ಬೆಂಗಳೂರು:ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 22 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳು ಅಂದರ್ - ಕುದುರೆ ರೇಸ್ ಬೆಟ್ಟಿಂಗ್ ಮೂವರು ಆರೋಪಿಗಳ ಬಂಧನ
ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುರೇಶ್, ಮಂಜುನಾಥ್ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು
ಸುರೇಶ್, ಮಂಜುನಾಥ್ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಶಾಮಯ್ಯ ಬಡಾವಣೆ ಬಳಿ ಕುದುರೆ ರೇಸ್ ಕೌಂಟಿಂಗ್ ಮುಂಭಾಗ ಅನಧಿಕೃತವಾಗಿ ಕುದುರೆ ರೇಸ್ ಬೆಟ್ಟಿಂಗ್ ಮೂಲಕ ಜೂಜಾಟ ಆಡುತ್ತಿದ್ದರು ಎನ್ನಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 22 ಸಾವಿರ ರೂ.ನಗದು, ಕುದುರೆ ರೇಸ್ ಬೆಟ್ಟಿಂಗ್ ವಿವರವಿರುವ 4 ಲೆಕ್ಕ ಪುಸ್ತಕಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.