ಕರ್ನಾಟಕ

karnataka

ETV Bharat / state

ಬಿಎಂಆರ್​ಸಿಎಲ್​ಗೆ 30 ಕೋಟಿ ರೂಪಾಯಿ‌ ಬಿಡುಗಡೆ ಮಾಡಿದ ಇನ್ಫೋಸಿಸ್ ಫೌಂಡೇಶನ್

ಜುಲೈ 2018 ರಂದು ಸಹಿ ಹಾಕಿದ ಒಪ್ಪಂದಕ್ಕೆ ಅನುಸಾರವಾಗಿ ಇನ್ಫೋಸಿಸ್ ಫೌಂಡೇಶನ್ ನಾಲ್ಕು ಕಂತುಗಳಲ್ಲಿ 100 ಕೋಟಿ ರೂಪಾಯಿಗಳನ್ನು ಪಾವತಿಸಲು ಒಪ್ಪಿದೆ. ಜುಲೈ 2018ರಲ್ಲಿ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಇಂದು 30 ಕೋಟಿ ರೂಪಾಯಿ ಹಣವನ್ನು  ಬಿಎಂಆರ್​ಸಿಎಲ್​ಗೆ ಬಿಡುಗಡೆ ಮಾಡಿದೆ.

sudha murthy
ಸುಧಾ ಮೂರ್ತಿ

By

Published : Dec 6, 2019, 9:23 PM IST

ಬೆಂಗಳೂರು:ಇನ್ಫೋಸಿಸ್ ಫೌಂಡೇಶನ್ ಮತ್ತು ಬಿಎಂಆರ್​ಸಿಎಲ್ ನಡುವೆ ಜುಲೈ 2018 ರಂದು ಸಹಿ ಹಾಕಿದ ಒಪ್ಪಂದಕ್ಕೆ ಅನುಸಾರವಾಗಿ, ಸಿಎಸ್‌ಆರ್(Corporate Social Responsibility) ಅನುದಾನ ಒಪ್ಪಂದ ನಾಮಕರಣ ಮತ್ತು ನಿರ್ವಹಣೆ ಮತ್ತು ಸಿಎಸ್ಆರ್ ಸೌಲಭ್ಯ ಒಪ್ಪಂದಗಳಿಗೆ ಇನ್ಫೋಸಿಸ್ ಫೌಂಡೇಶನ್ ಕಚೇರಿಯಲ್ಲಿ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸಹಿ ಹಾಕಿದ್ದಾರೆ.

ಜುಲೈ 2018 ರಂದು ಸಹಿ ಹಾಕಿದ ಒಪ್ಪಂದಕ್ಕೆ ಅನುಸಾರವಾಗಿ, ಇನ್ಫೋಸಿಸ್ ಫೌಂಡೇಶನ್ ನಾಲ್ಕು ಕಂತುಗಳಲ್ಲಿ 100 ಕೋಟಿ ರೂಪಾಯಿಗಳನ್ನು ಪಾವತಿಸಲು ಒಪ್ಪಿದೆ. ಜುಲೈ 2018ರಲ್ಲಿ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಇಂದು 30 ಕೋಟಿ ರೂಪಾಯಿ ಹಣ ಬಿಎಂಆರ್​ಸಿಎಲ್​ಗೆ ಬಿಡುಗಡೆ ಮಾಡಿದೆ.

ನಿಲ್ದಾಣಕ್ಕೆ‌ ಸಂಬಂಧಿಸಿದ ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ 30ಕೋಟಿ ರೂಗಳನ್ನು ಮತ್ತು ಉಳಿದ 30 ಕೋಟಿ ರೂಗಳನ್ನು ನಿಲ್ದಾಣದ ಪೂರ್ಣ ಕಾಮಗಾರಿ ನಂತರ ಡಿಸೆಂಬರ್ 31ರಂದು 2021 ರೊಳಗೆ ಬಿಎಂಆರ್​ಸಿಎಲ್ ಸಂಸ್ಥೆಗೆ ನೀಡಲಿದೆ.

ಸದ್ಯ ಮೆಟ್ರೋ ನಿಲ್ದಾಣವನ್ನು ಇನ್ಫೋಸಿಸ್ ಫೌಂಡೇಶನ್ ಸಂಸ್ಥೆ 30 ವರ್ಷದ ಅವಧಿಗೆ ನಿರ್ವಹಣೆ ಮಾಡಲು ಸಮ್ಮತಿಸಿದೆ ಎಂದು ಪ್ರಕಟಣೆ ಹೊರಡಿಸಿದೆ.

ABOUT THE AUTHOR

...view details