ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್: ಬೈಕ್​ ಸವಾರ ಸಾವು, ಓರ್ವನ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಹಿಟ್​ ಅಂಡ್​ ರನ್ ಪ್ರಕರಣ - ವೇಗವಾಗಿ ಬಂದ ಕಾರು ಬೈಕ್​ಗೆ ಡಿಕ್ಕಿ - ಸವಾರ ಸಾವು, ಓರ್ವನ ಸ್ಥಿತಿ ಗಂಭೀರ

bengaluru
ಹಿಟ್ ಅಂಡ್ ರನ್

By

Published : Feb 6, 2023, 8:19 PM IST

Updated : Feb 6, 2023, 8:45 PM IST

ಬೆಂಗಳೂರು: ರಾಜಧಾನಿಯಲ್ಲಿ‌ ಮತ್ತೊಂದು ಹಿಟ್ ಅಂಡ್‌ ರನ್‌ ಪ್ರಕರಣ ವರದಿಯಾಗಿದೆ. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಚಲಿಸುತ್ತಿದ್ದ ಬೈಕ್ ಸವಾರನ ತಲೆ ಮೇಲೆ ಕಾರು ಹರಿದ ಪರಿಣಾಮ ಆತ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಾಸಕರೊಬ್ಬರ ಸ್ಟಿಕ್ಕರ್ ಇರುವ ಕಾರು ವೇಗವಾಗಿ ಬಂದು ಬೈಕ್ ಸವಾರ ಮಜಿದ್‌ ಖಾನ್ (39) ಎಂಬವರನ್ನು ಬಲಿ ಪಡೆದಿದೆ. ಎಚ್ ಎಸ್ ಆರ್ ಲೇಔಟ್ ನಿವಾಸಿಯಾಗಿರುವ ಮಜಿದ್ ಅಟೊ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಇಂದು ಮಧ್ಯಾಹ್ನ ಮನೆಗೆ ಹೋಗಲು ಬೈಕ್​ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಗುದ್ದಿದೆ‌.

ಸ್ಥಳೀಯರ ನೆರವಿನಿಂದ ಮಜಿದ್ ಹಾಗೂ ಹಿಂಬದಿ ಸವಾರ ರಿಯಾಜ್ ಎಂಬುವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು‌‌. ತಲೆ ಮೇಲೆ ಕಾರು ಹರಿದು ಗಾಯಗೊಂಡಿದ್ದ ಮಜಿದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ರಿಯಾಜ್​ಗೆ ಚಿಕಿತ್ಸೆ ನಡೆಯುತ್ತಿದೆ. ಇನೋವಾ ಕಾರು ರಾಮು ಸುರೇಶ್ ಹೆಸರಿನಲ್ಲಿದ್ದು, ಹಿಟ್ ರನ್ ಮಾಡಿ‌ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಶಾಲಾ ಬಸ್​ ಚಾಲಕನಿಗೆ ಹಠಾತ್ ಹೃದಯಾಘಾತ: ಸ್ಟೇರಿಂಗ್ ಕಂಟ್ರೋಲ್​ ಮಾಡಿ ದುರಂತ ತಪ್ಪಿಸಿದ ವಿದ್ಯಾರ್ಥಿನಿ

ಹಿಟ್​ ರನ್​ ಪ್ರಕರಣದಲ್ಲಿ ಯೂಟ್ಯೂಬರ್​ ಅರೆಸ್ಟ್:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಹಿಟ್​ ಅಂಡ್​ ರನ್​ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದ ಆರೋಪಿ ಮ್ಯಾಡ್​ ಇನ್​ ಕುಡ್ಲ ಹೆಸರಿನ ಯೂಟ್ಯೂಬರ್​ ಅರ್ಪಿತ್​ ಅನ್ನು ಪೊಲೀಸರು ವಾಹನ ಸಮೇತ ಫೆಬ್ರವರಿ 4ರಂದು ಬಂಧಿಸಿದ್ದರು.

ಈತ ಜನವರಿ 31 ಮಂಗಳವಾರದಂದು ರಾತ್ರಿ 1 ಗಂಟೆಯ ಸುಮಾರಿಗೆ ಅರ್ಪಿತ್​ ಅತಿವೇಗದ ಚಾಲನೆ ಮತ್ತು ಅಜಾಗರೂಕತೆಯಿಂದಾಗಿ ಹಿಟ್​ ಅಂಡ್​ ರನ್​ ನಡೆದಿದಿದ್ದು, ಇಬ್ಬರು ಬಲಿಯಾಗಿದ್ದರು. ಜೊತೆಗಿದ್ದ ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಮುಲ್ಕಿ ಪೊಲಿಸರು ಅರ್ಪಿತ್​ ಅನ್ನು ಎರಡು ದಿನದ ಹಿಂದೆಯಷ್ಟೇ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ಹಿಟ್​ ರನ್​ ಪ್ರಕರಣ:ವಿದ್ಯಾರ್ಥಿನಿಯೊಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಘಟನೆ ಕೆಂಗೇರಿ ಮುಖ್ಯರಸ್ತೆಯ ಆರ್​ವಿ ಕಾಲೇಜು ಬಳಿ ಫೆಬ್ರವರಿ 2 ರಂದು ನಡೆದಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಆರ್​ವಿ ಕಾಲೇಜು ಕಡೆಯಿಂದ ಬಿಐಎಂಎಸ್ ಕಾಲೇಜು ಕಡೆಗೆ ರಸ್ತೆ ದಾಟುತ್ತಿದ್ದ ಸ್ವಾತಿಗೆ ಕೆಂಗೇರಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿತ್ತು. ಪರಿಣಾಮ ವಿದ್ಯಾರ್ಥಿನಿ ಸ್ವಾತಿಯ ತಲೆ, ಮೈ-ಕೈಗೆ ತೀವ್ರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಸ್ವಾತಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ:ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.. ಕಲಬುರಗಿಯಲ್ಲಿ ಹುಚ್ಚಾಟ ಮೆರೆದ ವ್ಯಕ್ತಿ‌ ಮೇಲೆ ಪೊಲೀಸ್​ ಫೈರಿಂಗ್‌

Last Updated : Feb 6, 2023, 8:45 PM IST

ABOUT THE AUTHOR

...view details