ಬೆಂಗಳೂರು :ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) 2023ರ 26ನೇ ಆವೃತ್ತಿಯಲ್ಲಿ ವಿವಿಧ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ 35 ವಿನೂತನ ಉತ್ಪನ್ನಗಳನ್ನು ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ಮತ್ತು ಎಸ್ ಅಂಡ್ ಟಿ ಇಲಾಖೆಯು ಅನಾವರಣಗೊಳಿಸಿದೆ.
ಶೃಂಗಸಭೆಯ 2 ಮತ್ತು 3ನೇ ದಿನದಲ್ಲಿ ಸ್ಟಾರ್ಟ್ಅಪ್ ಇನ್ನೋವೇಶನ್ ವಲಯಗಳಲ್ಲಿ ನಡೆದ ಸ್ಟಾರ್ಟ್ಅಪ್ ಉತ್ಪನ್ನ ಬಿಡುಗಡೆಯ ಎರಡನೇ ಆವೃತ್ತಿ ಇದಾಗಿದೆ. ಈ ಉಪಕ್ರಮವು ವೈವಿಧ್ಯಮಯ ಕೈಗಾರಿಕೆಗಳಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಮುಖ ಮುಖ್ಯಾಂಶಗಳು : ಸೆಕ್ಟರ್-ಆಗ್ನೋಟಿಕ್ ಇನೋವೇಷನ್: ಇಂದು ಬಿಡುಗಡೆ ಮಾಡಿದ ಉತ್ಪನ್ನಗಳಾದ ಐಟಿ/ಐಟಿಇಎಸ್, ಅಗ್ರಿ-ಟೆಕ್, ಮೆಡ್-ಟೆಕ್, ಹೆಲ್ತ್‌ಕೇರ್, ಕ್ಲೀನ್-ಟೆಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಡೀಪ್ ಟೆಕ್, ಬ್ಲಾಕ್‌ಚೇನ್, ಐಒಟಿ, ಸೈಬರ್ ಸೆಕ್ಯುರಿಟಿ, ಎನ್ವಿರಾನ್ಮೆಂಟ್ ಟೆಕ್, AVGC ಮತ್ತು ESDM ಸೇರಿದಂತೆ ಹಲವಾರು ಕ್ಷೇತ್ರಗಳನ್ನು ವ್ಯಾಪಿಸಿದೆ.
ಕೊಡುಗೆಗಳ ವೈವಿಧ್ಯತೆ : ವಿನೂತನ ಪರಿಹಾರಗಳ ಶ್ರೇಣಿಯಲ್ಲಿ, ಎಲೆಕ್ಟ್ರಾನಿಕ್ ಸಾಧನಗಳನ್ನು ಸಂಯೋಜಿಸುವ ಕೃತಕ ಬುದ್ಧಿಮತ್ತೆ (AI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT), ವಾಹನ ತಯಾರಿಕೆಯಲ್ಲಿನ ಪ್ರಗತಿ, ಪಾದರಕ್ಷೆ ಮತ್ತು ಪರಿಕರಗಳ ಆವಿಷ್ಕಾರ, ವಾಯುಪಡೆ ಮತ್ತು ಸೇನಾಪಡೆ ತಂತ್ರಜ್ಞಾನಗಳು, ಹೊರಹರಿವಿನ ವಾಯು ಸಂಸ್ಕರಣೆ, ಮೋಸದ ವಹಿವಾಟನ್ನು ನಿಯಂತ್ರಿಸುವ ಅಪ್ಲಿಕೇಶನ್‌ಗಳು, ಫ್ಯಾಬ್ರಿಕ್ ದೃಢೀಕರಣ ಉಪಕರಣಗಳು, ಅನಿಮೇಷನ್ ಮತ್ತು ಕಾಮಿಕ್ಸ್, ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಡೀಪ್ಟೆಕ್ ಆಧಾರಿತ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಹಲವು ಇನ್ನೊವೇಷನ್‌ಗಳು ಒಳಗೊಂಡಿವೆ.