ಕರ್ನಾಟಕ

karnataka

ETV Bharat / state

ಯಯಾತಿ ಸೂತ್ರದಾರ ಇನ್ನೂ ನೆನಪಷ್ಟೇ.. ಜ್ಞಾನಪೀಠ ಪುರಸ್ಕೃತ ಗಿರೀಶ್‌ ಕಾರ್ನಾಡ್ ವಿಧಿವಶ! - undefined

ಗಿರೀಶ್​ ಕಾರ್ನಾಡ್​ ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನ ಹೊಂದಿದ್ದಾರೆ.

ಗಿರೀಶ್​ ಕಾರ್ನಾಡ್

By

Published : Jun 10, 2019, 9:34 AM IST

Updated : Jun 10, 2019, 10:08 AM IST

ಬೆಂಗಳೂರು:ಜ್ಞಾನಪೀಠ ಪುರಸ್ಕೃತ ಗಿರೀಶ್​ ಕಾರ್ನಾಡ್​ ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನ ಹೊಂದಿದ್ದಾರೆ.

81 ವರ್ಷದ ಕಾರ್ನಾಡ್​​ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ನಿವಾಸದಲ್ಲಿ ವಿಧಿವಶವಾಗಿದ್ದಾರೆ. ಒಂದು ತಿಂಗಳಿನಿಂದ ಅನಾರೋಗ್ಯದಿಂದ ಕಾರ್ನಾಡ್​​ ಬಳಲುತ್ತಿದ್ದರು.

1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್​​ನಲ್ಲಿ ಜನಿಸಿದರು. ಇವರ ತಂದೆ ರಘುನಾಥ್​​​​ ಹಾಗೂ ತಾಯಿ ಕೃಷ್ಣಾಬಾಯಿ. ಇವರು ಕನ್ನಡಕ್ಕೆ 7ನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಗಿರೀಶ್​ ಕಾರ್ನಾಡ್​

ದೇಶ- ವಿದೇಶಗಳಲ್ಲಿ ಇವರ ನಾಟಕಗಳು ಪ್ರದರ್ಶನಗೊಂಡಿವೆ. ಇವರು ನಟ, ಹಿರಿಯ ಸಾಹಿತಿ, ನಿರ್ದೇಶಕ ಹಾಗೂ ನಾಟಕಗಾರಗಾಗಿದ್ದರು. ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ. ಧಾರವಾಡದ ಬಾಷೆಲ್ ಮಿಷನ್​ ಶಾಲೆಯಲ್ಲಿ ಫ್ರೌಡಶಿಕ್ಷಣವನ್ನು ಮುಗಿಸಿದ್ದಾರೆ. ಆಕ್ಸ್​​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದಾರೆ.

ಗಿರೀಶ್​ ಕಾರ್ನಾಡ್​

ಗುಬ್ಬಿ ವೀರಣ್ಣ ಪ್ರಶಸ್ತಿ, ಪುಟ್ಟಣ್ಣ ಕಣಗಲ್​ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

Last Updated : Jun 10, 2019, 10:08 AM IST

For All Latest Updates

TAGGED:

ABOUT THE AUTHOR

...view details