ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಟಾಂಗ್​ ಕೊಡಲು ಬಿಜೆಪಿ ಬಳಿ ಪ್ಲಾನ್-ಬಿ ರೆಡಿ - ಮೇಕೆದಾಟು ಪಾದಯಾತ್ರೆ ವಿರೋಧಕ್ಕೆ ಬಿಜೆಪಿ ಸಿದ್ಧತೆ

ಕಾಂಗ್ರೆಸ್ ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ಸತ್ಯವನ್ನು ಜನರೆದುರು ಇಡುವ ಕೆಲಸಕ್ಕೆ ಕೇಸರಿಪಡೆ ಸಿದ್ಧವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಘಟಕ ಅಲರ್ಟ್ ಆಗಿದೆ..

karnataka-bjp-ready-for-plan-b-against-congress-mekedatu-padayatra
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಟಾಂಗ್​ ಕೊಡಲು ಬಿಜೆಪಿ ಪ್ಲಾನ್-ಬಿ

By

Published : Jan 9, 2022, 12:14 PM IST

ಬೆಂಗಳೂರು :ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್​ ಇಂದಿನಿಂದ ಪಾದಯಾತ್ರೆ ಆರಂಭಿಸಿದೆ. ಹೊಗೇನಕಲ್​​ನಿಂದ ಬೆಂಗಳೂರುವರೆಗೆ 10 ದಿನ ಪಾದಯಾತ್ರೆ ನಡೆಯಲಿದೆ. ಬಿಜೆಪಿಯು ಈ ಪಾದಯಾತ್ರೆಗೆ ಬ್ರೇಕ್ ಹಾಕಲು ಹಕ್ಕುಚ್ಯುತಿ ಆತಂಕದಿಂದ ಪ್ಲಾನ್-ಎ ಕೈಬಿಟ್ಟಿದ್ದು, ಪ್ಲಾನ್​-ಬಿ ಮೊರೆ ಹೋಗಿದೆ.

ರಾಜ್ಯದಲ್ಲಿ ಕೋವಿಡ್ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ವಾರಾಂತ್ಯದ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕಾಂಗ್ರೆಸ್​​ನ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಾಗಿಲ್ಲ. ಸಂಗಮದಲ್ಲಿ ವಿಧ್ಯು ಕ್ತವಾಗಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎರಡೂ ಸದನಗಳ ಕಾಂಗ್ರೆಸ್ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿರುವುದರಿಂದ ಪೊಲೀಸ್ ಬಲ ಪ್ರಯೋಗಿಸಿ ಪಾದಯಾತ್ರೆ ತಡೆದರೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ.

ಮತ್ತೊಂದು ವಿವಾದದಲ್ಲಿ ಸಿಲುಕುವ ಇರಾದೆ ಯಾಕೆ ಎನ್ನುವ ಕಾರಣಕ್ಕೆ ಪಾದಯಾತ್ರೆ ತಡೆಯುವ ಪ್ಲಾನ್​-ಎ ಬದಲು ಕೌಂಟರ್​ ಕೊಡಲು ಪ್ಲಾನ್​-ಬಿಗೆ ರಾಜ್ಯ ಕೇಸರಿ ಪಾಳಯ ಮೊರೆ ಹೋಗಿದೆ.

ಕೌಂಟರ್ ಟಾಂಗ್ ಟಾಸ್ಕ್ :ಪ್ಲಾನ್​-ಬಿ ಪ್ರಕಾರ ಪ್ರತಿ ಹಂತದಲ್ಲಿಯೂ ಕೌಂಟರ್ ಟಾಂಗ್ ಕೊಡುವ ಟಾಸ್ಕ್ ಅನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು, ರಾಜ್ಯ ಪದಾಧಿಕಾರಿಗಳು ಮೇಕೆದಾಟು ಪಾದಯಾತ್ರೆಗೆ ಪ್ರತಿಯಾಗಿ ಯೋಜನೆ ಕುರಿತು ಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಲಿದ್ದಾರೆ.

ಟ್ವೀಟ್​ಗಳ ಮೂಲಕ ಕಾಂಗ್ರೆಸ್​​ಗೆ ತಿರುಗೇಟು ನೀಡಲಿದ್ದಾರೆ. ಮಾಧ್ಯಮ ವಕ್ತಾರರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡಲಿದ್ದಾರೆ. ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ಸತ್ಯವನ್ನು ಜನರೆದುರು ಇಡುವ ಕೆಲಸಕ್ಕೆ ಕೇಸರಿಪಡೆ ಸಿದ್ಧವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಘಟಕ ಅಲರ್ಟ್ ಆಗಿದೆ.

ಸಚಿವ ಗೋವಿಂದ ಕಾರಜೋಳಗೆ ಮಾಹಿತಿ :ಪಾದಯಾತ್ರೆ ಆರಂಭದ ದಿನವಾದ ಇಂದು ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿರುವ ಬಿಜೆಪಿ ಎರಡು ಪುಟಗಳ ಜಾಹೀರಾತಿನಲ್ಲಿ ಮೇಕೆದಾಟು ಯೋಜನೆ ನಡೆದು ಬಂದ ಹಾದಿ, ವಿಳಂಬಕ್ಕೆ ಕಾರಣ, ಯಾರಿಂದ ವಿಳಂಬ, ಕೋರ್ಟ್ ಪ್ರಕರಣಗಳು ಹೀಗೆ ಸಮಗ್ರವಾದ ಮಾಹಿತಿ ನೀಡಿ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಕಾರಣದ್ದಾಗಿದೆ ಎನ್ನುವ ಸಂದೇಶವನ್ನು ಜನರಿಗೆ ತಲುಪಿಸುತ್ತಿದೆ.

ಇದರ ಜೊತೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರತಿ ಇಂಚಿಂಚು ಮಾಹಿತಿಯನ್ನು ಹೊರಗಿಡುವಂತೆ ತಿಳಿಸಲಾಗಿದೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ನಿರ್ದೇಶನ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿ ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕಾಂಗ್ರೆಸ್ ಪಾದಯಾತ್ರೆ ತಡೆಯಲು ಬಿಜೆಪಿ ಕೌಂಟರ್ ಟಾಂಗ್ ನೀಡುವ ಪ್ಲಾನ್​-ಬಿ ಮೊರೆ ಹೋಗಿದೆ. ಆದರೂ ಸರ್ಕಾರ ಕೋವಿಡ್ ನಿಯಮದನ್ವಯ ಪಾದಯಾತ್ರೆ ಸುಗಮವಾಗಿ ನಡೆಯಲು ಬಿಡಲಿದೆಯಾ ಅಥವಾ ಕ್ರಮಕ್ಕೆ ಮುಂದಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.

ಇದನ್ನೂ ಓದಿ:ರಾಜ್ಯದ ಜನರಿಗೆ ಮೇಕೆದಾಟು ನೀರು ಕೊಡಬಾರದು ಎಂಬುದೇ ಬಿಜೆಪಿ ಅಜೆಂಡಾ: ಸಿದ್ದರಾಮಯ್ಯ

ABOUT THE AUTHOR

...view details