ಬೆಂಗಳೂರು:ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುದುರೆ ರೇಸ್ ಅಕ್ರಮ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಲೈಸನ್ಸ್ ಇಲ್ಲದೆ ರೇಸ್ ಕೋರ್ಸ್ ನ ಗೇಟ್ ನಂಬರ್ ಎರಡರಲ್ಲಿ ಜೂಜಾಟ ಆಡಿಸುತ್ತಿದ್ದ 11 ಜನ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬುಕ್ ಮೇಕರ್ಸ್ ಲೈಸನ್ಸ್ ಪಡೆಯದೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಬಂಧಿತರಿಂದ 2,56,500 ರೂ. ವಶಕ್ಕೆ ಪಡೆಯಲಾಗಿದೆ.