ಕರ್ನಾಟಕ

karnataka

ETV Bharat / state

ನಾನು ಯಾರಿಗೂ ನೋವು ಮಾಡಿಲ್ಲ, ಒಂದು ವೇಳೆ ಆಗಿದ್ರೆ ಶಾಸಕರಲ್ಲಿ ಕ್ಷಮೆ ಕೇಳುವೆ: ರೇವಣ್ಣ - etv bharat

ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಮಾತ್ರ ನಾನು ಮಾಡಿದ್ದೇನೆ, ಬೇರೇನೂ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ ಹೊರತು ಕೆಆರ್​ಐಡಿಎಲ್​ಗಾಗಲಿ, ಬಿಬಿಎಂಪಿಗಾಗಲಿ ನನಗೆ ಗುತ್ತಿಗೆ ಕೊಡಬೇಕು ಎಂದಿಲ್ಲ ಮತ್ತು ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ಅತೃಪ್ತರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೇನೆ: ಹೆಚ್ ಡಿ ರೇವಣ್ಣ

By

Published : Jul 17, 2019, 5:05 PM IST

ಬೆಂಗಳೂರು:ನಾನು ನನ್ನ ಇಲಾಖೆ ಬಿಟ್ಟು ಯಾವುದೇ ಇಲಾಖೆಯ ಕೆಲಸಕ್ಕೆ ಕೈ ಹಾಕಿಲ್ಲ. ನಾನು ಯಾರಿಗೂ ನೋವು ಮಾಡಿಲ್ಲ. ಒಂದು ವೇಳೆ ನೋವು ಅಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಹಾಗೂ ದೇವರ ಆಶೀರ್ವಾದದಿಂದ ನಾನು ಈ ಸ್ಥಾನದಲ್ಲಿದ್ದೇನೆ. ನಮ್ಮ ಕುಟುಂಬದಲ್ಲಿ ಯಾವುದೇ ಒಡಕು ಇಲ್ಲ. ಡಿಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಈ ಬೆಳವಣಿಗೆ ಬಗ್ಗೆ ಗೊತ್ತಿಲ್ಲ ಎಂದರು. ಹಾಗೂ ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸ ಮಾತ್ರ ನಾನು ಮಾಡಿದ್ದೇನೆ, ಬೇರೇನೂ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರು ರಸ್ತೆಯ ಅಭಿವೃದ್ಧಿ ವಿಚಾರದಲ್ಲಷ್ಟೇ ನಾನು ಕೆಲಸ ಮಾಡಿದ್ದೇನೆ ಹೊರತು ಕೆಆರ್​ಐಡಿಎಲ್​ಗಾಗಲಿ, ಬಿಬಿಎಂಪಿಗಾಗಲಿ ನನಗೆ ಗುತ್ತಿಗೆ ಕೊಡಬೇಕು ಎಂದಿಲ್ಲ ಮತ್ತು ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಸತಿ ಇಲಾಖೆ ಕಾರ್ಯದರ್ಶಿಯನ್ನು ಯಾರ್ ಹಾಕಿದಾರೋ ಗೊತ್ತಿಲ್ಲ. ಆ ಬಗ್ಗೆ ರಿಯಾಕ್ಟ್ ಮಾಡಲ್ಲ. ಕಾರ್ಯದರ್ಶಿ ನೇಮಕ ಸಿಎಂ ಮಾಡೋದು, ಅವರನ್ನ ಕೇಳಿ ಎಂದರು.

ಸಚಿವ ಹೆಚ್.ಡಿ.ರೇವಣ್ಣ

ನಂತರ ಬೆಂಗಳೂರಿನ ಕಾಮಗಾರಿಯಲ್ಲಿ ಬೆಂಗಳೂರು ಶಾಸಕರ ಕಡೆಗಣನೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಬೆಂಗಳೂರು-ಹೊಸೂರು ರಸ್ತೆ ಟ್ರಾಫಿಕ್ ನಿವಾರಿಸುವ ಹಿನ್ನೆಲೆಯಲ್ಲಿ 2004ರಲ್ಲಿ ಸಭೆ ನಡೆಸಿದ್ದೆ. ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 200 ಕೋಟಿ, ರಾಜ್ಯದ 100 ಕೋಟಿ, ಕಾರ್ಪೋರೇಟ್ ಸಂಸ್ಥೆಗಳಿಂದ 100 ಕೋಟಿ ನೀಡುವುದು ಎಂದು 2004ರ ಸಭೆಯಲ್ಲಿ ನಿರ್ಧಾರವಾಗಿತ್ತು. ಯೋಜನೆಗೆ ಕೇಂದ್ರ ಸರ್ಕಾರವಾಗಲಿ, ಕಾರ್ಪೋರೇಟ್ ಸಂಸ್ಥೆಗಳಾಗಲಿ ಹಣ ನೀಡಲಿಲ್ಲ. ಕೊನೆಗೆ ಗುತ್ತಿಗೆದಾರರೇ ಹಣ ಹೊಂದಿಕೆ ಮಾಡಿದ್ದರು. ಆದರೆ ಅಷ್ಟರಲ್ಲಿ ನಾನು ಅಧಿಕಾರ ಕಳೆದುಕೊಂಡೆ ಎಂದರು.

ABOUT THE AUTHOR

...view details