ಬೆಂಗಳೂರು: ರಾಜ್ಯದಲ್ಲಿಂದು 1,17,956 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು ಇದರಲ್ಲಿ 5,019 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,17,119 ಏರಿಕೆಯಾಗಿದ್ದು, ಪಾಸಿಟಿವ್ ದರ ಶೇ 4.25 ರಷ್ಟಿದೆ.
ಇತ್ತ 13,923 ಸೋಂಕಿತರು ಗುಣಮುಖರಾಗಿದ್ದು, ಈ ತನಕ 38,25,538 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 52,013 ರಷ್ಟಿದೆ. ಸೋಂಕಿಗೆ 39 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,534 ಏರಿಕೆ ಕಂಡಿದೆ. ಡೆತ್ ರೇಟ್ ಶೇ 0.77 ರಷ್ಟಿದೆ. ಇನ್ನು ವಿಮಾನ ನಿಲ್ದಾಣದಲ್ಲಿ 795 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 389 ವಿದೇಶಿಗರು ಹೈರಿಸ್ಕ್ ದೇಶದಿಂದ ಆಗಮಿಸಿದ್ದಾರೆ.
ಬೆಂಗಳೂರಿನಲ್ಲಿ 2,315 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,66,791 ಕ್ಕೆ ಏರಿದೆ. 5,739 ಜನರು ಡಿಸ್ಜಾರ್ಜ್ ಆಗಿದ್ದು 17,29,079 ಗುಣಮುಖರಾಗಿದ್ದಾರೆ. 17 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 16,741 ಆಗಿದೆ. ಸದ್ಯ 20,970 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ವೈರಸ್ ಅಪಡೇಟ್ಸ್ :
ಅಲ್ಪಾ- 156
ಬೇಟಾ-08
ಡೆಲ್ಟಾ ಸಬ್ ಲೈನ್ ಏಜ್- 4,431
ಇತರ- 286
ಒಮಿಕ್ರಾನ್-1,115
BAI.1.529- 807
BA1- 89
BA2-219
ಒಟ್ಟು- 5,996
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ:
ವಿಮಾನ ನಿಲ್ದಾಣದಿಂದ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ಪರಿಷ್ಕೃತ ಮಾರ್ಗಸೂಚಿ ಸರ್ಕಾರ ಬಿಡುಗಡೆಗೊಳಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿಮಾನಯಾನ ಸಂಸ್ಥೆಗಳು/ಏಜೆನ್ಸಿಗಳು ಪ್ರಯಾಣಿಕರಿಗೆ ಮಾಡಬೇಕಾದ ಮತ್ತು ಮಾಡಬಾರದವುಗಳನ್ನು ಟಿಕೆಟ್ ಜೊತೆಗೆ ಒದಗಿಸಬೇಕು.
ಏರ್ ಸುವಿಧಾ ಪೋರ್ಟಲ್‌ನಲ್ಲಿನ ಸ್ವಯಂ ಘೋಷಣೆ ಫಾರ್ಮ್‌ನಲ್ಲಿ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಮತ್ತು ನೆಗಟಿವ್ RT-PCR ಪರೀಕ್ಷಾ ವರದಿ ಅಥವಾ ಪ್ರಾಥಮಿಕ ಲಸಿಕೆ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಿದ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿಸಬೇಕು.
ವಿಮಾನವನ್ನು ಹತ್ತುವ ಸಮಯದಲ್ಲಿ, ಥರ್ಮಲ್ ಸ್ಕ್ರೀನಿಂಗ್ ನಂತರ ರೋಗ ಲಕ್ಷಣವಿಲ್ಲದ ಪ್ರಯಾಣಿಕರನ್ನು ಮಾತ್ರ ಹತ್ತಲು ಅನುಮತಿಸಲಾಗುತ್ತೆ. ಎಲ್ಲ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸಲಹೆ ನೀಡಲಾಗಿದೆ.
ಒಂದು ವೇಳೆ ನಿಲ್ದಾಣದಲ್ಲಿ ಸೋಂಕು ದೃಢಪಟ್ಟರೆ ಅಂತಹವರ ಸ್ಯಾಂಪಲ್ಸ್ ಅನ್ನ ಜಿನೋಮ್ ಸೀಕ್ವೇನ್ಸಿಂಗ್ ಕಳುಹಿಸಬೇಕು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿದೆ.
ಕೇಂದ್ರ ಸರ್ಕಾರ ಹಾಗೂ WHO ಮಾನ್ಯತೆ ಪಡೆದು ಲಸಿಕೆ ಪಡೆದು ಬರುವ ಅಂತಹ ದೇಶಗಳ ಪ್ರಯಾಣಿಕರನ್ನು ಮಾತ್ರ ವ್ಯಾಕ್ಸಿನೇಷನ್ ಪ್ರಮಾಣಪತ್ರದ ಆಧಾರದ ಮೇಲೆ ಪ್ರವೇಶವನ್ನು ಅನುಮತಿಸಲು ಪರಿಗಣಿಸಲಾಗುತ್ತದೆ ಮತ್ತು ಅವರ ಸಂಪೂರ್ಣ ಲಸಿಕೆ ಪ್ರಮಾಣಪತ್ರವನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಓದಿ : ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತದ ಉಡುಪು ಧರಿಸುವಂತಿಲ್ಲ.. ವಿಸ್ತೃತ ಪೀಠದಲ್ಲಿ ಹೀಗಿತ್ತು ವಾದ ಸರಣಿ!