ಕರ್ನಾಟಕ

karnataka

ETV Bharat / state

ಶಿಕ್ಷೆ ಇಲ್ಲದೆ ಸುಧಾರಣೆ ಅಸಾಧ್ಯ.. ಪರಿಸರ ರಕ್ಷಣೆಗೆ ರಾಜ್ಯಪಾಲರ ಕರೆ

ಜನರಿಗೆ ಮನೆಯಲ್ಲೇ ಕಸ ವಿಂಗಡಿಸಿ, ಗೊಬ್ಬರ ಮಾಡುವ ಅರಿವು ಮೂಡಬೇಕು. ಕಸಕ್ಕೆ ಬೆಂಕಿ ಹಚ್ಚಬಾರದು. ಪರಿಸರ ರಕ್ಷಣೆ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಮನೆಯವರಲ್ಲೂ ಶಿಸ್ತು ತರುತ್ತಾರೆ ಎಂದರು.

By

Published : Jun 5, 2019, 9:52 PM IST

ರಾಜ್ಯಪಾಲ ವಜುಬಾಯಿ ವಾಲಾ

ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ 'ನಮ್ಮ ಕಸ ನಮ್ಮ ಜವಾಬ್ದಾರಿ' ಕಾರ್ಯಕ್ರಮವನ್ನು ರಾಜ್ಯಪಾಲ ವಜುಬಾಯಿ ವಾಲಾ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ರಾಜ್ಯಪಾಲರು, ಶಿಕ್ಷೆ ಇಲ್ಲದೆ ಸುಧಾರಣೆ ಸಾಧ್ಯ ಇಲ್ಲದಂತಾಗಿದೆ. ಜನರಿಗೆ ಮನೆಯಲ್ಲೇ ಕಸ ವಿಂಗಡಿಸಿ, ಗೊಬ್ಬರ ಮಾಡುವ ಅರಿವು ಮೂಡಬೇಕು. ಕಸಕ್ಕೆ ಬೆಂಕಿ ಹಚ್ಚಬಾರದು. ಪರಿಸರ ರಕ್ಷಣೆ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ಮನೆಯವರಲ್ಲೂ ಶಿಸ್ತು ತರುತ್ತಾರೆ ಎಂದರು.

ನಗರದಲ್ಲಿ 'ನಮ್ಮ ಕಸ ನಮ್ಮ ಜವಾಬ್ದಾರಿ' ಎಂಬ ಘೋಷವಾಕ್ಯದಡಿ ಪ್ರತೀ ಮನೆಯಲ್ಲಿ ಕಸ ವಿಂಗಡಿಸಿ ಸಂಸ್ಕರಣೆ ಮಾಡಲು ಬಿಬಿಎಂಪಿ ಪಣತೊಟ್ಟಿದೆ. ಇದಕ್ಕೆ ಅಧಿಕಾರಿಗಳಷ್ಟೇ ಜವಾಬ್ದಾರರಲ್ಲ, ಪ್ರತಿ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.

ರಾಜ್ಯಪಾಲ ವಜುಬಾಯಿ ವಾಲಾ

ರಾಜಭವನದಲ್ಲೇ ಕಸವನ್ನು ವಿಂಗಡಿಸಿ, ಕಾಂಪೋಸ್ಟ್ ಮಾಡುವ ಮೂಲಕ ರಾಜಭವನ ಇಡೀ ಬೆಂಗಳೂರಿಗೆ ಮಾದರಿಯಾಗಿದೆ. ಸದ್ಯ ನಗರದಲ್ಲಿ ಶೇ.75 ರಷ್ಟು ಕಸ, ಕ್ವಾರಿಗಳಿಗೆ ಹೋಗುವ ಮೂಲಕ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಬೆಂಗಳೂರಿನ ಪ್ರತಿಯೊಬ್ಬರೂ ಕ್ರಮವಹಿಸಬೇಕು ಎಂದು ಎನ್​ಜಿಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಸುಭಾಷ್ ಬಿ ಆದಿ ತಿಳಿಸಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಮಾತನಾಡಿ, ಕಸ ನಿರ್ವಹಣೆ ಸರಿಯಾಗಿ ಆಗದಿರುವುದಕ್ಕೆ ಸರ್ಕಾರ ಹಾಗೂ ನಾಗರಿಕರ ನಿರ್ಲಕ್ಷ್ಯವೇ ಕಾರಣ. ಸಾಕಷ್ಟು ನಿಯಮಗಳಿದ್ದರೂ ಯಾವುದೇ ಅನುಷ್ಠಾನವಾಗುತ್ತಿಲ್ಲ. ಮನೆಮನೆಗಳಲ್ಲೇ ಕಸ ವಿಂಗಡಣೆಯಾಗಿ ಸಂಸ್ಕರಣೆಯಾದರೆ, ದೊಡ್ಡ ಕ್ರಾಂತಿಯಾಗಲಿದೆ ಎಂದರು.

ABOUT THE AUTHOR

...view details