ಬೆಂಗಳೂರು :ಜೆಡಿಎಸ್ ನ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಭಾನುವಾರದಿಂದ (ಡಿ. 11) ಪುನಾರಂಭ ಆಗಲಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ .ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಚಿಕ್ಕನಾಯಕನಹಳ್ಳಿಯಿಂದ ಪುನಾರಂಭವಾಗಲಿದೆ.
ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣಕ್ಕೆ 3 ದಿನ ಯಾತ್ರೆಗೆ ಬ್ರೇಕ್ ನೀಡಿದ್ದ ಕುಮಾರಸ್ವಾಮಿ ಅವರು, ನಾಳೆಯಿಂದ ಮತ್ತೆ ಚಾಲನೆ ನೀಡಲಿದ್ದಾರೆ. ಭಾನುವಾರ ಬೆಳಗ್ಗೆ 9.30 ಕ್ಕೆ ಚಿಕ್ಕನಾಯಕನಹಳ್ಳಿಯ ಬೆಂಜಿ ಗೇಟ್ ನಿಂದ ಆರಂಭವಾಗಲಿದ್ದು, ಒಂದು ದಿನಕ್ಕೆ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ ಡಿಕೆ ರಥಯಾತ್ರೆ ಮಾಡಲಿದ್ದಾರೆ.