ಕರ್ನಾಟಕ

karnataka

ETV Bharat / state

ಮೂರು ಪಕ್ಷಗಳು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳೆಷ್ಟು..?

ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಇದಕ್ಕಾಗಿ ಆಯಾ ಪಕ್ಷಗಳು ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿವೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಇದ್ದು, ಅದರ ಮಾಹಿತಿ ಇಲ್ಲಿದೆ..

Congress  BJP  JDS
ಕಾಂಗ್ರೆಸ್, ಜೆಡಿಎಸ್​, ಬಿಜೆಪಿ

By

Published : Apr 15, 2023, 7:35 PM IST

ಬೆಂಗಳೂರು:ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿರುವ ಬೆನ್ನಲ್ಲೇ ಮೂರು ಪಕ್ಷಗಳ ಟಿಕೆಟ್ ಹಂಚಿಕೆ ಸಹ ಜೋರಾಗಿಯೇ ಇದೆ. ಮೂರು ಪಕ್ಷಗಳಲ್ಲೂ ಟಿಕೆಟ್ ಹಂಚಿಕೆ ವೇಳೆ ಗೊಂದಲಗಳು ಉಂಟಾಗಿದ್ದು, ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದೆಂಬ ಗೊಂದಲದಲ್ಲಿ ನಾಯಕರು ಸಿಲುಕಿದ್ದಾರೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದರೆ, ಎರಡನೇ ಪಟ್ಟಿಯಲ್ಲಿ 42 ಮಂದಿಗೆ, ಇಂದು 43 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟಾರೆ 209 ಮಂದಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಹೆಸರಲ್ಲಿ 5 ಕೋಟಿ ರೂ. ಸಾಲ.. ಸ್ವಂತ ಕಾರು ಇಲ್ವಂತೆ!

ಘೋಷಣೆ ಆಗದೆ ಬಾಕಿ ಉಳಿದ ಕ್ಷೇತ್ರಗಳು:ಬೆಂಗಳೂರಿನ ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು, ರಾಯಚೂರು ನಗರ, ಶಿಗ್ಗಾಂವ್, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸೂರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಹುಬ್ಬಳ್ಳಿ ಧಾರವಾಡ ವೆಸ್ಟ್, ಮಂಗಳೂರು ಉತ್ತರ, ಶಿಡ್ಲಘಟ್ಟ, ಚಿಕ್ಕಮಗಳೂರು, ಕೆ.ಆರ್. ಪುರಂ, ಹರಿಹರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಐವರಿಗೆ ಟಿಕೆಟ್ ಘೋಷಣೆ

12 ಕ್ಷೇತ್ರ ಉಳಿಸಿಕೊಂಡ ಬಿಜೆಪಿ:ಇನ್ನು ಬಿಜೆಪಿ ಮೊದಲ ಪಟ್ಟಿಯಲ್ಲೇ 189 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಈಗಾಗಲೇ 212 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಗೊಂದಲ ಇರುವ 12 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಇದನ್ನೂ ಓದಿ:ಬಿಜೆಪಿಯ ಸಂಭಾವ್ಯ ಸಿಎಂ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದಂತೆ ಪ್ರಹ್ಲಾದ ಜೋಶಿ ಮಾಡಿದ್ದಾರೆ; ಯು ಟಿ ಖಾದರ್

ಘೋಷಣೆಯಾಗದ ಕ್ಷೇತ್ರಗಳು: ಬೆಂಗಳೂರು ವ್ಯಾಪ್ತಿಗೆ ಸೇರುವ ಮಹದೇವಪುರ, ಗೋವಿಂದರಾಜ ನಗರ, ಹೆಬ್ಬಾಳ, ಮೈಸೂರಿನ ಕೃಷ್ಣರಾಜ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಶಿವಮೊಗ್ಗ, ನಾಗಠಾಣ, ಸೇಡಂ, ಮಾನ್ವಿ, ಕೊಪ್ಪಳ, ರೋಣ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ.

ಇದನ್ನೂ ಓದಿ:ಮೈಸೂರಿನ ಎರಡು ಪ್ರಮುಖ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಆಪ್ತರಿಗೆ ಮಣೆ: ಮಾಜಿ ಶಾಸಕ ವಾಸು ಬಂಡಾಯ?

ಜೆಡಿಎಸ್ ಉಳಿಸಿಕೊಂಡಿರುವುದೆಷ್ಟು?:ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆಗುವ ಮುನ್ನವೇ ಜೆಡಿಎಸ್ ತನ್ನ ಮೊದಲ ಪಟ್ಟಿ 93 ಅಭ್ಯರ್ಥಿಗಳ ಹೆಸರುಗಳನ್ನು ಜೆಡಿಎಸ್ ಘೋಷಿಸಿತ್ತು. ನಿನ್ನೆ ಮತ್ತು ಇಂದು 56 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಒಟ್ಟು 149 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದಂತಾಗಿದೆ. ಇನ್ನೂ 75 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಬೇಕಿದೆ. ಪ್ರಮುಖವಾಗಿ ಅರಸೀಕೆರೆ, ಬೆಂಗಳೂರಿನ ಪುಲಿಕೇಶಿನಗರ, ಮೈಸೂರಿನ ಚಾಮರಾಜ ಸೇರಿದಂತೆ 75 ಕ್ಷೇತ್ರಗಳನ್ನು ಜೆಡಿಎಸ್ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಉಳಿಸಿಕೊಂಡಿರುವ ಕ್ಷೇತ್ರಗಳ ಪಟ್ಟಿ ಬಿಡುಗಡೆಗಾಗಿ ಜೆಡಿಎಸ್ ಕಾಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್​

ABOUT THE AUTHOR

...view details