ಕರ್ನಾಟಕ

karnataka

By

Published : Jul 20, 2019, 2:33 PM IST

ETV Bharat / state

ನನಗೆ ಡಿಸಿಎಂ ಹುದ್ದೆ ಬೇಡ: ರಾಮಲಿಂಗಾರೆಡ್ಡಿ

ನಾನು ಆಗಾಗ ದೇವೇಗೌಡರನ್ನ ಭೇಟಿ ಆಗ್ತಿದ್ದೆ. ಹಾಗೆಯೇ ಇವತ್ತು ಭೇಟಿಯಾಗಿದ್ದೇನೆ. ಅಲ್ಲದೆ ಇಂದಿನ‌‌ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಯಾವ ಅತೃಪ್ತರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದರು.

ರಾಮಲಿಂಗಾರೆಡ್ಡಿ

ಬೆಂಗಳೂರು: ದೇವೇಗೌಡರ ಜೊತೆ ಸಭೆಯಲ್ಲಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಆಗಿಲ್ಲ. ಅಲ್ಲದೆ ನನಗೆ ಡಿಸಿಎಂ ಹುದ್ದೆ ಬೇಡ ಹಾಗೂ ಜೆಡಿಎಸ್, ಕಾಂಗ್ರೆಸ್ ಅತೃಪ್ತರ ಮನವೊಲಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ಪದ್ಮನಾಭ ನಗರದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿ ಅಷ್ಟೆ. ನಾನು ಆಗಾಗ ದೇವೇಗೌಡರನ್ನ ಭೇಟಿ ಆಗ್ತಿದ್ದೆ. ಹಾಗೆಯೇ ಇವತ್ತು ಭೇಟಿಯಾಗಿದ್ದೇನೆ. ಅಲ್ಲದೆ ಇಂದಿನ‌‌ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಯಾವ ಅತೃಪ್ತರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದರು.

ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ

ಎಸ್ ಟಿ ಸೋಮಶೇಖರ್ ಹೇಳಿದ ಎಲ್ಲಾ ಮಾತು ಸತ್ಯ. ನಾವು ಒಟ್ಟಾಗಿ ರಾಜೀನಾಮೆ ಕೊಟ್ಡಿದ್ದೆವು. ಆದರೆ ನಮ್ಮ ನಾಯಕರ ಒತ್ತಡ, ಜನರ ಒತ್ತಡದಿಂದ ರಾಜೀನಾಮೆ ವಾಪಸ್ ಪಡೆದೆ‌. ಕಳೆದ ಭಾನುವಾರ ನಾನು ಸೋಮಶೇಖರ್ ಜೊತೆ ಮಾತಾಡಿದ್ದೆ. ಆನಂತರ ನನ್ನ ಸಂಪರ್ಕಕ್ಕೆ ಅವರು ಸಿಗಲಿಲ್ಲ. ಎಂಟಿಬಿ ನಾಗರಾಜ್ ಹೇಳಿಕೆಗೂ ನನಗೂ ಸಂಬಂಧವಿಲ್ಲ. ನಾನು ಎಂಟಿಬಿ ನಾಗರಾಜ್ ಭೇಟಿಯಾಗಿಲ್ಲ. ವಿಶ್ವನಾಥ್ ಅವರನ್ನ ಒಂದು ಸಾರಿ ಭೇಟಿ ಆಗಿದ್ದೆ ಅಷ್ಟೆ. ನನಗೆ ಡಿಸಿಎಂ ಹುದ್ದೆ ಬೇಕಾಗಿಲ್ಲ. ನಮ್ಮ ಪಕ್ಷದಲ್ಲಿ ಬಿಜೆಪಿಯಲ್ಲಿ ಅನೇಕ ಜನ ಡಿಸಿಎಂ ಆಗಬೇಕು ಅಂತ ಇದ್ದಾರೆ. ನನಗೆ ಯಾವುದೇ ಆಸೆ ಇಲ್ಲ, ಡಿಸಿಎಂ ಹುದ್ದೆ ಕೊಟ್ಟರೂ ನನಗೆ ಬೇಡ.ಎಂದು ರಾಮಲಿಂಗಾರೆಡ್ಡಿ ಹೇಳಿದರು.

For All Latest Updates

TAGGED:

ABOUT THE AUTHOR

...view details