ಬೆಂಗಳೂರು: ಎರಡು ತಿಂಗಳ ಬಳಿಕ ರಾಜ್ಯದಲ್ಲಿಂದು ಕೋವಿಡ್ ಸೋಂಕಿತರ ಸಂಖ್ಯೆಸಾವಿರದ ಗಡಿ ದಾಟಿದೆ. ಕಳೆದೆರಡು ವಾರಗಳಿಂದ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಇಂದು 1,135 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,62,339 ಕ್ಕೆ ಏರಿಕೆ ಆಗಿದೆ.
ಇಂದು 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 12,403 ಆಗಿದೆ. ಇಂದು 561 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 9,40,489 ಮಂದಿ ಸೋಂಕು ಮುಕ್ತರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿದಾಟುವ ಎಲ್ಲಾ ಮುನ್ಸೂಚನೆಗಳು ದೊರೆತಿವೆ. ಸದ್ಯ 9,428 ಸಕ್ರಿಯ ಪ್ರಕರಣಗಳಿವೆ. 129 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಶೇ.1.65ರಷ್ಟು ಸೋಂಕಿತರು ಇದ್ದು, ಮೃತಪಟ್ಟವರ ಪ್ರಮಾಣ ಶೇ. 0.52 ರಷ್ಟಿದೆ. ಇಂದು ವಿಮಾನ ನಿಲ್ದಾಣದ ಮೂಲಕ 3,534 ಮಂದಿ ಆಗಮಿಸಿದ್ದು, ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.