ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಕುರಿತಂತೆ ವರದಿ ಸಲ್ಲಿಸಲು ರಚಿತವಾಗಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗಕ್ಕೆ ಅಹವಾಲು ಅಥವಾ ಸಲಹೆಗಳನ್ನು ಜೂನ್ 8 ರೊಳಗೆ ಸಲ್ಲಿಸುವಂತೆ ಆಯೋಗವು ತಿಳಿಸಿದೆ.
ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಮೂರು ತಿಂಗಳೊಳಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಸೂಚಿಸಿದೆ. ಸಾರ್ವಜನಿಕರು, ವಿಶೇಷವಾಗಿ ಜನ ಪ್ರತಿನಿಧಿಗಳು, ಕಾರ್ಯದರ್ಶಿಗಳು, ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗ, ಕೊಠಡಿ ಸಂಖ್ಯೆ : 133 ಮತ್ತು 134, ಮೊದಲನೇ ಮಹಡಿ ವಿಕಾಸಸೌಧ, ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು – 560 001 ಇವರಿಗೆ ತಮ್ಮ ಅಹವಾಲು ಅಥವಾ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು.