ಬೆಂಗಳೂರು:ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು 1 ಲಕ್ಷ ರೂ. ಮೌಲ್ಯದ ಪಿಪಿಟಿ ಕಿಟ್ ಅನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ವಿತರಿಸಿದರು.
ವಿಕ್ಟೋರಿಯಾ ಆಸ್ಪತ್ರೆಗೆ 1ಲಕ್ಷ ರೂ. ಮೌಲ್ಯದ ಪಿಪಿಟಿ ಕಿಟ್ ವಿತರಿಸಿದ ಖಂಡ್ರೆ - ಸರಿ ಸುಮಾರು 50 ಕಿಟ್ಗಳನ್ನ ಉಚಿತವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ನೀಡಿದ ಈಶ್ವರ್ ಖಂಡ್ರೆ
ಕೋವಿಡ್ 19 ಚಿಕಿತ್ಸೆಗೆ ವೈದ್ಯರಿಗೆ ಅವಶ್ಯಕವಾಗಿರುವ 50 ಕಿಟ್ಗಳನ್ನ ಉಚಿತವಾಗಿ ವಿಕ್ಟೋರಿಯಾ ಆಸ್ಪತ್ರೆ ಬಳಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಗೆ ಒಂದು ಲಕ್ಷ ರೂ. ಮೌಲ್ಯದ ಪಿಪಿಟಿ ಕಿಟ್ ವಿತರಿಸಿದ ಖಂಡ್ರೆ
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಕಿಟ್ಗಳನ್ನು ವಿತರಿಸಿದರು.
ಖಂಡ್ರೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿಕ್ಟೋರಿಯಾ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಟ್ ಡಾಕ್ಟರ್ ಗೀತಾ ಶಿವಮೂರ್ತಿ, ಈ ರೀತಿ ಹೆಚ್ಚಿನ ಸಹಕಾರ ಸಿಕ್ಕರೆ ರೋಗ ಎದುರಿಸಲು ಅನುಕೂಲವಾಗುತ್ತದೆ ಮತ್ತು ನೈತಿಕ ಬಲ ಹೆಚ್ಚಳವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವೈದ್ಯರ ಘಟಕದ ಸದಸ್ಯರು ಹಾಗೂ ಬೆಂಗಳೂರಿನ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.