ಬೆಂಗಳೂರು:ಅಕ್ರಮವಾಗಿ ನುಗ್ಗಿ ವಾಸವಿದ್ದ ಬಾಡಿಗೆದಾರ ಮಹಿಳೆಗೆ 10 ರಿಂದ 15 ಜನರಿದ್ದ ಗುಂಪೊಂದು ಬೆದರಿಕೆ ಹಾಕಿ ತೊಂದರೆ ನೀಡಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು: ಮನೆಗೆ ನುಗ್ಗಿ ಬಾಡಿಗೆದಾರ ಮಹಿಳೆಗೆ ಆವಾಜ್ - ಅಕ್ರಮವಾಗಿ ನುಗ್ಗಿ ಬಾಡಿಗೆದಾರ ಮಹಿಳೆಗೆ ಬೆದರಿಕೆ
ಹೆಚ್ಬಿಆರ್ ಲೀಔಟ್ನಲ್ಲಿ ವಾಸವಿರುವ ಮಹಿಳೆಯ ಮನೆಗೆ 10 ರಿಂದ 15 ಜನರಿದ್ದ ಗುಂಪೊಂದು ನುಗ್ಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
Illegally rushed to house and threatening women
ಹೆಚ್ಬಿಆರ್ ಲೀಔಟ್ನಲ್ಲಿ ವಾಸವಿರುವ ಪರ್ವೀನ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಾಲೀಕರಿಲ್ಲದ ವೇಳೆ ಮಹಮ್ಮದ್ ಸಲೀಂ ಎಂಬಾತ ಸೇರಿ 12 ಕ್ಕೂ ಅಧಿಕ ಮಂದಿ ಮನೆಗೆ ನುಗ್ಗಿ ಮಹಿಳೆಗೆ ತೊಂದರೆ ನೀಡಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದರ ಕುರಿತಂತೆ ಖಚಿತ ಮಾಹಿತಿ ಇಲ್ಲ.
ಘಟನೆಯ ಸಂಬಂಧ ಮಹಿಳೆ, ಮಹಮ್ಮದ್ ಸಲೀಂ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ವಿಡಿಯೋಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.