ಬೆಂಗಳೂರು:ಆದಾಯ ತೆರಿಗೆ ಇಲಾಖೆ ಹಾಗೂ ಇಡಿ ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣಗಳ ರದ್ದತಿ ಕೋರಿ ಮಾಜಿ ಸಚಿವ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನ ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪನ್ನ ಕಾಯ್ದಿರಿಸಿದೆ.
ಈ ತಿಂಗಳ 28ರಂದು ತೀರ್ಪನ್ನ ಪ್ರಕಟಿಸಲಾಗುವುದು ಎಂದು ವಿಚಾರಣೆಯನ್ನ ಅಂತ್ಯಗೊಳಿಸಿದ ಬಳಿಕ ನ್ಯಾಯಾಲಯ ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ತಿಳಿಸಿದೆ.
ಕಳೆದ ವಿಚಾರಣೆ ವೇಳೆ ಡಿ ಕೆ ಶಿವಕುಮಾರ್ ಪರ ಕಪಿಲ್ ಸಿಬಲ್ ವಾದ ಮಂಡನೆ ಮಾಡಿ ಎರಡು ಸೆಕ್ಷನ್ಗಳಡಿ ಡಿ ಕೆಶಿ ವಿರುದ್ಧ ಐಟಿ ಕೇಸ್ ದಾಖಲಾಗಿದೆ. ಒಂದು 276 C, 277 ಐಟಿ ಸೆಕ್ಷನ್ ಇದು ಇಡಿ ವ್ಯಾಪ್ತಿಗೆ ಬರುವುದಿಲ್ಲ. ಆದ್ರೆ ಇಡಿ 276 C, 277, 120 ಬಿ ಒಳಸಂಚು ಅಡಿ ತನಿಖೆ ಮಾಡುತ್ತಿದೆ. 120 ಬಿ ಬಿಟ್ಟು ಉಳಿದ ಕೇಸ್ ಇಡಿ ವ್ಯಾಪ್ತಿಗೆ ಬರುವುದಿಲ್ಲ. 120 ಬಿ ಕೂಡ ಸ್ವತಂತ್ರ ಅಪರಾಧ ಆಗುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುವ ಹಂತವಿನ್ನೂ ತಲುಪಿಲ್ಲ, ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದ್ದು ಸರಿಯಲ್ಲ. ಇಡಿಗೆ ಕೇಸ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವೇ ಇಲ್ಲ. ಹೀಗಾಗಿ ಇಡಿ ದಾಖಲಿಸಿರುವ ದೂರನ್ನ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ರು.