ಕೋಲಾರ:ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಐದಾರು ಶಾಸಕರ ಬೆಂಬಲ ಪಡೆಯುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಮುಕ್ತ ಕೋಲಾರ ಮಾಡುವುದಕ್ಕೆ ಶ್ರಮಿಸುತ್ತೇನೆ: ನೂತನ ಸಂಸದ ಮುನಿಸ್ವಾಮಿ - ಕೋಲಾರ
ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಐದಾರು ಶಾಸಕರ ಬೆಂಬಲ ಪಡೆಯುವುದಾಗಿ ನೂತನ ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.
ನೂತನ ಸಂಸದ ಎಸ್. ಮುನಿಸ್ವಾಮಿ
ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರುಗಳ ಹೆಸರುಗಳನ್ನು ಗೌಪ್ಯವಾಗಿರಿಸಿದ ಅವರು, 23ರ ನಂತರ ಆಗುವ ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಕಾದು ನೋಡಿ ಎಂದರು.
ಇಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡುವುದಾಗಿ ಹೇಳಿದ್ರು. ಜೊತೆಗೆ ಕಾಂಗ್ರೆಸ್ ಮುಕ್ತ ಕೋಲಾರ ಮಾಡುವುದಕ್ಕೆ ನಾನು ಶ್ರಮಿಸುತ್ತೇನೆಂದರು.