ಕರ್ನಾಟಕ

karnataka

ETV Bharat / state

ಉದ್ದೇಶ ಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ: ಡಿಕೆಶಿ ಸ್ಪಷ್ಟನೆ - ಡಿ.ಕೆ. ಶಿವಕುಮಾರ್ ಹೇಳಿಕೆ

ತಾವು ಉದ್ದೇಶಪೂರ್ವಕವಾಗಿ ಜೆಡಿಎಸ್​ ಬಾವುಟ ಹಿಡಿದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ. ರಾಜ್ಯಕ್ಕೆ ವಾಪಸ್​ ಬಂದ ದಿನ ಕನ್ನಡ ಬಾವುಟ ಸೇರಿದಂತೆ ಹಲವಾರು ಬಾವುಟಗಳನ್ನು ಕೊಟ್ಟಿದ್ದರು. ಅದನ್ನ ನಾನು ಹಿಡಿದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಉದ್ದೇಶ ಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ: ಡಿಕೆಶಿ ಸ್ಪಷ್ಟನೆ

By

Published : Oct 28, 2019, 1:28 PM IST

ಬೆಂಗಳೂರು: ತಾವು ಉದ್ದೇಶಪೂರ್ವಕವಾಗಿ ಜೆಡಿಎಸ್​ ಬಾವುಟ ಹಿಡಿದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಉದ್ದೇಶ ಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ: ಡಿಕೆಶಿ ಸ್ಪಷ್ಟನೆ

ರಾಜ್ಯಕ್ಕೆ ವಾಪಸ್​ ಬಂದ ದಿನ ಕನ್ನಡ ಬಾವುಟ ಸೇರಿದಂತೆ ಹಲವಾರು ಬಾವುಟಗಳನ್ನು ಕೊಟ್ಟಿದ್ದರು. ಅದನ್ನ ನಾನು ಹಿಡಿದುಕೊಂಡಿದ್ದೆ. ಉದ್ದೇಶಪೂರ್ವಕವಾಗಿ ಜೆಡಿಎಸ್ ಬಾವುಟ ಹಿಡಿದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನನ್ನ ಹಿತೈಷಿ, ಅವರು ಆ ರೀತಿ ಮಾತನಾಡಿಲ್ಲ ಅನಿಸುತ್ತೆ. ಮಿಸ್ಟೇಕ್ ಮಾಡಿಕೊಂಡಿರಬೇಕು. ನಾನು ಹುಟ್ಟುತ್ತಲೇ ಕಾಂಗ್ರೆಸ್ ಮನುಷ್ಯ. ದೆಹಲಿಯಿಂದ ನೇರವಾಗಿ ಕಾಂಗ್ರೆಸ್ ಕಚೇರಿಗೆ ಬಂದೆ ಎಂದಿದ್ದಾರೆ. ಈಗಲೂ ಜೆಡಿಎಸ್ ಶಾಸಕರು ಬಂದಿದ್ದಾರೆ. ಬರಬೇಡಿ ಅಂತ ನಾನು ಹೇಳುವುದಕ್ಕೆ ಆಗಲ್ಲ ಎಂದರು.

ಚೆಲುವರಾಯಸ್ವಾಮಿ ಭೇಟಿ: ಇಂದು ಡಿಕೆ ಶಿವಕುಮಾರ್ ಅವರನ್ನು ಮಾಜಿ ಸಚಿವ ಚಲುವರಾಯಸ್ವಾಮಿ ಭೇಟಿ ಮಾಡಿದರು. ನಂತರ ಮಾತನಾಡಿ, ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಅವರನ್ನು ಮಾತನಾಡಿಸಲು ಆಗಿರಲಿಲ್ಲ. ನಿನ್ನೆ ಮಾತಾಡಿದಾಗ ಇವತ್ತು ಬಂದು ಹೋಗು ಅಂದಿದ್ರು. ಅಂತಿಮವಾಗಿ ಇಡಿ ಇಂದ ಬಿಡುಗಡೆ ಆಗಿದ್ದಾರೆ. ಮುಂದೆ ಯಾವುದೇ ರೀತಿಯ ತೊಂದರೆ ಇಲ್ಲದೆ ಎಲ್ಲಾ ದಾಖಲೆಯನ್ನು ಸರಿಯಾಗಿ ಇಟ್ಟುಕೊಂಡಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ವೀಡಿಯೋ ವಿಚಾರ ಮಾತನಾಡಿ, ಯಾರೋ ಸಿದ್ದರಾಮಯ್ಯ ಅವರ ಫೋಟೊ ತೆಗೆದುಕೊಳ್ಳುತ್ತೇವೆ ಅಂತ ಹೋಗಿ ವೀಡಿಯೋ ಮಾಡಿಕೊಂಡು ಸ್ಟೇಟಸ್ ಗೆ ಹಾಕಿ ಕೊಂಡಿದ್ದಾರೆ ಅದು ವೈರಲ್ ಆಗಿದೆ. ಏರ್ ಪೋರ್ಟ್ ನಿಂದ ಬರುವಾಗ ಜೆಡಿಎಸ್ ಬಾವುಟ ಹಿಡಿದ್ದಿದ್ದಾರೆ ಅನ್ನೊದು ವಿಚಾರ ಬಗ್ಗೆ ಮಾತಾಡಿದ್ದಾರೆ. ನನಗೆ ದೇವೆಗೌಡರು‌‌‍‍ ಸಿಕ್ಕರೆ, ಮಾತಾಡುತ್ತೇನೆ ‌‌‌‌ಹಾಗೆ ಕುಮಾರಸ್ವಾಮಿ ಅವರು ಸಿಕ್ರು ನಿಂತು ಮಾತಾಡಿಸುತ್ತೇನೆ ಎಂದರು.

ಪಾರ್ಟಿ ಹೈಕಮಾಂಡ್ ಬೆಂಬಲಿಸಬೇಕು ಅಂತ ಹೇಳಿತ್ತು. ನಂತರ ಹೊರಗಡೆ ಬಂದ ಮೇಲೆ ಜನತಾದಳದ ಎಲ್ಲಾ ಮುಖಂಡರು ನಿಮ್ಮ ಸಾಹವಾಸ ಬೇಡ ಅಂದ್ರು. ಒಂದು ಕಡೆ ಹಾಗೆ ಹೇಳಿದ ಕುಮಾರಸ್ವಾಮಿ ನಿನ್ನೆ ಡಿಕೆ ಶಿವಕುಮಾರ್ ಅವರನ್ನು ಬರಮಾಡಿಕೊಂಡು ಸಾಫ್ಟ್ ಕಾರ್ನರ್ ತೋರಿಸಿದ್ರು. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಹಂತದಲ್ಲಿ ಹೀಗೆಲ್ಲಾ ಆಗುತ್ತಿರೊ ಬಗ್ಗೆ ಮಾತಾಡಿದ್ದಾರೆ ಅಷ್ಟೇ. ಪರಮೇಶ್ವರ್ ಅವರು ಖರ್ಗೆ ಅವರು ಎಲ್ಲರ ನಾಯಕರು ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತಾರೆ ಎಂದರು.

ABOUT THE AUTHOR

...view details