ಕರ್ನಾಟಕ

karnataka

ETV Bharat / state

ತುರ್ತು ಪರಿಸ್ಥಿತಿ ಬಳಿಕ ಮೊದಲ ಸಲ ಸಸ್ಯಕಾಶಿ ಲಾಲ್ ಬಾಗ್ ಬಂದ್​... ಇದು ಕೊರೊನಾ ಎಫೆಕ್ಟ್​ - Janata Curfew banglore news

ಪ್ರಧಾನಿ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಭಾನುವಾರ ಸಸ್ಯಕಾಶಿ ಲಾಲ್ ಬಾಗ್ ಮತ್ತು ಕಬ್ಬನ್​ ಪಾರ್ಕ್​ ಬಂದ್​ ಮಾಡಲಾಗುತ್ತಿದೆ.

banglore
ಲಾಲ್ ಬಾಗ್

By

Published : Mar 21, 2020, 4:42 AM IST

ಬೆಂಗಳೂರು:ಪ್ರಧಾನಿ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಎಲ್ಲರಿಂದ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊರೊನಾ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿರುವ ಸಸ್ಯಕಾಶಿ ಪ್ರಸಿದ್ಧಿ ಲಾಲ್ ಬಾಗ್ ಬಂದ್​ ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿ ಬಳಿಕ ಇದೇ ಮೊದಲ ಬಾರಿಗೆ ಬಂದ್​ ಮಾಡಲಾಗುತ್ತಿದ್ದು, ಇದರ ಜತೆಗೆ ಕಬ್ಬನ್​ ಪಾರ್ಕ್​ ಸಹ ಸ್ತಬ್ಧಗೊಳ್ಳಲಿದೆ.

ಮಾರ್ಚ್ 22 ರಂದು ಭಾಗಶಃ ಸಂಪೂರ್ಣ ಬಂದ್ ಆಗಲಿದ್ದು, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ತುರ್ತು ಪರಿಸ್ಥಿತಿ ವೇಳೆ ಲಾಲ್​ಬಾಗ್​ ಬಂದ್​ ಮಾಡಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿ ತಾಣವಾಗಿರುವ ಸಸ್ಯಕಾಶಿ ಲಾಲ್ ಬಾಗ್​ಗೆ ಪ್ರವೇಶ ನಿರಾಕರಿಸಲು ತೋಟಗಾರಿಕೆ‌ ಇಲಾಖೆ ಮುಂದಾಗಿದೆ. ಇನ್ನು ದೇಶ-ವಿದೇಶಗಳಿಂದಲೇ ಹೆಚ್ಚು ಜನರು ಬರುವುದರಿಂದ ಕೊರೊನಾ ವೈರಸ್​ ಸೋಂಕು ಹರಡುವ ಸಾಧ್ಯತೆ ಹಚ್ಚಾಗಿರುವ ಕಾರಣ ಲಾಲ್ ಬಾಗ್​ ಮತ್ತು ಕಬ್ಬನ್​ ಪಾರ್ಕ್​ಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ಜನತಾ ಕರ್ಫ್ಯೂ ಹಿನ್ನಲೆ ಲಾಲ್ ಬಾಗ್ ಮತ್ತು ಕಬ್ಬನ್​ ಪಾರ್ಕ್​ಗೆ ಪ್ರವೇಶ ನಿರ್ಷಧ.

ಸರ್ಕಾರ ಕೊರೊನಾ ಬಗ್ಗೆ ಹೆಚ್ಚಿನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭಾನುವಾರ ಪಾರ್ಕ್​ಗಳನ್ನು ಬಂದ್ ಮಾಡಲು ಮುಂದಾಗಿದೆ. ಇದರ ಜತೆಗೆ ಈಗಾಗಲೇ ಸಿನಿಮಾ ಮಂದಿರ, ಪಬ್​,ಬಾರ್​, ರೆಸ್ಟೋರೆಂಟ್​ ಸೇರಿ ಅನೇಕ ಪ್ರಮುಖ ಸ್ಥಳ ಬಂದ್​ ಮಾಡಲಾಗಿದೆ.

ABOUT THE AUTHOR

...view details