ಕರ್ನಾಟಕ

karnataka

ETV Bharat / state

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೊಸ ಶಿಷ್ಯವೇತನ ಘೋಷಿಸಿದ ನೂತನ ಸಿಎಂ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಬಸವರಾಜ ಬೊಮ್ಮಾಯಿ, ಮೊದಲ ದಿನವೇ ಅನೇಕ ಹೊಸ ಘೋಷಣೆಗಳನ್ನು ಮಾಡುವ ಮೂಲಕ ಜನಪರ ಆಡಳಿತ ನೀಡುವ ಭರವಸೆ ಕೊಟ್ಟರು.

By

Published : Jul 28, 2021, 2:50 PM IST

Karnataka chief minister Bommai
Karnataka chief minister Bommai

ಬೆಂಗಳೂರು:ನೂತನ ಸಿಎಂ ಆಗಿ ಪದಗ್ರಹಣ ಮಾಡಿರುವ ಬಸವರಾಜ ಬೊಮ್ಮಾಯಿ ಮೊದಲ ದಿನವೇ ಅನೇಕ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದ್ದಾರೆ.

  • ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವಿದ್ಯಾರ್ಥಿ ವೇತನ ಯೋಜನೆ
    ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ನೂತನ ಸಿಎಂ ಬೊಮ್ಮಾಯಿ

ಅನ್ನದಾತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯವೇತನ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.

  • ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದಲ್ಲಿ ಹೆಚ್ಚಳ

ಇದೇ ವೇಳೆ ಸಂಧ್ಯಾ ಸುರಕ್ಷಾ ಯೋಜನೆಯನ್ನು 1 ಸಾವಿರ ರೂ.ನಿಂದ 1,200 ರೂ.ಗೆ ಹೆಚ್ಚಳ, ವಿಧವಾ ವೇತನ 600 ರೂ. ಇದ್ದು, ಇದೀಗ 800 ರೂ.ಗೆ ಏರಿಕೆ ಮಾಡಲಾಗಿದೆ. ಅಂಗವಿಕಲ ವೇತನ 600 ರೂ.ರಿಂದ 800 ರೂ.ಗೆ ಏರಿಕೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಾನು ರಬ್ಬರ್​ ಸ್ಟಾಂಪ್​ ಆಗಿರಲ್ಲ, ಆಡಳಿತಾತ್ಮಕ ಸ್ಟಾಂಪ್​ ಆಗುತ್ತೇನೆ: ಸಿಎಂ ಬೊಮ್ಮಾಯಿ

ನನ್ನ ಆಡಳಿತದಲ್ಲಿ ರೈತರು ಹಾಗೂ ಬಡವರ ಮಕ್ಕಳ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನೂತನ ಸಿಎಂ ತಿಳಿಸಿದರು.

ABOUT THE AUTHOR

...view details