ಕರ್ನಾಟಕ

karnataka

ETV Bharat / state

Job Alert: ಅರಣ್ಯ ಇಲಾಖೆಯಿಂದ ವೀಕ್ಷಕರ ಹುದ್ದೆಗೆ ನೇಮಕಾತಿ; ಅಕ್ಟೋಬರ್​ 26 ಅರ್ಜಿ ಸಲ್ಲಿಕೆಗೆ ಕಡೆಯ ದಿನ - ಹುದ್ದೆಗಳ ಭರ್ತಿಗೆ ಅಧಿಸೂಚನೆ

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 13 ವೃತ್ತಗಳ ಹಂತದಲ್ಲಿ ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿಗೆ ಆಹ್ವಾನಿಸಲಾಗಿದೆ.

Karnataka Forest department recruitment for 310 forest watcher
Karnataka Forest department recruitment for 310 forest watcher

By ETV Bharat Karnataka Team

Published : Oct 14, 2023, 5:37 PM IST

ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತಗಳಲ್ಲಿ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 13 ವೃತ್ತಗಳ ಹಂತದಲ್ಲಿ ಈ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್​ಎಸ್​ಎಲ್​ಸಿ ಓದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತು ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ

ಹುದ್ದೆ ವಿವರ:ಕರ್ನಾಟಕ ಅರಣ್ಯ ಇಲಾಖೆಯ 310 ಹುದ್ದೆ ಭರ್ತಿ ನಡೆಸಲಾಗುವುದು. ಬೆಂಗಳೂರಿನಲ್ಲಿ 33, ಬೆಳಗಾವಿ 20, ಬಳ್ಳಾರಿ 20, ಚಾಮರಾಜನಗರ 32, ಚಿಕ್ಕಮಗಳೂರು 25, ಧಾರವಾಡ 7, ಹಾಸನ 20, ಕೆನರಾ ವೃತ್ತ 32, ಕೊಡಗು 16, ಕಲಬುರಗಿ 23, ಮಂಗಳೂರು 20, ಮೈಸೂರು 32, ಶಿವಮೊಗ್ಗೆ 30 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲಾಗಿದೆ.

ವಿದ್ಯಾರ್ಹತೆ:ಈ ಹುದ್ದೆಗೆ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು.

ವೇತನ: ಈ ಹುದ್ದೆಗಳಿಗೆ ಮಾಸಿಕ 21,400 ರೂ ನಿಂದ 42,000 ರೂ.ವರೆಗೆ ವೇತನ ನಿಗದಿಸಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಪೂರ್ಣಗೊಳಿಸಿರಬೇಕು. 2ಎ, 2ಬಿ, 3ಎ, 3ಬಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 125 ರೂ. ಅರ್ಜಿ ಶುಲ್ಕ ನಿಗದಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 45 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದಕೀಯ ತಪಾಸಣಾ ಪರೀಕ್ಷೆ ಮೂಲಕ ಆಯ್ಕೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಸೆಪ್ಟೆಂಬರ್​ 27ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 26 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಅಭ್ಯರ್ಥಿಗಳು kfdrecruitment.in ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ, ವಲಯ ವೃತ್ತದ ಅನುಸಾರವಾಗಿ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ: ಅ.19 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ABOUT THE AUTHOR

...view details