ಕರ್ನಾಟಕ

karnataka

ETV Bharat / state

ವಿದ್ಯಾರ್ಥಿ ಸ್ನೇಹಿ ಬಜೆಟ್​​ ಮಂಡಿಸಲಿದ್ದಾರಾ ಸಿಎಂ ಬಿಎಸ್​ವೈ? - ಕರ್ನಾಟಕ ಬಜೆಟ್ 2022

ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ವಿದ್ಯಾರ್ಥಿ ಸ್ನೇಹಿ ಬಜೆಟ್ ಮಂಡನೆಯಾಗಲಿದೆಯಾ ಎಂಬ ಕುತೂಹಲ ಮೂಡಿದೆ.

karnakata state budjet 2020
ಕರ್ನಾಟಕ ಬಜೆಟ್ 2022

By

Published : Mar 4, 2020, 10:23 PM IST

ಬೆಂಗಳೂರು: ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ವಿದ್ಯಾರ್ಥಿ ಸ್ನೇಹಿ ಬಜೆಟ್ ಮಂಡನೆಯಾಗಲಿದೆಯಾ ಎಂಬ ಕುತೂಹಲ ಮೂಡಿದೆ. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್​​​ನಲ್ಲಿ ಕೇವಲ 11%ರಷ್ಟು ಹಣ ಮೀಸಲಿಟ್ಟು, ಆ ಮೂಲಕ 0.68% ಹಣ ಕಡಿತ ಮಾಡುವ ಮೂಲಕ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸಲಾಗಿದೆ ಎಂದು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಹೀಗಾಗಿ ಈ ಬಾರಿಯ ಬಜೆಟ್ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆ ಮೂಡಿದೆ.

ಇನ್ನು ವಿದ್ಯಾರ್ಥಿಗಳಿಗೆ ಉಚಿತ ಬಸ್​​ ಪಾಸ್ ನೀಡುವುದಾಗಿ ಹೇಳಿದ್ದ ಹಿಂದಿನ ಸರ್ಕಾರ, ಬಜೆಟ್​​​ನಲ್ಲಿ ಆ ಬಗ್ಗೆ ಪ್ರಸ್ತಾಪವನ್ನು ಮಾಡದೇ ಸುಮ್ಮನಿತ್ತು. ಹೀಗಾಗಿ ಈ ಬಾರಿ‌ ಬಿಜೆಪಿ ಸರ್ಕಾರ ಉಚಿತ ಬಸ್ ​​​ಪಾಸ್ ನೀಡಲಿದೆಯಾ ಕಾದು ನೋಡಬೇಕು. ರಾಜ್ಯದಲ್ಲಿ 55 ಸಾವಿರಕ್ಕೂ ಹೆಚ್ಚು ಶಾಲೆಗಳು ಮೂಲ ಸೌಲಭ್ಯವಿಲ್ಲದೆ ನರಳುತ್ತಿವೆ. ಆದರೆ ಈ ಹಿಂದಿನ ಬಜೆಟ್​​​​ನಲ್ಲಿ ಕೇವಲ 5,000 ಶಾಲೆಗಳಿಗೆ ಮೂಲ ಸೌಲಭ್ಯ ನೀಡುವುದಾಗಿ ಪ್ರಸ್ತಾಪಿಸಲಾಗಿತ್ತು.

ಜೊತೆಗೆ 1,000 ಶಾಲೆಗಳಿಗೆ ಮಾತ್ರ ಕಲಿಕಾ ಸಾಮಗ್ರಿಗಳಿಗೆ ಹಣ ತೆಗೆದಿಡಲಾಗಿತ್ತು. ‌ಆದರೆ ಉಳಿದ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳ ಅಗತ್ಯವಿಲ್ಲವೆ ಎಂಬ ಪ್ರಶ್ನೆ ಕಾಡಿತ್ತು. ಇವೆಲ್ಲಾ ಅಂಶಗಳನ್ನು ಪರಿಗಣಿಸಿ ಬಜೆಟ್​​​ನಲ್ಲಿ ವಿದ್ಯಾರ್ಥಿ ಸ್ನೇಹಿ ಬಜೆಟ್​​​ ಮಂಡನೆ ಆಗಲಿದೆಯಾ ಕಾದು ನೋಡಬೇಕಿದೆ. ಜೊತೆಗೆ ರಾಜ್ಯದಲ್ಲಿ 119 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರನ್ನು ಶಾಲೆಗೆ ಮರಳಿ ತರುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ತಾಪಿಸುವ ನಿರೀಕ್ಷೆ ಇದೆ.

ABOUT THE AUTHOR

...view details