ಆನೇಕಲ್: ಚಿಟ್ಟೆಗಳಿಗೆ ಸಮರ್ಪಕವಾದ ಪೋಷಕ ಹೂ ಗಿಡಗಳ ಕೊರತೆ ಇರುವುದನ್ನು ಮನಗಂಡ ಎಲೆಕ್ಟ್ರಾನಿಕ್ ಮದರ್ರ್ಬೋರ್ಡ್ ದೈತ್ಯ ಇಂಟೆಲ್, ನೂರಾರು ಗಿಡಗಳನ್ನು ನೆಡುವುದರ ಮುಖಾಂತರ ಚಿಟ್ಟೆಗಳ ಸಮುದಾಯದ ಉಳಿವಿಗೆ ಶ್ರಮಿಸಿದ್ದಾರೆ.
ಚಿಟ್ಟೆಗಳ ಉಳುವಿಗಾಗಿ ಬನ್ನೇರುಗಟ್ಟ ಉದ್ಯಾನದಲ್ಲಿ ಗಿಡ ನೆಟ್ಟ ಇಂಟೆಲ್ ಉದ್ಯೋಗಿಗಳು! - Intel employees
ಚಿಟ್ಟೆಗಳಿಗೆ ಸಮರ್ಪಕವಾದ ಹೂ ಗಿಡಗಳ ಕೊರತೆಯನ್ನು ಮನಗಂಡ ಇಂಟೆಲ್ ಉದ್ಯೋಗಿಗಳು ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿಟ್ಟೆಗಳಿಗೆ ಪೂರಕವಾದ ಗಿಡಗಳನ್ನು ನೆಡುವ ಮೂಲಕ ಚಿಟ್ಟೆಗಳ ಉಳಿವಿಗೆ ಶ್ರಮಿಸಿದ್ದಾರೆ.
ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ಸಹಕಾರದಿಂದ ಬೆಂಗಳೂರಿನ ಇಂಟೆಲ್ ಉದ್ಯೋಗಿಗಳು ಮಧ್ಯಾಹ್ನದವರೆಗೆ ವನದಲ್ಲಿ ಗಿಡ ನೆಟ್ಟು ಸಾರ್ಥಕತೆ ಮೆರೆದರು. ಈಗಾಗಲೇ ಚಿಟ್ಟೆ ಪಾರ್ಕ್ ಬನ್ನೇರುಘಟ್ಟದಲ್ಲಿದ್ದು, ಚಿಟ್ಟೆಗಳ ಉಳಿವಿನ ಬಗ್ಗೆ ಅರಿತ ಇಂಟೆಲ್, ಈ ಕಾರ್ಯಕ್ಕೆ ಚಾಲನೆ ನೀಡಿದೆ. ಸುತ್ತಲ ಚಿಟ್ಟೆಗಳಿಗೆ ಆಹಾರ ಒದಗಿಸಿ ಸಣ್ಣ ನೆರವು ನೀಡಿರುವುದು ಅರಣ್ಯಾಧಿಕಾರಿಗಳಿಗೆ ಹಾಗೂ ಪ್ರಾಣಿ ಪ್ರಿಯರಿಗೆ ಸಂತಸ ತಂದಿದೆ.
ಪರಿಸರ ಸಮತೋಲನದಲ್ಲಿರಬೇಕಾದರೆ ಸಕಲ ಜೀವರಾಶಿಗಳ ಕೊಡುಗೆ ಅಪಾರವಾದದ್ದು. ಹಾಗೆಯೇ ಕಾಲಕಾಲಕ್ಕೆ ಮಳೆ ಬೆಳೆ ಬಂದು ಸಮನ್ವಯತೆ ಕಾಯ್ದುಕೊಂಡಿದ್ದರೆ ಮಾತ್ರ ಪರಿಸರ ಶಾಂತವಾಗಿರುತ್ತದೆ. ಅಂತಹ ಕೆಲ ಜೀವ ಸಂಕುಲಗಳಲ್ಲಿ ಚಿಟ್ಟೆ ಸಮುದಾಯವೂ ಒಂದು.