ಕರ್ನಾಟಕ

karnataka

ETV Bharat / state

ಗೃಹ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ IPS ಡಿ. ರೂಪಾ ಅಧಿಕಾರ ಸ್ವೀಕಾರ

ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆದ ‌ಖಾಸಗಿ ಆಸ್ಪತ್ರೆಗಳಿಂದ ಕೊರೊನಾ ಸೋಂಕಿತರಿಗೆ‌‌ ಹಣ ವಾಪಸ್‌ ಕೊಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದರು..

ಡಿ ರೂಪಾ ಅಧಿಕಾರ
ಡಿ ರೂಪಾ ಅಧಿಕಾರ

By

Published : Aug 5, 2020, 2:45 PM IST

Updated : Aug 5, 2020, 3:35 PM IST

ಬೆಂಗಳೂರು :ರೈಲ್ವೆ ಐಜಿಪಿಯಾಗಿದ್ದ ಡಿ ರೂಪಾ ಅವರನ್ನು ಸರ್ಕಾರ ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ. ಈ ಹುದ್ದೆಗೆ ಆಯ್ಕೆಯಾದ ಮೊದಲ‌ ಮಹಿಳಾ‌‌ ಐಪಿಎಸ್ ‌ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಈಗ ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಡಿ ರೂಪಾ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆ ಅವರ ಅಭಿಮಾನಿಗಳ ಬಳಗ ಅಭಿನಂದಿಸಿದೆ.

IAS officer D Rupa

ಇತ್ತಿಚ್ಚೆಗೆ ರೈಲ್ವೆ ಐಜಿಪಿಯಾಗಿದ್ದ ಸಮಯದಲ್ಲಿ ಕೊರೊನಾ ಸೋಂಕಿತರಿಂದ ಖಾಸಗಿ ಆಸ್ಪತ್ರೆಯವರು ಲೂಟಿ ಮಾಡುವ ಹಣಕ್ಕೆ ಬ್ರೇಕ್ ಹಾಕಲು ಸರ್ಕಾರ ಇವರ ವಿಶೇಷ ತಂಡ ರಚನೆ ಮಾಡಿತ್ತು. ಈ ವೇಳೆ ಕೊರೊನಾ ಸೋಂಕಿತರಿಂದ ಹೆಚ್ಚು ಹಣ ಪಡೆದ ‌ಖಾಸಗಿ ಆಸ್ಪತ್ರೆಗಳಿಂದ ಕೊರೊನಾ ಸೋಂಕಿತರಿಗೆ‌‌ ಹಣ ವಾಪಸ್‌ ಕೊಡಿಸುವುದರಲ್ಲಿ ಅವರು ಯಶಸ್ವಿಯಾಗಿದ್ದರು.

Last Updated : Aug 5, 2020, 3:35 PM IST

ABOUT THE AUTHOR

...view details