ಬೆಂಗಳೂರು :2023 ವಿಧಾನಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಇಂದು ಹಿಂದಕ್ಕೆ ಪಡೆದಿದೆ. ಮಾ.29 ರಿಂದ ರಾಜ್ಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಇದೀಗ ರಾಜ್ಯದ ವಿಧಾನಸಭೆ ಚುನಾವಣೆ ಮೇ 10 ರಂದು ನಡೆದಿದ್ದು, ಫಲಿತಾಂಶವು ಸಹಾ ಮೇ 13 ರಂದು ಹೊರಬಿದ್ದಿದೆ. ಇಂದು ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ವಾಪಸ್ ಪಡೆದಿದೆ.
ಇದನ್ನೂ ಓದಿ :ಪಂಚರತ್ನ ರಥಯಾತ್ರೆ ಯಶಸ್ವಿಯಾದರೂ ಜೆಡಿಎಸ್ ಕುಸಿತಕ್ಕೆ ಕಾರಣಗಳೇನು?
ಈ ಸಂಬಂಧ ಚುನಾವಣಾ ಆಯೋಗ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಚುನಾವಣೆ ಘೋಷಣೆ ದಿನಾಂಕದಿಂದ ಚುನಾವಣೆ ಪ್ರಕ್ರಿಯೆ ಅಂತ್ಯವಾಗುವವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅದರಂತೆ ಚುನಾವಣಾ ಆಯೋಗ ಸೋಮವಾರಕ್ಕೆ ನೀತಿ ಸಂಹಿತೆ ಹಿಂಪಡೆದು ಆದೇಶ ಹೊರಡಿಸಿದೆ.
ಚುನಾವಣಾ ಆಯೋಗ ನಿನ್ನೆ ಕರ್ನಾಟಕ ವಿಧಾನಸಭೆ ಚುನಾಯಿತ ಶಾಸಕರ ಅಧಿಕೃತ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು. ಈ ಸಂಬಂಧ ನಿನ್ನೆ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ಹಿಂಪಡೆದಿದೆ.
ಇದನ್ನೂ ಓದಿ :ಬಿ ವೈ ವಿಜಯೇಂದ್ರ ಗೆಲ್ಲದಂತೆ ತೋಟದ ಮನೆಯಲ್ಲಿ ವಾಮಚಾರ ನಡೆಸಲಾಗಿತ್ತು: ಸಂಸದ ಬಿ ವೈ ರಾಘವೇಂದ್ರ