ದೇವನಹಳ್ಳಿ (ಬೆಂಗಳೂರು): ದಟ್ಟ ಮಂಜು ಕವಿದ ವಾತಾವರಣದಲ್ಲಿ ಮಂದ ಬೆಳಕಿನ ಕಾರಣಕ್ಕೆ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಧ್ಯವಿಲ್ಲ. ಆದರೆ ಕ್ಯಾಟ್ lll-ಬಿ ವ್ಯವಸ್ಥೆಯಲ್ಲಿ ದಟ್ಟ ಮಂಜು ಕವಿದ ವಾತಾವರಣ ಇದ್ದಾಗಲೂ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಬಹುದು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಕ್ಯಾಟ್ lll-ಬಿ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಇಂದು ದಟ್ಟ ಮಂಜಿನ ನಡುವೆಯೂ ಇಂಡಿಗೋ ವಿಮಾನ ಯಶಸ್ವಿಯಾಗಿ ಭೂ ಸ್ಪರ್ಷ ಮಾಡಿತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 07:41ರಲ್ಲಿ ರೇಡಿಯೇಷನ್ ಫಾಗ್ ಆವರಿಸಿತ್ತು. ಮಂಜು ಕವಿದ ವಾತಾವರಣದಿಂದಾಗಿ ದೃಶ್ಯ ಸಾಧ್ಯತೆ 200 ಮೀಟರ್ಗಳಿಗೆ ಇಳಿದಿತ್ತು. ಇಂತಹ ಸಮಯದಲ್ಲಿ ಲಕ್ನೋದಿಂದ ಬಂದ ಇಂಡಿಗೋ ವಿಮಾನ ಯಶಸ್ವಿಯಾಗಿ ಭೂಸ್ಪರ್ಶ ಮಾಡಿತು.
ರನ್ ವೇ ವಿಸಿಬಲ್ ರೇಂಜ್ 50 ಮೀಟರ್ಗಳಷ್ಟು ಕಡಿಮೆ ಇದ್ದಾಗಲೂ ದಕ್ಷಿಣ ರನ್‍ವೇಯಲ್ಲಿ ವಿಮಾನ ಇಳಿಯಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ವಿಮಾನ 125 ಮೀಟರ್ ಎತ್ತರದಲ್ಲಿ ಆಕಾಶಕ್ಕೆ ಹಾರಲು ಅವಕಾಶ ಮಾಡಿಕೊಡುತ್ತದೆ. ಕ್ಯಾಟ್ lll ಬಿ ವ್ಯವಸ್ಥೆಗೂ ಮುನ್ನ ವಿಮಾನ ಇಳಿಯಲು ರನ್ ವೇ ವಿಸಿಬಲ್ ರೇಂಜ್ 550 ಮೀಟರ್ ಮತ್ತು ವಿಮಾನ ಟೇಕಾಫ್ ಆಗಲು 300 ಮೀಟರ್ಗಳಷ್ಟಾಗಿತ್ತು.
ಇದನ್ನೂ ಓದಿ:ಏರ್ಪೋರ್ಟ್ ಹೆಲ್ತ್ ಅಕ್ರೆಡಿಟೇಶನ್ ಮಾನ್ಯತೆ ಪಡೆದ ಕೆಐಎಎಲ್