತಾಲೂಕಿನ ಗ್ರಾಮಗಳು
- ನಾಳೆ ನರಗುಂದ ತಾಲೂಕಿನಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲಿರುವ ಗದಗ ಜಿಲ್ಲಾಡಳಿತ
- ಈ ಹಿನ್ನೆಲೆ ನಾಳೆ, ನಾಡಿದ್ದು ನರಗುಂದದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಡಿಸಿ ಎಂ.ಜಿ.ಹಿರೇಮಠ್ ಆದೇಶ
21:19 August 10
ರಾಯಚೂರು: ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬಂದ ಹೆಲಿಕ್ಪಾಟರ್
ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬಂದ ಹೆಲಿಕ್ಪಾಟರ್
ಲಿಂಗಸೂಗೂರು ತಾಲೂಕಿನ ಕಡದರಗಡ್ಡಿ ಗ್ರಾಮದ 16 ಕುಟುಂಬಗಳನ್ನ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರ
ಮೊದಲು ಸ್ಥಳಾಂತರಕ್ಕೆ ಒಪ್ಪದ ಗ್ರಾಮಸ್ಥರು
ಬಳಿಕ ಗ್ರಾಮಸ್ಥರ ಮನವೊಲಿಸಿದ ಲಿಂಗಸೂಗೂರು ಪಿಎಸ್ಐ
20:55 August 10
ಧಾರವಾಡ ಜಿಲ್ಲೆಯ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ
- ಧಾರವಾಡ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ಆಶ್ರಯ
- ಸುಮಾರು 40,363 ಸಂತ್ರಸ್ತರಿಗೆ 106 ಪರಿಹಾರ ಕೇಂದ್ರಗಳಲ್ಲಿ ಆಶ್ರಯ
- ಒಟ್ಟು 6366 ಮನೆಗಳಿಗೆ ಹಾನಿ, 21 ಗ್ರಾಮಗಳು ಜಲಾವೃತ
- ಈಗಾಗಲೇ 2055 ಮನೆಗಳಿಗೆ 1 ಕೋಟಿ 31 ಲಕ್ಷ ರೂ. ಪರಿಹಾರ ಘೋಷಣೆ
- ಉಳಿದ ಮನೆಗಳ ಪರಿಹಾರದ ಚೆಕ್ಗಳು ಸಿದ್ಧವಾಗುತ್ತಿವೆ
- ಇದುವರೆಗೂ ಮೂರು ಜನರು, 151 ಜಾನುವಾರುಗಳು ಸಾವು
- ಒಟ್ಟು 86,651 ಹೆಕ್ಟೇರ್ ಕೃಷಿ ಭೂಮಿ ನಾಶ
- ಎನ್ಡಿಆರ್ಎಫ್ ಮಾನದಂಡದ ಪ್ರಕಾರ ಸುಮಾರು 58 .91 ಕೋಟಿ ರೂ. ಬೆಳೆಹಾನಿ
- 12.51 ಕೋಟಿ ರೂ.ಮೌಲ್ಯದ 18426 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿ
- 413 ಕಿ.ಮೀ.ರಸ್ತೆ, 47 ಸೇತುವೆಗಳು, 19 ಕೆರೆಗಳು, 71 ಕಾಲುವೆಗಳು, 150 ಅಂಗನವಾಡಿ ಕೇಂದ್ರಗಳು ಹಾನಿಗೊಳಗಾಗಿವೆ
20:36 August 10
ಮೈಸೂರು: ನಂಜುಂಡೇಶ್ವರನಿಗೂ ಜಲದಿಗ್ಬಂಧನ
- ತುಂಬಿ ಹರಿಯುತ್ತಿರುವ ನಂಜನಗೂಡು ತಾಲೂಕಿನ ಕಪಿಲಾ ಸೇತುವೆ
- ಜಲದಿಗ್ಬಂಧನದಲ್ಲಿ ನಂಜುಂಡೇಶ್ವರ ದೇವಾಲಯ
- ಸಂಪೂರ್ಣವಾಗಿ ಮುಳುಗಿದ ಕಪಿಲಾ ನದಿಯಲ್ಲಿರುವ ಐತಿಹಾಸಿಕ ಹದಿನಾರು ಕಾಲು ಮಂಟಪ
- ಕೇರಳದ ವಯನಾಡಿನಲ್ಲಿ ಅಬ್ಬರದ ಮಳೆ ಹಿನ್ನೆಲೆ ತುಂಬು ತುಳುಕುತ್ತಿರುವ ಕಬಿನಿ ಜಲಾಶಯ
- ಕಬಿನಿ ಜಲಾಶಯದ ನೀರಿಗೆ ಗ್ರಾಮಗಳು, ಸೇತುವೆಗಳು, ದೇವಸ್ಥಾನಗಳು ಜಲಾವೃತ
- ಕಬಿನಿ ಪ್ರವಾಹದಿಂದ ನಂಜನಗೂಡು ಪಟ್ಟಣಕ್ಕೆ ನೀರು ನುಗ್ಗಿರುವ ದೃಶ್ಯ ದ್ರೋಣ್ ಕ್ಯಾಮರಾದಲ್ಲಿ ಸೆರೆ
20:26 August 10
ಹಾಸನದ ಜಲಾಶಯಗಳಿಗೆ ಒಳಹರಿವು ಹೆಚ್ಚಳ
- ಹಾಸನ ಜಿಲ್ಲೆಯ ಮೂರು ಜೀವನದಿಗಳ ಜಲಾಶಯಗಳಿಗೆ ಒಳಹರಿವು ಹೆಚ್ಚಳ
- ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯಗಳು
- ಮೂರು ಜಲಾಶಯಗಳ ಕ್ರಸ್ಟ್ ಗೇಟ್ಗಳ ಮೂಲಕ ನೀರು ಹರಿಬಿಡಲಾಗುತ್ತಿದೆ
20:09 August 10
ವರದಾ ನದಿಯಲ್ಲಿ ಹೆಚ್ಚಿದ ಪ್ರವಾಹ: ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತ
- ಉತ್ತರ ಕನ್ನಡದ ವರದಾ ನದಿ ಪ್ರವಾಹ ಭಾರಿ ಪ್ರಮಾಣದಲ್ಲಿ ಏರಿಕೆ
- ನದಿ ಪಾತ್ರದ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತ
- ಮೊಗಳ್ಳಿ-ಹೊಸ್ಕೇರಿ, ಭಾಸಿ- ಮೊಗಳ್ಳಿ, ಬನವಾಸಿ- ಅಜ್ಜರಣಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತ
- ನದಿಯಂಚಿನ ಸುಮಾರು 4-5 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತ
- ಭತ್ತ, ಅನಾನಸ್, ಅಡಿಕೆ, ಬಾಳೆ ಮತ್ತು ಶುಂಠಿ ಬೆಳೆಗಳು ನಾಶ
- ಕ್ಷಣಕ್ಷಣಕ್ಕೂ ಜಲಾವೃತವಾಗುತ್ತಿರುವ ಮನೆ, ಜಮೀನುಗಳು
- ಸ್ಥಳಕ್ಕೆ ಅನರ್ಹ ಶಿವರಾಮ ಹೆಬ್ಬಾರ್ ಭೇಟಿ, ಪರಿಶೀಲನೆಉತ್ತರ ಕನ್ನಡದ ವರದಾ ನದಿ ಪ್ರವಾಹ ಭಾರಿ ಪ್ರಮಾಣದಲ್ಲಿ ಏರಿಕೆ
- ನದಿ ಪಾತ್ರದ ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತ
- ಮೊಗಳ್ಳಿ-ಹೊಸ್ಕೇರಿ, ಭಾಸಿ- ಮೊಗಳ್ಳಿ, ಬನವಾಸಿ- ಅಜ್ಜರಣಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತ
- ನದಿಯಂಚಿನ ಸುಮಾರು 4-5 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತ
- ಭತ್ತ, ಅನಾನಸ್, ಅಡಿಕೆ, ಬಾಳೆ ಮತ್ತು ಶುಂಠಿ ಬೆಳೆಗಳು ನಾಶ
- ಕ್ಷಣಕ್ಷಣಕ್ಕೂ ಜಲಾವೃತವಾಗುತ್ತಿರುವ ಮನೆ, ಜಮೀನುಗಳು
- ಸ್ಥಳಕ್ಕೆ ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಭೇಟಿ, ಪರಿಶೀಲನೆ
20:08 August 10
ಬೆಳಗಾವಿ: ಸಂತ್ರಸ್ತರ ರಕ್ಷಣೆಗೆ ಹೋದ ತಹಶೀಲ್ದಾರ್ ಮತ್ತು ಡಿಎಸ್ಪಿಗೆ ಜಲದಿಗ್ಬಂಧನ
- ಪ್ರವಾಹ ಪೀಡಿತ ಪ್ರದೇಶಗಳನ್ನ ಶಿಪ್ಟ್ ಮಾಡಲು ಹೋದಾಗ ಘಟನೆ
- ಮಲಪ್ರಭಾ ನದಿ ನೀರು ಬಂದು ಗುಡ್ಡದಲ್ಲಿ ಸಿಲುಕಿಹಾಕಿಕೊಂಡ ರಾಮದುರ್ಗ ತಹಶೀಲ್ದಾರ್ ಬಸವರಾಜ್ ಕೋಟುರ
- ಇದೀಗ ಓಬಳಾಪೂರ ಗುಡ್ಡದ ಮೇಲೆ ಸುರಕ್ಷಿತವಾಗಿರುವ ತಹಶೀಲ್ದಾರ್ ಮತ್ತು ಡಿಎಸ್ಪಿ
- ಬೆಳಗಾವಿ ಜಿಲ್ಲೆಯ ರಾಮದುರ್ಗ ಜಿಲ್ಲೆಯ ಓಬಳಾಪುರ ಗುಡ್ಡ
- ಸದ್ಯ ನಿರಾಶ್ರಿತರ ಜತೆಗೆ ಸುರಕ್ಷಿತವಾಗಿರುವ ಅಧಿಕಾರಿಗಳು
19:55 August 10
ನಾಳೆ ರಾಜ್ಯಕ್ಕೆ ಅಮಿತ್ ಶಾ ಭೇಟಿ
- ನೆರೆಹಾವಳಿ ಪರಿಸ್ಥಿತಿ ವೀಕ್ಷಣೆಗೆ ನಾಳೆ ರಾಜ್ಯಕ್ಕೆ ಅಮಿತ್ ಶಾ ಆಗಮನ
- ನಾಳೆ ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ
- 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಲಿರುವ ಶಾ
- ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ
- ಅಮಿತ್ ಶಾ ರಾಜ್ಯ ಭೇಟಿ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ರದ್ದುಗೊಳಿಸಿದ ಸಿಎಂ
19:36 August 10
KRS@115
- 115 ಅಡಿಗೇರಿದ ಕೆಆರ್ಎಸ್ ನೀರಿನ ಮಟ್ಟ
- 124.80 ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲೀಗ 115 ಅಡಿ ನೀರು ಸಂಗ್ರಹ
- 1,52,499 ಕ್ಯೂಸೆಕ್ಗೆ ಏರಿದ ಒಳ ಹರಿವು
- ಹೊರಹರಿವು- 59,627 ಕ್ಯೂಸೆಕ್
- ಒಟ್ಟು ಸಂಗ್ರಹ- 37.054 ಟಿಎಂಸಿ
19:23 August 10
ನೇತ್ರಾವತಿ, ಕುಮಾರಧಾರ ನದಿ ತೀರದ ಪ್ರದೇಶದಲ್ಲಿದ್ದ ನೆರೆಪೀಡಿತರ ರಕ್ಷಣೆ
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ತತ್ತರ
- ನೇತ್ರಾವತಿ, ಕುಮಾರಧಾರ ನದಿ ತೀರದ ಪ್ರದೇಶದಲ್ಲಿದ್ದ ನೆರೆಪೀಡಿತರ ರಕ್ಷಣೆ
- ಜಿಲ್ಲೆಯಲ್ಲಿ ಒಟ್ಟು 161 ಕುಟುಂಬದ 626 ಜನರ ರಕ್ಷಣೆ
- ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ
ಪರಿಹಾರ ಕೇಂದ್ರದ ವಿವರ ಹೀಗಿದೆ:
- ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರಿನಲ್ಲಿ 3 ಕುಟುಂಬ ಹಾಗೂ ಬಂಟ್ವಾಳ ಐಬಿಯಲ್ಲಿ 25 ಕುಟುಂಬದ ಒಟ್ಟು 55 ಸಂತ್ರಸ್ತರಿಗೆ ಆಶ್ರಯ
- ಬೆಳ್ತಂಗಡಿ ತಾಲೂಕಿನ ಲಾಯಿಲಾದಲ್ಲಿ 13 ಕುಟುಂಬಗಳ 50 ಮಂದಿ
- ಚಾರ್ಮಾಡಿಯಲ್ಲಿ 75 ಕುಟುಂಬಗಳ 369 ಮಂದಿ
- ಮಿತ್ತಬಾಗಿಲು ಕಿಲ್ಲೂರು ಗ್ರಾಮದ 5 ಕುಟುಂಬಗಳ 36 ಮಂದಿ
- ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪಿ.ಯು.ಕಾಲೇಜಿನಲ್ಲಿ 3 ಕುಟುಂಬದ ಒಟ್ಟು 10 ಮಂದಿ
- ಪುಳಿತ್ತಡಿ ಪ್ರಾಥಮಿಕ ಶಾಲೆಯಲ್ಲಿ 6 ಕುಟುಂಬದ 44 ಮಂದಿ ಸೇರಿ ಒಟ್ಟು 54 ಜನರು
- ಸುಳ್ಯ ತಾಲೂಕಿನ ಕೊಲ್ಲಮೊಗರುವಿನಲ್ಲಿ 8 ಕುಟುಂಬಗಳ ಒಟ್ಟು 22 ಜನರಿಗೆ ಆಶ್ರಯ ನೀಡಲಾಗಿದೆ
19:13 August 10
ಕೊಡಗಿನಲ್ಲಿ ಮತ್ತೆರಡು ದಿನ ರೆಡ್ ಅಲರ್ಟ್ ಮುಂದುವರಿಕೆ
- ಆಗಸ್ಟ್ 12 ರ ವರೆಗೆ ರೆಡ್ ಅಲರ್ಟ್ ಘೋಷಿಸಿದ್ದ ಕೊಡಗು ಡಿಸಿ
- 204.4 ಮಿ.ಮೀ ಗಿಂತ ಅಧಿಕ ಮಳೆಯಾಗುವ ಹಿನ್ನೆಲೆ ಮತ್ತೆರೆಡು ದಿನ ರೆಡ್ ಅಲರ್ಟ್
- ಕೇಂದ್ರ ಹವಾಮಾನ ಇಲಾಖೆ ವರದಿ ಆಧರಿಸಿ ರೆಡ್ ಅಲರ್ಟ್ ಘೋಷಣೆ
19:07 August 10
ಮಂಗಳೂರು: ನೇತ್ರಾವತಿ ನೀರಿನಲ್ಲಿ ಸಿಲುಕಿದ್ದ ಗರ್ಭಿಣಿಯರ ರಕ್ಷಣೆ
- ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ
- ನೀರಿನಿಂದ ಆವೃತವಾದ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮಗಳು
- ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್ಡಿಆರ್ಎಫ್ ತಂಡ
- ನೀರಿನಲ್ಲಿ ಸಿಲುಕಿಕೊಂಡಿರುವ ಇಬ್ಬರು ಗರ್ಭಿಣಿಯರು, ಎರಡು ಪುಟ್ಟ ಮಕ್ಕಳು ಸೇರಿದಂತೆ 85 ಗ್ರಾಮಸ್ಥರ ರಕ್ಷಣೆ
- ಇಬ್ಬರು ಗರ್ಭಿಣಿಯರ ಪೈಕಿ ಒಬ್ಬರಿಗೆ ನಾಳೆ ಡೆಲಿವರಿ ಡೇಟ್
18:32 August 10
ಬೆಳಗಾವಿ: ಬಳ್ಳಾರಿ ನಾಲಾ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ರೈಲ್ವೆ ಇಲಾಖೆ ಗುತ್ತಿಗೆದಾರ
- ಬಳ್ಳಾರಿ ನಾಲಾ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿ ಗುತ್ತಿಗೆದಾರ ಸಾವು
- ಆಂಧ್ರಪ್ರದೇಶ ಮೂಲದ ರೈಲ್ವೆ ಇಲಾಖೆ ಗುತ್ತಿಗೆದಾರ ಜಯಚಂದ್ರ ಮೃತ ವ್ಯಕ್ತಿ
- ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಭೇಟಿಗೆ ಬೆಳಗಾವಿಗೆ ಆಗಮಿಸಿದ್ದ ಜಯಚಂದ್ರ
- ಬೆಳಗಾವಿಯಲ್ಲಿ ರಭಸವಾಗಿ ಹರಿಯುತ್ತಿರುವ ಬಳ್ಳಾರಿ ನಾಲಾಗೆ ಸಿಲುಕಿ ಕಾರು ಸಹಿತ ಕೊಚ್ಚಿ ಹೋದ ಗುತ್ತಿಗೆದಾರ
- ಸಚಿವ ಸುರೇಶ ಅಂಗಡಿ ನೆರೆ ಪರಿಸ್ಥಿತಿ ಅವಲೋಕನ ಮಾಡಲು ಸಚಿವೆ ನಿರ್ಮಲಾ ಸೀತಾರಾಮ್ ಜತೆಗೆ ತೆರಳಿದ್ದರು
- ಸಚಿವ ಅಂಗಡಿ ಇಲ್ಲದ ಕಾರಣ ಜಯಚಂದ್ರ ಗೋವಾಗೆ ತೆರಳುತ್ತಿದ್ದ ವೇಳೆ ಘಟನೆ
18:24 August 10
ಮಲ್ಲಪ್ರಭಾ ನದಿ ಪ್ರವಾಹ: ಐತಿಹಾಸಿಕ ಪಟ್ಟದಕಲ್ಲು ಸ್ಮಾರಕಗಳು ಸಂಪೂರ್ಣ ಜಲಾವೃತ
- ಬಾಗಲಕೋಟೆಯಲ್ಲಿ ಮಲ್ಲಪ್ರಭಾ ನದಿಯ ಪ್ರವಾಹ
- ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿರುವ ಪಟ್ಟದಕಲ್ಲು ಸ್ಮಾರಕಗಳು ಜಲಾವೃತ
- ಒಳಗಡೆಯಿದ್ದ 150 ಕ್ಕೂ ಹೆಚ್ಚು ಜನರನ್ನು ಬೋಟ್ ಮೂಲಕ ಬೇರೆ ಪ್ರದೇಶಕ್ಕೆ ಸ್ಥಳಾಂತರ
18:17 August 10
ಚಿಕ್ಕಮಗಳೂರು ಸಂತ್ರಸ್ತರ ನೆರವಿಗೆ ಧಾವಿಸಿದ ಯೋಧರ ತಂಡ
ಚಿಕ್ಕಮಗಳೂರಲ್ಲಿ ನೆರೆಯಲ್ಲಿ ಸಿಲುಕಿಕೊಂಡಿರುವ ಸಂತ್ರಸ್ತರ ನೆರವಿಗೆ ಧಾವಿಸಿದ ಯೋಧರ ತಂಡ
ಜಿಲ್ಲೆಯ ಮೂಡಿಗೆರೆ ಹಾಗೂ ಎನ್ ಆರ್ ಪುರ ತಾಲೂಕಿಗೆ ಬೆಂಗಳೂರಿನಿಂದ ಬಂದ 40 ಯೋಧರು
24 ಯೋಧರು ಮೂಡಿಗೆರೆಯಲ್ಲಿ ಹಾಗೂ 16 ಯೋಧರು ಎನ್ ಆರ್ ಪುರದಲ್ಲಿ ನೆರೆಯಲ್ಲಿ ಸಿಕ್ಕಿಕೊಂಡವರ ರಕ್ಷಣೆಗೆ ತೆರಳಲಿದ್ದಾರೆ
18:06 August 10
ರಾಯಚೂರು ಪ್ರವಾಹ: ಐತಿಹಾಸಿಕ ದೇವಾಲಯ ಜಲಾವೃತ
- ರಾಯಚೂರಿನಲ್ಲಿ ಪ್ರವಾಹಕ್ಕೆ ಐತಿಹಾಸಿಕ ಅಲ್ಲಮ ಪ್ರಭುಲಿಂಗೇಶ್ವರ ದೇವಾಲಯ ಮುಳುಗಡೆ
- ಅಕ್ಕಪಕ್ಕದ ಅಂಗಡಿ-ಮುಗಟ್ಟುಗಳಿಗೂ ನುಗ್ಗಿದ ನೀರು
- ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಸಣ್ಣ ಪುಟ್ಟ ಅಂಗಡಿಗಳು
- ಪಕ್ಕದಲ್ಲಿನ ಗೂಗಲ್ ಬ್ರೀಡ್ಜ್ ಕಂ ಬ್ಯಾರೇಜ್ ಭರ್ತಿ
- ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೀರು
18:00 August 10
ಇಂದು ಸಂಜೆಗೆ ಆಲಮಟ್ಟಿ ಜಲಾಶಯದ ನೀರಿನ ವಿವರ
- ಒಳಹರಿವು- 6,38,000 ಕ್ಯೂಸೆಕ್
- ಹೊರಹರಿವು- 5,57,000 ಕ್ಯೂಸೆಕ್
- ಪ್ರಸ್ತುತ ನೀರಿನ ಮಟ್ಟ- 517.44 ಮೀ
17:43 August 10
ಕಾವೇರಿ ಆರ್ಭಟ: ಚಾಮರಾಜನಗರದಲ್ಲಿ ಹೈ ಅಲರ್ಟ್, ಪರಿಹಾರ ಕೇಂದ್ರ ಸ್ಥಾಪನೆ
- ಕಾವೇರಿ ಹೊರ ಹರಿವು ಹೆಚ್ಚಳವಾದ ಹಿನ್ನೆಲೆ ಮುಳುಗಡೆ ಭೀತಿಯಲ್ಲಿವೆ ಕೊಳ್ಳೇಗಾಲ ತಾಲೂಕಿನ ನದಿಪಾತ್ರದ 9 ಗ್ರಾಮಗಳು
- ಕೊಳ್ಳೇಗಾಲದ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ನಲ್ಲಿ ತೆರೆದ ನೆರೆ ಸಂತ್ರಸ್ತರ ಪರಿಹಾರ ಕೇಂದ್ರ
- ಕಾವೇರಿ ಆರ್ಭಟಕ್ಕೆ ಮೊದಲು ತುತ್ತಾಗಲಿದೆ ದಾಸನಪುರ ಗ್ರಾಮ
- ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಜನರನ್ನು ಸ್ಥಳಾಂತರಿಸಲು ಮುಂದಾದ ಜಿಲ್ಲಾಡಳಿತ
- ಪ್ರವಾಹ ಭೀತಿ ಎದುರಿಸುತ್ತಿರುವ ದಾಸನಪುರ, ಹಳೇಹಂಪಾಪುರ, ಮುಳ್ಳೂರು ಗ್ರಾಮಗಳಿಗೆ ಡಿಸಿ ಬಿ.ಬಿ.ಕಾವೇರಿ ಭೇಟಿ
- ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
- ಮೂರು ದಿನ ಸರ್ಕಾರಿ ರಜೆಯಿದ್ದರೂ ಜಿಲ್ಲಾ ಕೇಂದ್ರಗಳಲ್ಲಿರುವಂತೆ ಅಧಿಕಾರಿಗಳಿಗೆ ಡಿಸಿ ಆದೇಶ
17:43 August 10
17:38 August 10
ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ಸಿದ್ಧವಿದೆ: ನಿರ್ಮಲಾ ಸೀತಾರಾಮನ್
- ಸಾಂಬ್ರಾ ಏರ್ಪೋರ್ಟ್ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಭೆ
- ನೆರೆಹಾವಳಿ ವೀಕ್ಷಣೆ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿರುವ ಸೀತಾರಾಮನ್
- ಫಸಲು ಭೀಮಾ ಯೋಜನೆ ಪ್ರೀಮಿಯಂ ಹಣ ದಿನಾಂಕ ವಿಸ್ತರಣೆ
- ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ
- ಮಗ್ಗ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ
- ಬಹಳಷ್ಟು ಮನೆಗಳು ನೀರಲ್ಲಿ ಮುಳುಗಿವೆ
- ಸಣ್ಣ ಉದ್ಯಮಗಳು ಬಹಳ ನಷ್ಟ ಹೊಂದಿವೆ
- ಪ್ರವಾಹ ಪೀಡಿತ ಜನರ ಸಾಲ ವಸೂಲಿಗೆ ರಿಯಾಯಿತಿ ನೀಡಲಾಗುವುದು
- ನೇಕಾರರ ಸಾಲ ವಸೂಲಿಗೆ ಬಲವಂತ ಮಾಡುವಂತಿಲ್ಲ
- ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದ ಸಚಿವೆ
17:28 August 10
ಶಿವಮೊಗ್ಗ: ನೀರಿನಲ್ಲಿ ಸಿಲುಕಿ 15 ಗೋವುಗಳು ಸಾವು, 200 ಗೋವುಗಳ ರಕ್ಷಣೆ
- ಶಿವಮೊಗ್ಗದ ವಿದ್ಯಾನಗರದ ಕಂಟ್ರಿ ಕ್ಲಬ್ ಬಳಿಯ ಮಹಾವೀರ ಗೋ ಶಾಲೆಗೆ ನುಗ್ಗಿದ ನೀರು
- 15 ಕ್ಕೂ ಹೆಚ್ಚು ಗೋವುಗಳು ಸಾವು
- ಗೋ ಶಾಲೆಯಲ್ಲಿವೆ 400 ಕ್ಕೂ ಹೆಚ್ಚು ಜಾನುವಾರುಗಳು
- 200 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿ ಸ್ಥಳಾಂತರ ಮಾಡಿದ ಪೊಲೀಸ್-ಅರಣ್ಯ ಇಲಾಖೆ ಸಿಬ್ಬಂದಿ
17:24 August 10
17:14 August 10
ಕೊಡಗು: ಕೋಳಿ ಫಾರ್ಮ್-ಮನೆ ಜಲಾವೃತ... ಮನೆ ಮೇಲೆ ನಿಂತೇ ಪರಿಹಾರಕ್ಕೆ ಒತ್ತಾಯಿಸುತ್ತಿರುವ ಮಾಲೀಕ
- ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಅವಾಂತರ
- ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಲ್ಲಿ ಕೋಳಿ ಫಾರ್ಮ್-ಮನೆ ಜಲಾವೃತ
- ಜೀವನ ನಡೆಸುವುದಕ್ಕೆ ಆಸರೆಯಾಗಿದ್ದ ವಿನೋದ್ ಎಂಬವರ ಮನೆ-ಕೋಳಿ ಫಾರ್ಮ್ ಮುಳುಗಡೆ
- ಕಳೆದ ವರ್ಷವೂ ಮುಳುಗಡೆಯಾಗಿದ್ದ ಕೋಳಿ ಫಾರ್ಮ್ ಈಗ ಮತ್ತೆ ಜಲಾವೃತ
- ಮುಳುಗಡೆಯಿಂದ ಬೇಸತ್ತು ಮನೆ ಮೇಲೆ ನಿಂತ ವಿನೋದ್
- ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಹಾರ ನೀಡಬೇಕು ಎಂದು ಮನೆ ಮೇಲೆ ನಿಂತೇ ಒತ್ತಾಯ
17:09 August 10
ಚಿಕ್ಕಮಗಳೂರು: ಪ್ರವಾಹದಲ್ಲಿ 15 ಜನರು ಸಿಲುಕಿರುವ ಶಂಕೆ
- ಕಳೆದ ಐದು ದಿನಗಳಿಂದ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರಿ ಮಳೆ
- ನಗರದ ಹೊರ ವಲದಲ್ಲಿರುವ ಕೆ.ಎಸ್.ಸಿ.ಎ (ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್) ಸ್ಟೇಡಿಯಂ ಸಂಪೂರ್ಣ ಜಲಾವೃತ
- 26 ಎಕರೆ ವಿಸ್ತೀರ್ಣದ ನವುಲೇ ಸ್ಟೇಡಿಯಂ ಜಲಾವೃತ
17:01 August 10
ಶಿವಮೊಗ್ಗ: ವರುಣನ ಆರ್ಭಟಕ್ಕೆ ನವುಲೇ ಕ್ರಿಕೆಟ್ ಸ್ಟೇಡಿಯಂ ಸಂಪೂರ್ಣ ಜಲಾವೃತ
- ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಿಗೆ ಸಂತ್ರಸ್ತ ಮಹಿಳೆಯರು ಮುತ್ತಿಗೆ
- ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಹಿನ್ನೆಲೆ ಸಚಿವರ ಕಾರು ತಡೆದು ಮಹಿಳೆಯರ ಮನವಿ
- ಅಧಿಕಾರಿಗಳು ಬಂದೇ ಇಲ್ಲ, ನಮ್ಮ ಕಷ್ಟ ಕೇಳೋರಿಲ್ಲ ಅಂತ ಅಳುತ್ತಾ ಸಚಿವರ ಮುಂದೆ ಗೋಳು ತೋಡಿಕೊಂಡ ಮಹಿಳೆಯರು
- ಕೈ ಮುಗಿದು, ಪರಿಹಾರ ನೀಡುವಂತೆ ಜೋಶಿಗೆ ಮನವಿ
16:53 August 10
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಿಗೆ ಸಂತ್ರಸ್ತರು ಮುತ್ತಿಗೆ
- ಸಂಕಷ್ಟದಲ್ಲಿ ಸಿಲುಕಿದ್ದ ಗದಗ ಯೋಧನ ರಕ್ಷಣೆಗೆ ಬಂದ ನೂಡಲ್ ಅಧಿಕಾರಿ
- ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡಬೇಡಿ ಅಂತ ಯೋಧನ ಕುಟುಂಬಕ್ಕೆ ಮನವಿ ಮಾಡಿದ ನೂಡಲ್ ಅಧಿಕಾರಿ ರುದ್ರೇಶ್
- ಮೂಲ ಮಾಲೀಕರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರುದ್ರೇಶ್
- ಮೊದಲು ದೇಶ ಕಾಯೋ ಕುಟುಂಬಕ್ಕೆ ರಕ್ಷಣೆ ನಿಡ್ತೀವಿ, ಅವಾಜ್ ಹಾಕಿದ್ರೆ ಅರೆಸ್ಟ್ ಮಾಡಿ ಒಳಗೆ ಹಾಕ್ತೀನಿ ಅಂತ ತರಾಟೆ
- ಯೋಧನ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಪಿಎಸ್ಐಗೆ ಸೂಚನೆ
16:36 August 10
ದೇಶ ಕಾಯೋ ಕುಟುಂಬಕ್ಕೆ ರಕ್ಷಣೆ ನಿಡ್ತೀವಿ, ಅವಾಜ್ ಹಾಕಿದ್ರೆ ಅರೆಸ್ಟ್
- ನಾಳೆ ಮಂಗಳೂರಿಗೆ ಸಿಎಂ ಯಡಿಯೂರಪ್ಪ ಭೇಟಿ
- ಮಂಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಬಿಎಸ್ವೈ
16:19 August 10
ಮಂಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ನಾಳೆ ಸಿಎಂ ಭೇಟಿ
- ನಿನ್ನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದ್ದ ಲಾಠಿ ಚಾರ್ಜ್
- ನೆರೆ ವೀಕ್ಷಣೆಗಾಗಿ ಕೊಣ್ಣೂರು ಗ್ರಾಮಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಆಗಮಿಸಿದ್ದ ವೇಳೆ ಘಟನೆ
- ಬಿಎಸ್ವೈಯನ್ನು ಭೇಟಿಯಾಗಲು ಬಂದ ಸಂತ್ರಸ್ತರಿಗೆ ಅವಕಾಶ ನೀಡದೇ ಲಾಠಿ ಪ್ರಹಾರ ನಡೆಸಿದ್ದ ಪೊಲೀಸರು
- ಘಟನೆ ಖಂಡಿಸಿ ಕೊಣ್ಣೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
16:16 August 10
ಕೊಣ್ಣೂರಿನಲ್ಲಿ ಸಂತ್ರಸ್ತರ ಮೇಲೆ ನಡೆದಿದ್ದ ಲಾಠಿ ಚಾರ್ಜ್ ಖಂಡಿಸಿ ಇಂದು ಕಾಂಗ್ರೆಸ್ ಪ್ರತಿಭಟನೆ
- ನಾರಾಯಣಪುರ ಜಲಾಶಯದಿಂದ ಸುಮಾರು 6 ಲಕ್ಷ ಕ್ಯೂಸೆಕ್ ನೀರು ಬಿಡುವ ಹಿನ್ನೆಲೆ
- ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮಸ್ಥರ ಸ್ಥಳಾಂತರ
- ಜಿಲ್ಲಾಡಳಿತದಿಂದ 5 ಬಸ್ ಹಾಗೂ ಟ್ರ್ಯಾಕ್ಟರ್ ಮೂಲಕ ಗ್ರಾಮಸ್ಥರ ಸ್ಥಳಾಂತರ
- ಬಟ್ಟೆ, ಸಿಲಿಂಡರ್, ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ಹೊತ್ತೊಯ್ಯುತ್ತಿರುವ ಸಂತ್ರಸ್ಥರು
- ಸಂತ್ರಸ್ಥರ ಮನೆಗಳಿಗೆ ಹೋಗಿ ಮನ ಒಲಿಸುತ್ತಿರುವ ಸಿಬ್ಬಂದಿಗಳು
- ಒಲ್ಲದ ಮನಸ್ಸಿನಿಂದ ಊರು ಬಿಡುತ್ತಿರುವ ಮಹಿಳೆಯರು, ವಯೋವೃದ್ಧರು
16:09 August 10
ರಾಯಚೂರು: ಒಲ್ಲದ ಮನಸ್ಸಿನಿಂದ ಊರು ಬಿಡುತ್ತಿರುವ ಗ್ರಾಮಸ್ಥರು
- ಗದಗ ಜಿಲ್ಲೆಯ ಹೊಳೆ ಹಡಗಲಿ ಗ್ರಾಮದಲ್ಲಿ ಇಂಡಿಯನ್ ನೇವಿ ರೆಸ್ಕ್ಯೂ ಟೀಂ ಕಾರ್ಯಾಚರಣೆ ನಡೆಸಿ ನೇವಿಯ ಹೆಲಿಕಾಪ್ಟರ್ ಮೂಲಕ 15 ಜನರ ರಕ್ಷಣೆ
- ನಡುಗಡ್ಡೆಯಂತಾಗಿದ್ದ ಗ್ರಾಮದಲ್ಲಿ ಸಿಲುಕಿದ್ದ ಜನರ ರಕ್ಷಣೆ ಮಾಡಿ, ಅವರನ್ನು ಬೆಳಗಾವಿಯ ಏರ್ ಬೇಸ್ಗೆ ಕರೆದೊಯ್ದ ನೇವಿ ತಂಡ
- ನಿನ್ನೆ ಸಂಜೆಯೇ ಇವರನ್ನು ರಕ್ಷಣೆ ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
- ಸುರಕ್ಷಿತವಾಗಿ ಬೆಳಗಾವಿ ತಲುಪಿರೋ ನೆರೆಪೀಡಿತರು
- ಈ ಬಗ್ಗೆ ಗದಗ ಡಿಸಿ ಎಂ ಜಿ ಹಿರೇಮಠ್ ಸ್ಪಷ್ಟನೆ
15:54 August 10
ಗದಗ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿ ಯೋಧನೊಬ್ಬನ ಕುಟುಂಬ ಸದ್ಯ ಅತಂತ್ರವಾಗಿದೆ. ಮಲಪ್ರಭಾ ನದಿ ಹರಿವು ಹೆಚ್ಚಳವಾದ ಪರಿಣಾಮ ಜಿಲ್ಲೆಯ ಹೊಳೆಆಲೂರ ಗ್ರಾಮ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಆಸರೆ ಯೋಜನೆ ಮನೆಯಲ್ಲಿ ಯೋಧನ ಕುಟುಂಬ ಆಶ್ರಯ ಪಡೆದಿದೆ. ಆದರೆ ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮನೆ ಖಾಲಿ ಮಾಡುವಂತೆ ಯೋಧನ ಕುಟುಂಬಕ್ಕೆ ಮನೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಒಂದು ಗಂಟೆಯಾದ್ರೂ ಯಾವೊಬ್ಬ ಅಧಿಕಾರಿಗಳು ಸಹ ಸ್ಥಳಕ್ಕೆ ಬಂದಿಲ್ಲ.
ಮನೆಯ ಯಜಮಾನ ಯೋಧ ಈರಪ್ಪ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ 20 ದಿನಗಳಿಂದ ಈ ಕುಟುಂಬಕ್ಕೆ ಯೋಧನ ಸಂಪರ್ಕ ಸಾಧ್ಯವಾಗಿಲ್ಲ. ತನ್ನ ಕುಟುಂಬ ಜಲಪ್ರಳಯಕ್ಕೆ ತುತ್ತಾಗಿದೆ ಅಂತ ಯೋಧನಿಗೆ ಸಣ್ಣ ಸುಳಿವೂ ಸಹ ಇಲ್ಲ. ಆದರೆ ಬಾಣಂತಿ ಮಗಳು, ಇಬ್ಬರು ಗಂಡು ಮಕ್ಕಳ ಜೊತೆ ಯೋಧನ ಪತ್ನಿ ಜಯಲಕ್ಷ್ಮಿ ಈ ಪ್ರವಾಹದ ಸಮಸ್ಯೆಗೆ ಸಿಲುಕಿ ಪರದಾಡುತ್ತಿದ್ದಾರೆ.
15:48 August 10
ಗದಗ ಪ್ರವಾಹದಲ್ಲಿ ಸಿಲುಕಿದ ಯೋಧನ ಕುಟುಂಬ
- ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಲಕ್ಷ್ಮಣತೀರ್ಥ ನದಿಯಿಂದ ಜಲಾವೃತವಾಗಿದೆ. ಈ ಹಿನ್ನೆಲೆ ರಕ್ಷಣಾ ತಂಡದವರು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
15:17 August 10
- ಸಿಎಂ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಆತಂಕದಲ್ಲಿದ್ದಾರೆ. ಅದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ . ಇದು ಸರಿಯಾದ ಕ್ರಮ ಅಲ್ಲ ಎಂದು ಕಿಡಿಕಾರಿದ್ದಾರೆ.
- ಬಿಎಸ್ವೈ ಬಹಳ ಶ್ರಮಪಟ್ಟು ಮುಖ್ಯಮಂತ್ರಿಯಾಗಿದ್ದಾರೆ. ಈ ಸವಾಲು ಅವರ ಮುಂದೆ ಇದೆ. ಯಾವುದೇ ಮಂತ್ರಿಮಂಡಲ ರಚನೆ ಆಗಿಲ್ಲ, ಈ ಕಾರಣದಿಂದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
15:08 August 10
- ಕಳೆದ ನಾಲ್ಕು ಗಂಟೆಯಿಂದ ಬೆಳಗಾವಿಯ ದೇವಾಲಯವೊಂದರ ಮೇಲೆ ವ್ಯಕ್ತಿಯೋರ್ವ ನಿಂತುಕೊಂಡು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾನೆ.
- ಬಂಟ್ವಾಳ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಜನರೆಲ್ಲರೂ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
14:07 August 10
- ನಿರ್ಮಲಾ ಸೀತಾರಾಮನ್ ಸಂಕೇಶ್ವರಕ್ಕೆ ತೆರಳಬೇಕಿತ್ತು. ಆದರೆ, ದಿಢೀರನೇ ಅಲ್ಲಿಗೆ ಹೋಗುವುದನ್ನು ರದ್ದು ಮಾಡಿ, ಈಗ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾರೆ.
- ಸಂಕೇಶ್ವರದಲ್ಲಿ ಆಗಿರುವ ಅನಾಹುತಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಸಮಯಾವಕಾಶ ಇಲ್ಲವಾದ್ದರಿಂದ ಸಂಕೇಶ್ವರ ಪ್ರವಾಸ ರದ್ದು ಮಾಡಿದ್ದಾರೆ.
- ಇಂದು ಮಧ್ಯಾಹ್ನ 3 ಗಂಟೆಗೆ ಬಿಎಸ್ ಯಡಿಯೂರಪ್ಪ ಮಂಗಳೂರಿಗೆ ತೆರಳಲಿದ್ದಾರೆ. ಅಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.
14:05 August 10
- ಹಾವೇರಿಯಲ್ಲಿ ನಿರಂತರ ಮಳೆ ಹಾಗೂ ವರದಾ ನದಿ ನೀರಿನಿಂದ ಹಾನಿಗೊಳಗಾಗಿರುವ ತಾಲೂಕಿನ ಕರಜಗಿ ಗ್ರಾಮಕ್ಕೆ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಭೇಟಿ ನೀಡಿದ್ದಾರೆ. ಮಳೆ ಮತ್ತು ನದಿ ನೀರಿನಿಂದ ಮನೆ ಜಮೀನು ಕಳೆದುಕೊಂಡು ಸರ್ಕಾರಿ ಶಾಲೆಯಲ್ಲಿನ ಪರಿಹಾರ ಕೇಂದ್ರ ಸೇರಿರುವ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮಠದ ವತಿಯಿಂದ ಸಂತ್ರಸ್ತರಿಗೆ ಹಾಸಿಗೆ, ಹೊದಿಕೆ, ಬಿಸ್ಕಿಟ್, ಸೋಪು ಸೇರಿದಂತೆ ಅಗತ್ಯ ವಸ್ತುಗಳನ್ನ ವಿತರಿಸಿದರು.
- ಮೈಸೂರಿನಲ್ಲಿ ಭಾರಿ ಮಳೆಗೆ ಕುಸಿತಗೊಂಡಿದ್ದ ನಗರದ ಅಗ್ನಿಶಾಮಕ ದಳ ಕಟ್ಟಡದ ಸ್ಥಳಕ್ಕೆ ಸಿಎಂ ಬಿಎಸ್ವೈ ಪುತ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹೂಲಿಕೆರೆಯ ಇಂದ್ರಮ್ಮನ ಕೆರೆ ನೆರೆ ಹಾವಳಿಯಿಂದ ಬಾಧಿತರಾಗಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಏನೇ ಸಮಸ್ಯೆಯಾದರೂ ಜಿಲ್ಲಾಡಳಿತ ನಿಮ್ಮ ಜತೆಗಿರುತ್ತೆ ಅಂತಾ ಧೈರ್ಯ ತುಂಬಿದರು.
13:58 August 10
- ಕಾರವಾರದಲ್ಲಿ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ.ಮೀನುಗಾರರ ಬೋಟ್ ಹಾಗೂ ಬಲೆಗಳು ಭಾರೀ ಮಳೆಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಪ್ರತಿ ಬೋಟ್ಗಳು ಸುಮಾರು 5 ರಿಂದ 6 ಲಕ್ಷ ಬೆಲೆಬಾಳಲಿದ್ದು, ಮೀನುಗಾರರು ಕಣ್ಣೀರು ಹಾಕುತ್ತಿದ್ದಾರೆ.
- ಪ್ರಮುಖ ವೃತ್ತಿಯನ್ನೇ ಕಳೆದುಕೊಂಡ ಮೀನುಗಾರರು ಮುಂದೆ ಜೀವನ ಮಾಡುವುದು ಹೇಗೆ ಎಂದು ದುಃಖಪಡುತ್ತಿದ್ದಾರೆ.
13:31 August 10
- ಹಾಸನದಲ್ಲಿ ಭಾರೀ ಮಳೆ ಹಿನ್ನೆಲೆ ನದಿಪಾತ್ರದ ಗ್ರಾಮಗಳು ಜಲಾವೃತಗೊಂಡಿವೆ. ಅಲ್ಲದೆ, ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿದಿದ್ದು, ಸಂಚಾರ ಬಂದ್ ಆಗಿದೆ.
- ಬಾಗಲಕೋಟೆಯಲ್ಲಿ ಪ್ರಾಣಾಪಾಯವನ್ನು ಲೆಕ್ಕಿಸದೇ ಸೇತುವೆ ಮೇಲೆ ಸಂಚಾರ ಮಾಡಲು ಮುಂದಾದ ಯುವಕ. ಜಿಲ್ಲೆಯ ಕಡಕೊಳ ರಸ್ತೆಯಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ವೇಳೆ ಆತನನ್ನು ರಕ್ಷಣೆ ಮಾಡಿದ್ದಾರೆ.
- ಬಾಗಲಕೋಟೆಯ ಮಾಚನೂರು ಯವಕನೋರ್ವ ನಾಪತ್ತೆಯಾಗಿದ್ದಾನೆ. ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿರಬಹುದಾ ಎಂದು ಶಂಕಿಸಲಾಗಿದೆ.
13:19 August 10
- ರಾಯಚೂರಿನ ಕೃಷ್ಣ ನದಿಗೆ 5 ಲಕ್ಷ ನೀರು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
- ಜಲದುರ್ಗ ಸೇತುವೇ ಮೇಲೆ ಭಾರೀ ಪ್ರಮಾಣಲ್ಲಿ ನೀರು ಹರಿಯುತ್ತಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಸೇತುವೆ ಸಂಪೂರ್ಣ ಜಲಾವೃತವಾಗಲಿದೆ.
- ರಾಯಚೂರಿನ ನಡುಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲು ಹೋದ ಅಧಿಕಾರಿಗಳೇ ಅಪಾಯಕ್ಕೆ ಸಿಲುಕಿದ್ದರು. ಅಧಿಕಾರಿಗಳು ಜಲದುರ್ಗ ಸೇತುವೆ ಮೇಲೆ ಬರುವಾಗ ನೀರು ಭಾರೀ ರಭಸದಿಂದ ಹರಿದಿದೆ.
- ಕೆಆರ್ಎಸ್ನಿಂದ ಇನ್ನೇನು ಕೆಲವು ಕ್ಷಣದಲ್ಲಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತದೆ. ನದಿಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿ ಎಂದು ಸೂಚನೆ ನೀಡಲಾಗಿದೆ.
12:54 August 10
- 1024 ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. 2 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. 200 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದು, 44 ಸಾವಿರ ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಿಎಸ್ವೈ ತಿಳಿಸಿದ್ದಾರೆ.
- ಸಾವಿರಾರು ಜನ ಸಂಕಷ್ಟದಲ್ಲಿದ್ದಾರೆ 11 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಈ ಎಲ್ಲಾ ಘಟನೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದೇನೆ.
- ಕೊಡಗು ಸೇರಿದಂತೆ ಹಲವಾರು ಕಡೆ ಭೂ ಕುಸಿತ ಉಂಟಾಗಿದೆ. ಬೆಳಗಾವಿಯ ಹಲವಾರು ಕಡೆ ಪರಿಶೀಲನೆ ನಡೆಸಿದ್ದೇನೆ. ಎಲ್ಲಾ ಕಡೆ ನಮ್ಮ ಸಿಬ್ಬಂದಿಗಳಿಗೆ ನೈತಿಕ ಸ್ಥೈರ್ಯ ತುಂಬಿದ್ದೇವೆ : ಬಿಎಸ್ವೈ
- ಮುಖ್ಯಮಂತ್ರಿಗಳ ಪರಿಹಾರ ನಿಧಿ ಸ್ಥಾಪನೆ ಮಾಡಿದ್ದೇವೆ, ಇದಕ್ಕೆ ಸುಧಾಮೂರ್ತಿಯವರು 10 ಕೋಟಿ ನೀಡಿದ್ದಾರೆ ಅದರಂತೆ ಹಲವಾರು ಸಂಸ್ಥೆಗಳು ಹಣವನ್ನು ನೀಡುತ್ತಿದೆ. ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಿಂದ ನಾವು 2 ಕೋಟಿ ಹಣ ನೀಡುತ್ತಿದ್ದೇನೆ: ಬಿಎಸ್ವೈ
- ಪೊಲೀಸ್ ಹಾಗೂ ಸಾರಿಗೆ ಇಲಾಖೆ ಒಂದು ದಿನದ ವೇತನ ನೀಡಲು ಒಪ್ಪಿಕೊಂಡಿದೆ. ನಿರಾಶ್ರಿತರಿಗೆ ಪುನರ್ ವಸತಿ ಮಾಡುವ ಕೆಲಸ ಆಗಬೇಕಿದೆ. ಈ ಹಿನ್ನೆಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ : ಬಿಎಸ್ವೈ
12:39 August 10
ಕೆಆರ್ಎಸ್ನಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
- ಯಾದಗಿರಿಯ ನೀಲಕಂಠರಾಯನಗಡ್ಡಿಯಲ್ಲಿ ಸೇತುವೆ ಕೊಚ್ಚಿಹೋಗಿದೆ. ಈ ನಡುಗಡ್ಡೆಯಲ್ಲಿ ಸುಮಾರು 130 ಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಇವರ ರಕ್ಷಣೆಗೆ ರಕ್ಷಣಾ ತಂಡ ಮುಂದಾಗುತ್ತಿದೆ. ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಬಿಡುಗಡೆಮಾಡಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.
12:12 August 10
ಸಿಎಂ ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ
- ಬೆಳಗಾವಿಯ ಪಡಾರಮಡ್ಡಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಸುಮಾರು 250 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ, ಮೊದಲು ಮಕ್ಕಳು ವೃದ್ಧರು ಹಾಗೂ ಗರ್ಭಿಣಿಯರನ್ನು ರಕ್ಷಣೆ ಮಾಡಲಾಗಿದೆ.
- ಮಾಜಿ ಸಿಎಂ ಹೆಚ್ ಡಿ ಕೆ ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
12:02 August 10
- ನಿರ್ಮಲಾ ಸೀತಾರಾಮನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ
- ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
- ನಡೆದುಕೊಂಡೇ ಸ್ಥಳ ಪರಿಶೀಲನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ .ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿದ ಸೀತಾರಾಮ್ರನ್ನು ಅಲ್ಲಿನ ಮಹಿಳೆಯರು ತಬ್ಬಿಕೊಂಡು ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಈ ವೇಳೆ ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ.
11:57 August 10
- ಚಿಕ್ಕಮಗಳೂರಲ್ಲಿ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಅಲ್ಲಲ್ಲಿ ಗುಡ್ಡ ಕುಸಿಯುತ್ತಿದ್ದು, ಜನರು ಅಪಾಯದ ಅಂಚಿನಲ್ಲಿದ್ದಾರೆ.
- ಹಲವು ಕಡೆ ಮಣ್ಣಿನ ಮನೆಗಳು ಕುಸಿದಿದ್ದು,ಆಶ್ರಯವಿಲ್ಲದೆ ಜನರು ಕಂಗಾಲಾಗಿದ್ದಾರೆ.
11:53 August 10
ನಿರ್ಮಲಾ ಸೀತಾರಾಮ್ ರಿಂದ ಪರಿಶೀಲನೆ
- ಬಾಗಲಕೋಟೆಯ ಕಮತಗಿ ಪಟ್ಟಣ ಸಂಪೂರ್ಣವಾಗಿ ಮುಳುಗು ಹೋಗಿದೆ. ಮಲಪ್ರಭಾ ನದಿಯ ಹೊರ ಹರಿವು ಹೆಚ್ಚಿರುವ ಕಾರಣ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.
- ಪಟ್ಟದಕಲ್ಲು ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಇಲ್ಲಿನ ದೇವಾಲಯ ಅರ್ಧ ಜಾಲಾವೃತಗೊಂಡಿದೆ. ಇಲ್ಲೂ ಕೂಡ ಹೆಲಿಕಾಪ್ಟರ್ ಬಳಸಿ ರಕ್ಷಣೆ ಕಾರ್ಯ ಮುಂದುವರೆಸಲಾಗಿದೆ.
11:50 August 10
- ಸಿಎಂ ಬಿಎಸ್ವೈ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನುಹೇಗೆ ನಿಭಾಯಿಸಲಾಗುತ್ತಿದೆ. ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.
- ಹೇಮಾವತಿ ನದಿಗೆ ಗೊರೂರು ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ನದಿ ಅಂಚಿನ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
-
ಕೆ.ಆರ್. ಪೇಟೆ ತಾಲೂಕಿನ ಚಿಕ್ಕ ಮಂದಗೆರೆ ಗ್ರಾಮದ ಬಳಿ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ನದಿ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿಹೋಗಿವೆ. ಸಣ್ಣ ಸಣ್ಣ ಸೇತುವೆಗಳು ಮುಚ್ಚಿ ಹೋಗಿವೆ.
11:42 August 10
- ಮೈಸೂರಿನ ಸುತ್ತೂರು ಮಠ ಸಂಪೂರ್ಣ ಜಲಾವೃತಗೊಂಡಿದೆ. ಈ ವೇಳೆ ಪ್ರವಾಹಕ್ಕೆ ಸಿಲಿಕಿದ್ದ ಸ್ವಾನವೊಂದನ್ನು ರಕ್ಷಣಾ ತಂಡ ರಕ್ಷಣೆ ಮಾಡಿದೆ. ಇದಲ್ಲದೆ, ಹುಣಸೂರಿನಲ್ಲೂ ಕೂಡ ಎರಡು ನಾಯಿಗಳನ್ನು ಕೂಡ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
- ಇನ್ನೂ ಪ್ರಮುಖವಾಗಿ ಗಮನಿಸುವ ಅಂಶ ಎಂದರೆ ಚಿಕ್ಕೋಡಿಯಲ್ಲಿ ಜಲಪ್ರಳಯಕ್ಕೆ ಸಿಲುಕಿದ್ದ ಮೊಲವೊಂದನ್ನು ಕೂಡ ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ.
11:38 August 10
- ಬೆಳಗಾವಿಗೆ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಮನ್ ಆಗಮಿಸಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.
- ರಾಜ್ಯದಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಎಷ್ಟು ನಷ್ಟ ಉಂಟಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಿದ್ದಾರೆ.
- ಕೆಲ ಸಮಯ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ನಿರಾಶ್ರಿತರ ಕೇಂದ್ರಗಳಿಗೆ ತೆರಳುತ್ತಿದ್ದು, ಜನರಿಗೆ ಸಾಂತ್ವಾನ ಹೇಳಲಿದ್ದಾರೆ.
- ಇಂದು ಮಧ್ಯಾಹ್ನ 12 ಗಂಟೆ್ಗೆ ಹೆಲಿಕಾಪ್ಟರ್ ಮುಖಾಂತರ ಬಾಗಲಕೋಟೆಗೆ ತೆರಳಲಿದ್ದಾರೆ.
11:31 August 10
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ಮನೆ ಕೂಡ ಜಲಾವೃತಗೊಂಡಿತ್ತು. ಈ ಹಿನ್ನೆಲೆ ಜನರೇ ಅವರನ್ನು ರಕ್ಷಣೆ ಮಾಡಿ ಮನೆಯಿಂದ ಹೊರಗೆ ಕರೆದು ಕೊಂಡುಬಂದಿದ್ದಾರೆ.
11:24 August 10
ಬೆಳಗಾವಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್
- ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಿದ್ದಾರೆ. ಬೆಳಗಾವಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವಾನ ಹೇಳಲಿದ್ದಾರೆ.
11:23 August 10
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಲೇ ಇದ್ದು, ಜಿಲ್ಲೆಯ ಜೀವನದಿ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜೊತೆಗೆ ಕುಮಾರಧಾರ, ಗುಂಡ್ಯ ನದಿಗಳೂ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
-
ನೇತ್ರಾವತಿ ನದಿ ತೀರದ ಪ್ರದೇಶಗಳಾದ ಉಪ್ಪಿನಂಗಡಿ ಹಾಗೂ ಬಂಟ್ವಾಳದ ಹಲವು ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಬಹುತೇಕ ನದಿತೀರದ ಪ್ರದೇಶಗಳೆಲ್ಲಾ ಜಲಾವೃತವಾಗಿದ್ದು, ರಾತ್ರಿ 11.30ಕ್ಕೆ ಬಂದ ಮಾಹಿತಿಯ ಪ್ರಕಾರ ಉಪ್ಪಿನಂಗಡಿಯ ರಥ ಬೀದಿಯ ಬಹುತೇಕ ಮನೆಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆ ಭಾಗದ ಜನರು ಮನೆ ಬಿಟ್ಟು ಸಂತೃಸ್ತರ ಶಿಬಿರ ಅಥವಾ ತಮ್ಮ ಬಂಧು ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
10:51 August 10
- ಶಿವಮೊಗ್ಗದಲ್ಲಿ ಪ್ರವಾಹ ಹಿನ್ನೆಲೆ ಸೇತುವೆ ಕೊಚ್ಚಿಕೊಂಡು ಹೋಗಿದೆ. ನಾಡೋಡ ಭಾಗದಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಸಂಚಾರ ಬಂದ್ ಆಗಿದೆ.
10:37 August 10
ಬೆಳಗಾವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಆಗಮನ
- ಯಾದಗಿರಿಯಲ್ಲಿ ಮೂರು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯ ಮೃತ ದೇಹ ಇಂದು ನೀರಿನಲ್ಲಿ ತೇಲಿಬಂದಿದೆ. ಸಾಹೇಬರೆಡ್ಡಿ ಮೃತ ವ್ಯಕ್ತಿ. ಈತ ಮೂರು ದಿನಗಳ ಹಿಂದೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ.
- ಬೆಳಗಾವಿಯಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ಮುಖಾಂತರ ನಡೆಯತ್ತಿದ್ದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ.
10:35 August 10
- ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಲಿದ್ದೇವೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಕೇಂದ್ರದಿಂದ ತಾತ್ಕಾಲಿಕ ಹಣಕ್ಕೆ ಬೇಡಿಕೆ ಇಡುತ್ತೇವೆ ಎಂದು ಬಿಎಸ್ವೈ ತಿಳಿಸಿದ್ದಾರೆ.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ವಿಶೇಷ ವಿಮಾನದ ಮುಖಾಂತರ ಪ್ರವಾಹದ ಪರಿಶೀಲನೆ ನಡೆಸಿದ್ದಾರೆ.
10:19 August 10
- ರಾಜ್ಯದ ಪ್ರವಾಹ ಪೀಡಿತರಿಗೆ ರಾಜ್ಯ ಹಾಗೂ ಕೇಂದ್ರದಿಂದ ಪರಿಹಾರ ನೀಡಲಾಗುವುದು ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
- ಜನರ ಸಂಕಷ್ಟಕ್ಕೆ ಸಂಬಂಧಿಸಿದಂತೆ ಇಂದು ಸಭೆ ಆಯೋಜನೆ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು.
10:11 August 10
-
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮಸ್ಥರು ಸಂತ್ರಸ್ತರಿಗೆ ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿಯನ್ನು ತಯಾರಿಸುವ ಮೂಲಕ ತಮ್ಮ ಅಳಿಲು ಸೇವೆ ಮೆರೆದಿದ್ದಾರೆ.
-
ಎರಡು ಕ್ವಿಂಟಲ್ ಜೋಳದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರು ಮಾಡುತ್ತಿದ್ದಾರೆ. ಜೊತೆಗೆ ಶೇಂಗಾ ಪುಡಿ, ಕುರಸಾನೇ ಪುಡಿಯನ್ನು ರೊಟ್ಟಿ ಜೊತೆ ಕಳುಹಿಸಿಕೊಡಲು ರಾತ್ರಿ ಹಗಲು ತಯಾರಿಸುತ್ತಿದ್ದಾರೆ.
10:07 August 10
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬ್ರೀಡ್ಜ್ ಕಂ ಬ್ಯಾರೇಜ್ ಭರ್ತಿಯಾಗಿದ್ದು, ಪಕ್ಕದಲ್ಲಿನ ಶ್ರೀ ಅಲ್ಲಮ ಪ್ರಭುಲಿಂಗೇಶ್ವರ ದೇವಾಲಯ ಮುಳುಗಡೆಗೊಂಡಿದೆ.. ದೇಗುಲ ಸುತ್ತಮುತ್ತಲಿನ ಅಂಗಡಿ-ಮುಗಟ್ಟುಗಳು, ಹೊಲ ಗದ್ದೆಗಳು ಜಲಾವೃತ್ತಗೊಂಡು ಸಂಪೂರ್ಣವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೂಗಲ್ ಗ್ರಾಮಕ್ಕೆ ನೀರು ನುಗ್ಗುವ ಭೀತಿ ಎದುರಾಗಿದೆ. ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪರಿಣಾಮ ಹೆಚ್ಚಾಗಿ ಜಲಾಶಯದಿಂದ ಕೃಷ್ಣ ನದಿಯಿಗೆ ಐದುವರೆ ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಟ್ಟ ಪರಿಣಾಮ ಜಲಸಂಕಷ್ಟ ಎದುರಾಗಿದೆ.
10:03 August 10
ನಿರ್ಮಲಾ ಸೀತಾರಾಮನ್ರಿಂದ ರಾಜ್ಯದ ಪ್ರವಾಹ ಪರಿಸ್ಥಿತಿ ಪರಿಶೀಲನೆ
-
ನೆರೆಗೆ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜನರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗ ಸಂಸ್ಥೆಯ ಮೂಲಕ ಸಹಾಯ ಹಸ್ತವನ್ನು ನೀಡಿದ್ದಾರೆ.
-
ಎರಡು ಟ್ರಕ್ಕುಗಳಲ್ಲಿ ದಿನಬಳಕೆಗೆ ಬೇಕಾಗುವಂತಹ ವಸ್ತುಗಳು ಮತ್ತು ದವಸ ಧ್ಯಾನಗಳು ಹಾಗೂ ಅಗತ್ಯ ವಸ್ತುಗಳನ್ನು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದ್ದಾರೆ.
-
ರಾಜ್ಯಾದ್ಯಂತ ತೀವ್ರ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ.
10:01 August 10
ಪ್ರವಾಹಕ್ಕೆ ಒಳಗಾದ ಜನರಿಗೆ ಕೇಂದ್ರ, ರಾಜ್ಯದಿಂದ ನೆರವು: ಸಿಎಂ
- ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೆತ್ರದ ಜನರೂ ಕೂಡ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನು ರಕ್ಷಿಸಲು ಸ್ವತಃ ಶಾಸಕರು ಕಾಕತಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೆಲೆ ಅಪಾಯದ ಮಟ್ಟ ನೀರು ಹರಿಯುತ್ತಿದ್ದರು ಲೆಕ್ಕಿಸದೆ ಬಂದು ಜನರ ರಕ್ಷಣೆಗೆ ಮುಂದಾಗಿದ್ದಾರೆ.
-
ಯಮಕನಮರಡಿ ಕ್ಷೆತ್ರದ ಹೆಬ್ಬಾಳ, ಚಿಕಾಲಗುಡ್ಡ, ಸೇರಿದಂತೆ ಹಲವು ಗ್ರಾಮಗಳ ಜನತೆ ನೀರಿನಲ್ಲಿ ಸಿಲುಕಿದ್ದು, ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಶಾಸಕರೇ ಅವರ ರಕ್ಷಣೆಗೆ ಧಾವಿಸಿದ್ದು, ಜನರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
-
ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸುತ್ತಿರುವ ಜನರ ಕಷ್ಟವನ್ನು ನಿವಾರಿಸಿವುಂತೆ ಕೋರಿ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಸರ್ಕಲ್ ಮಾರಮ್ಮನ ಎದುರು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.
-
ಮಲೆನಾಡಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ತುಂಗಾಭದ್ರ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ನದಿಯ ತಟದಲ್ಲಿರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದ್ದು, ಕೆಲ ಗ್ರಾಮಗಳ ಸಂಪರ್ಕ ಕಡಿತವಾಗಿವೆ.
-
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಗೆ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿದು ಬರುತ್ತಿದ್ದು ಜಿಲ್ಲಾಡಳಿತ ಕೃಷ್ಣ ನದಿಯ ಮೇಲೆ ಹದ್ದಿನ ಕಣ್ಣಿಟ್ಟಿದೆ. ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ 4,74,240 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
09:54 August 10
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
09:50 August 10
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
09:48 August 10
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
09:45 August 10
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
09:38 August 10
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
09:17 August 10
ರಾಜ್ಯದಲ್ಲಿ ಹೆಚ್ಚುತ್ತಿದೆ ವರುಣನ ಅಬ್ಬರ
ರಾಜ್ಯದಲ್ಲಿ ದಿನೇ ದಿನೇ ವರುಣನ ಅಬ್ಬರ ಹೆಚ್ಚಾಗುತ್ತಲೇ ಇದೆ. ಹಲವಾರು ಹೆದ್ದಾರಿಗಳು ಬಂದ್ ಆಗಿದ್ದು, ಸಾಮಾನ್ಯ ರಸ್ತೆಗಳು ನದಿಗಳಂತಾಗಿವೆ. ಇನ್ನು ವಾಹನಗಳು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.