ಕಾಂಗ್ರೆಸ್ಗೆ ಒಲಿದ ವಿಜಯಲಕ್ಷ್ಮಿ.. ಜಿಲ್ಲಾವಾರು ಫಲಿತಾಂಶದ ಮಾಹಿತಿ ಇಲ್ಲಿದೆ ನೋಡಿ.. - ಮತ ಎಣಿಕೆ ಆರಂಭ
ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾಗಿದ್ದ ಬಹುಮತವನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಜಿಲ್ಲಾವಾರು ಫಲಿತಾಂಶದ ವಿವರ ಇಲ್ಲಿದೆ ನೋಡಿ..
ಕರ್ನಾಟಕ ಚುನಾವಣಾ ಫಲಿತಾಂಶ
By
Published : May 13, 2023, 3:42 PM IST
|
Updated : May 13, 2023, 9:11 PM IST
ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಮೇ 10 ರಂದು ರಾಜ್ಯದ ಎಲ್ಲ 224 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರವನ್ನು ರಚಿಸಲು ಬೇಕಾದ ಬಹುಮತವನ್ನು ಪಡೆದಿದೆ. ಜಿಲ್ಲಾವಾರು ಯಾವ ಪಕ್ಷ ಎಷ್ಟೆಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಭಾರತೀಯ ಜನತಾ ಪಕ್ಷವು 8 ಜಿಲ್ಲೆಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳನ್ನಷ್ಟೇ ಗೆದ್ದಿದೆ. ಮುಖ್ಯಮಂತ್ರಿ ಅವರ ತವರು ಜಿಲ್ಲೆಯಲ್ಲಿ 6 ಕ್ಷೇತ್ರಗಳ ಪೈಕಿ ಕೇವಲ ಒಂದೇ ಸ್ಥಾನ ಬಿಜೆಪಿಗೆ ಒಲಿದಿದೆ. ಶಿಗ್ಗಾವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರು ಗೆದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಒಂದು ಕ್ಷೇತ್ರ- ಹೊಳಲ್ಕೆರೆಯಲ್ಲಿ ಎಂ. ಚಂದ್ರಪ್ಪ ಅವರು ಜಯ ಸಾಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಸಾಧಿಸಿದೆ. ಮೈಸೂರು ಜಿಲ್ಲೆಯ ಪೈಕಿ ಕೃಷ್ಣರಾಜ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀವತ್ಸ ಗೆಲುವಿನ ನಗೆ ಬೀರಿದ್ದಾರೆ. ವಿಜಯನಗರ ಜಿಲ್ಲೆಯ ಪೈಕಿ ಹಡಗಲಿ ಕ್ಷೇತ್ರದಲ್ಲಿ ಕೃಷ್ಣಾ ನಾಯಕ್ ಗೆದ್ದಿದ್ದಾರೆ.
ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿದ್ದಾರೆ. ವಿಜಯಪುರ ಜಿಲ್ಲೆಯ ಪೈಕಿ ಬಿಜೆಪಿಯಿಂದ ಯತ್ನಾಳ್ ಒಬ್ಬರೇ ಜಯ ಸಾಧಿಸಿದ್ದಾರೆ.
9 ಜಿಲ್ಲೆಗಳಲ್ಲಿ ಶೂನ್ಯ ಸಾಧನೆ.. ಈ ಚುನಾವಣೆಯಲ್ಲಿ ಬಿಜೆಪಿ 9 ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆಯದೇ ಹೀನಾಯ ಸೋಲು ಕಂಡಿದೆ. 9 ಜಿಲ್ಲೆಗಳ ಶೂನ್ಯ ಸಾಧನೆ ಮಾಡಿದೆ. 24 ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿ ಹೀನಾಯ ಸೋಲುಂಡಿದೆ. ಕೊಡಗು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬಳ್ಳಾರಿ, ಮಂಡ್ಯ, ಯಾದಗಿರಿ ರಾಮನಗರ ಸೇರಿದಂತೆ ಈ 9 ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಶೂನ್ಯ ಸಾಧನೆ ಮಾಡಿರುವುದು ಪಕ್ಷದ ನಾಯಕರ ನಿದ್ದೆಗೆಡಿಸಿದೆ.