ಬೆಂಗಳೂರು:ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಕುರಿಸುವ ವಿಚಾರವಾಗಿ ಇಂದು ಸುಪ್ರೀಂ ಅಂಗಳದಿಂದ ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆ ಈದ್ಗಾ ಮೈದಾನದ ಸುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗಣೇಶ ಮೂರ್ತಿ ಕೂರಿಸಲು ಅನುಮತಿ ಸಿಕ್ಕರೂ ಅಥವಾ ಸಿಗದಿದ್ದರೂ ಯಾವುದೇ ಅಹಿತಕರ ಘಟನೆ ನಡೆಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಪೊಲೀಸ್ ಸರ್ಪಗಾವಲು..ಭದ್ರತೆಗೆಗಾಗಿ ಮೂವರು ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್, 130 ಪಿಎಸ್ಐ, 126 ಎಎಸ್ಐ 900 ಕಾನ್ಸ್‌ಟೇಬಲ್ಸ್, ಆರ್ಎಎಫ್ 120, ಡಿಸ್ವಾಟ್ 100 ಸೇರಿ 1500 ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದಾರೆ. ಈ ಹಿನ್ನೆಲೆ ಚಾಮರಾಜಪೇಟೆ ಮೈದಾನ ಸುತ್ತಮುತ್ತ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದರು. ಸದ್ಯ ಚಾಮರಾಜಪೇಟೆ ಮೈದಾನದ ಸುತ್ತಲೂ ಬ್ಯಾರೀಕೇಡ್ ಹಾಕಿದ್ದು, ಒಂದು ಕಡೆ ಮಾತ್ರ ಮೈದಾನ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.