ಕರ್ನಾಟಕ

karnataka

ETV Bharat / state

ಈಗಾಗಲೇ ನಾನು ಜನರ ಹೃದಯ ಗೆದ್ದಿದ್ದೇನೆ : ಸುಮಲತಾ ಆತ್ಮವಿಶ್ವಾಸ

By

Published : Apr 4, 2019, 12:57 PM IST

Updated : Apr 4, 2019, 2:35 PM IST

ಸುದ್ದಿಗೋಷ್ಠಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ

2019-04-04 12:51:33

ಸುದೀಪ್​ ನನಗೆ ಆಪ್ತರು; ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್​ ಮಾಡಲ್ಲ

sumalatha
  • ಈಗಾಗಲೇ ಜನರ ಹೃದಯ ಗೆದ್ದಿದ್ದೇನೆ 
  • ಸುದೀಪ್​ ನನಗೆ ಆಪ್ತರೇ. ಆದರೆ, ನಾನು ಯಾರನ್ನೂ ಪ್ರಚಾರಕ್ಕಾಗಿ ಫೋರ್ಸ್​ ಮಾಡಲ್ಲ
  • ಮಂಡ್ಯ ಇತಿಹಾಸಕ್ಕೆ ಬಂದರೆ ಕಾವೇರಿ ದೊಡ್ಡ ಸಮಸ್ಯೆ
  • ನಾನು ಗೆದ್ದರೆ ಇದರ ಬಗ್ಗೆ ವಾಯ್ಸ್​ ಮಾಡಲು ಮುಂದಾಗುತ್ತೇನೆ 
  • ಇದು ತುಂಬಾ ದೊಡ್ಡ ವಿಷಯ, ಜತೆಗೆ ಕಬ್ಬುಬೆಳೆಗಾರರ ಸಮಸ್ಯೆ ಬಗೆಹರಿಸಲು ಕೂಡ ಮುಂದಾಗುವೆ 
  • ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ಹಾಗೂ ಅವರ ರಕ್ಷಣೆ  ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತೇನೆ
  • ರಾಜಕಾರಣ ಅಂತಾ ಬಂದ ಮೇಲೆ ಕೆಲವರು ಕೆಲ ಸ್ಟಾಸ್ಟರ್ಜಿ ಅಡಾಪ್ಟ್​ ಮಾಡಿಕೊಳ್ಳುತ್ತಾರೆ
  • ಅಂಬರೀಶ್​ ಜತೆ ಜನರ ಸಂಪರ್ಕ ಹೇಗಿತ್ತು ನನಗೂ ಹಾಗೇ ಇದೆ
  • ಕೇಂದ್ರದ ಅನುದಾನವನ್ನು ಸಾಮಾನ್ಯರಿಗೂ ತಲುಪಿಸಬಹುದು ಎಂಬುದನ್ನು ತೋರಿಸಿದವರು ಅಂಬರೀಶ್​ 
  • ನನಗೆ ಹೆಚ್ಚಿನ ತಾಳ್ಮೆ ಇದೆ, ಹೀಗಾಗಿಯೇ ನಾನು ಯಾರನ್ನೂ ವಿರೋಧ ಮಾಡಲು ಮುಂದಾಗಿಲ್ಲ
  • ಭಾರತ ದೇಶದ ಸಂಸ್ಕೃತಿಯನ್ನು ನಾವು ಫಾಲೋ ಮಾಡುತ್ತಿದ್ದೇವೆ
  • ಜೆಡಿಎಸ್​ಗೆ ಟಾಂಗ್​ ನೀಡಿದ ಸುಮಲತಾ
  • ಜಾತಿ ವಿಷಯ ಇಟ್ಟುಕೊಂಡು ರಾಜಕೀಯ ಮಾಡೋದನ್ನು ಖಂಡಿಸಬೇಕು 
  • ಇದನ್ನು ಮಾಧ್ಯಮದವರು ಖಂಡಿಸಿ ಇದನ್ನು ವಿರೋಧಿಸಬೇಕು
  • ಅವರು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ
  • ರಾಜಕಾರಣ ಇರಲಿ ಹೋಗಲಿ ಅದರ  ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ
  • ಜನ ಕೇಳಿದ್ದಾರೆ ನಾನು ಸ್ಫರ್ಧೆ ಮಾಡಬೇಕೆಂದು ಈ ಕಾರಣಕ್ಕಾಗಿ ನಾನು ಸ್ಫರ್ಧೆ ಮಾಡುತ್ತಿದ್ದೇನೆ
  • ಈ ನಿರ್ಧಾರದಿಂದ ಸಿನಿಮಾ ರಂಗದಲ್ಲಿ ಯಾವುದೇ ಒಡಕು ಉಂಟಾಗಿಲ್ಲ
  • ನಾನು ಅವರ ಹಾಗೆ ಮಾತನಾಡಿದರೆ ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ
  • ರಾಜಕೀಯವನ್ನು ಅವರು ವೈಯುಕ್ತಿಕವಾಗಿ ತೆಗೆದುಕೊಂಡು ಏನೇನೋ ಮಾತನಾಡುತ್ತಿದ್ದಾರೆ
  • ತಾಳ್ಮೆ ಇಲ್ಲದೆ ಅಂಬರೀಶ್​ ನಿಭಾಯಿಸಿಕೊಂಡು ಬರುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ
  • ಇದು ಕಠಿಣ ಸ್ಫರ್ಧೆ ಎಂದು ಗೊತ್ತಾದಾಗ ಬಿಜೆಪಿ ಸಹಾಯಕ್ಕಾಗಿ ನಾನು ಮುಂದಾದೆ
  • ಯಶ್​, ದರ್ಶನ್​ ಬಗ್ಗೆ ಪ್ರತಿಕ್ರಿಯೆ
  • ಚಿರಂಜೀವಿ,ರಜನಿಕಾಂತ್​ ಬರುತ್ತಾರೆ ಎನ್ನುವುದು ಊಹಾಪೋಹ
  • ದರ್ಶನ್​ ಯಶ್​ ಸ್ಟಾರ್ಸ್​ ಆಗಿ ನನಗೆ ಪ್ರಚಾರಕ್ಕೆ ಬರುತ್ತಿಲ್ಲ
  • ಅವರು ನನ್ನ ಮಕ್ಕಳ ಸಮಾನರಾಗಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ
  • ಯಶ್​, ದರ್ಶನ್​ ಅಭಿಮಾನಿಗಳು ನೂರಕ್ಕೆ ನೂರು ಮತ ಹಾಕುತ್ತಾರೆ ಎನ್ನುವ ನಂಬಿಕೆ ಇಲ್ಲ
  • ವಿರುದ್ಧವಾಗಿ ನನಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ನನಗಿದೆ
  • ಇಷ್ಟೊಂದು ಬೆಂಬಲ ನನಗೆ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ
  • ಶಿವರಾಮೇಗೌಡರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ
  • ಅವರಿಗೆ ಪ್ರೆಸ್ರ್ಟೇಷನ್​ ಏನಾದರು ಇರಬಹುದು
  • ಅಂಬರೀಶ್​ ಅವರು ಯಾವುದೇ ಚುನಾವಣೆಯಲ್ಲೂ ವಿರೋಧ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ
  • ರಾಜಕಾರಣದಲ್ಲಿ ನಾನು ಕಾಳಿ ಆಗುವುದಿಲ್ಲ
  • ಅಭಿಷೇಕ್​ ಚಿತ್ರರಂಗದಲ್ಲಿ ಸಾಧನೆ ಮಾಡಬೇಕಿದೆ, ಅವನು ಇನ್ನೂ ಕಷ್ಟಪಡಬೇಕಿದೆ
  • ನಾನು ಯಾರ ಜತೆ ಫೈಟ್​ ಮಾಡುತ್ತಿದ್ದೇನೆ ಎನ್ನುವುದು ಸುಲಭದ ಮಾತಲ್ಲ, ಇದು ನನಗೆ ಕಠಿಣ ಆಯ್ಕೆ ಆಗಿದೆ
  • ನಾನು ಕಾಂಗ್ರೆಸ್​ ಪಕ್ಷ ಸೇರಬಹುದಿತ್ತು, ಅದರಲ್ಲೂ ಜೆಡಿಎಸ್​ ಕೂಡ ಸಪೋರ್ಟ್​ ಮಾಡುತ್ತೇನೆ ಎಂದು ತಿಳಿಸಿತ್ತು
  • ನನಗೆ ಬಿಜೆಪಿ ಸಹಾಯ ಮಾಡುತ್ತದೆ ಎಂದು ಅಂದುಕೊಂಡರಲಿಲ್ಲ
  • ರಾಜಕೀಯ ಬೆಳವಣಿಗೆಯಿಂದಾಗಿ ಬಿಜೆಪಿ ಈಗ ನನಗೆ ಬೆಷರತ್​ ಬೆಂಬಲವನ್ನು ನೀಡಿದೆ
  • ನಾನು ಗೆದ್ದರೆ ನನ್ನ ಜನ ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ.
  • ಕಾಂಗ್ರೆಸ್​ ಕಾರ್ಯಕರ್ತರ ಅಳಿವು ಉಳಿವಿನ ಪ್ರಶ್ನೆ ಮಂಡ್ಯದಲ್ಲಿ ನಿರ್ಮಾಣವಾಗಿದೆ
  • ಎಲ್ಲಿ ಓಟ್​ ಜಾಸ್ತಿ ಬರುತ್ತೋ ಅಲ್ಲಿ ಮಾತ್ರ ಕಾಂಗ್ರೆಸ್​ ಅಭಿವೃದ್ಧಿ ಕೆಲಸ ಮಾಡುತ್ತಿತ್ತು
  • ನಾನು ಹಾಕುವ ಹೆಜ್ಜೆಯಿಂದ ನನ್ನ ಸಂಬಂಧಿಕರನ್ನು ದೂರ ಮಾಡಿಕೊಂಡೆ ಎಂಬ ಮನಸ್ಥಿತಿ ನನ್ನಲ್ಲಿತ್ತು
  • ಅಂಬರೀಶ್​ ಯಾರನ್ನೂ ವಿರೋಧ ಮಾಡಿಕೊಂಡಿರಲಿಲ್ಲ,  
  • ನಾನು ನಾಮಪತ್ರ ಸಲ್ಲಿಸುವವರೆಗೂ ಅತ್ತಿದ್ದೇನೆ 
  • ಈ ನಿರ್ಧಾರದಿಂದ ನನಗೆ, ನನ್ನ ಮಗನಿಗೆ ಏನಾದರೂ ಎಫೆಕ್ಟ್​ ಆಗುತ್ತಾ ಅಂತಾ ಚಿಂತೆ ಮಾಡುತ್ತಿದ್ದೆ
  • ಈಗ ನನಗೆ ಛಲ ಬಂದಿದೆ ನಾನು ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತೇನೆ 
  • ತಮ್ಮ ಬಾಲ್ಯದ ದಿನಗಳನ್ನು ನೆನೆದ ಸುಮಲತಾ
  • ನಾನು ನನ್ನ ತಂದೆಯನ್ನು ಬಾಲ್ಯದಲ್ಲಿಯೇ ಕಳೆದುಕೊಂಡೆ
  • ನನ್ನ ತಾಯಿಗೆ ಐವರು ಮಕ್ಕಳು
  • ಇಡೀ ರಾಜ್ಯದಲ್ಲಿ ಬರೀ ಮಂಡ್ಯ ಮಾತ್ರ ಪ್ರಚಾರವಾಗುತ್ತಿದೆ ಇದಕ್ಕೆ ಕಾರಣ ಅಂಬರೀಶ್​
  • ಹಲವರು ಹೇಳುತ್ತಿದ್ದಾರೆ ನೀವು ಹೇಗೆ ಗೆಲ್ಲುತ್ತೀರಾ ಎಂದು?
  • ಸ್ಫರ್ಧೆ ಮಾಡಲು ಧೈರ್ಯ ಹೇಗೆ ಬಂತು ಎಂದು ನನಗೇ ಗೊತ್ತಿಲ್ಲ
  • ಬಡವರಿಗೆ ಮನೆ ಕಟ್ಟಿಸಿಕೊಡುವುದು ಭಾಗ್ಯ ಎಂದು ಅಂಬರೀಶ್​ ಹೇಳುತ್ತಿದ್ದರು
  • ಅಭಿವೃದ್ಧಿಯ ದಾರಿಯಲ್ಲಿ ಹೆಜ್ಜೆ ಹಾಕುವುದಕ್ಕೆ ಸಿದ್ಧಳಾಗಿದ್ದೇನೆ
  • ನನ್ನ ಜೀವನದಲ್ಲಿ ಈ ಹೆಜ್ಜೆ ಸವಾಲಾಗಿದೆ,ಆತ್ಮವಿಶ್ವಾಸ ಕೂಡ ನನಗಿದೆ
  • ಎಂಪಿ ಆಗಿ ಮಂಡ್ಯ ಅಭಿವೃದ್ಧಿಗೆ ಏನೆಲ್ಲಾ ಅಭಿವೃದ್ಧಿ ಮಾಡಬಹುದು ಅದನ್ನು ನಾನು ಮಾಡುತ್ತೇನೆ
  • ಬಿಜೆಪಿ ನನಗೆ ಬೆಂಬಲ ಸೂಚಿಸಿದೆ, ಇದಕ್ಕೂ ಮೊದಲು ರಾಜ್ಯ ರೈತ ಸಂಘ ಕೂಡ ಬೆಂಬಲ ಸೂಚಿಸಿದೆ
  • ನನ್ನ ಪರ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರೂ ಕೂಡ ಇದ್ದಾರೆ
Last Updated : Apr 4, 2019, 2:35 PM IST

ABOUT THE AUTHOR

...view details